21st November 2024
Share

TUMAKURU:SHAKTHIPEETA FOUNDATION

  ಸಂಸದರ ಆದರ್ಶ ಗ್ರಾಮದ ಯೋಜನೆಯ ತಾಜಾ ಮಾಹಿತಿ, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳ ಜನತೆಗೂ ಬೆರಳತುದಿಯಲ್ಲಿ ದೊರೆಯುವಂತಾಗ ಬೇಕು. ಈ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿಗಳಿಗೂ, ಅವರವರ ಇಲಾಖೆಯ ಯೋಜನೆಗಳ ಮತ್ತು ಸ0ಪೂರ್ಣವಾಗಿ ಸಂಸದರ ಆದರ್ಶ ಗ್ರಾಮ ಯೋಜನೆಯ ಮಾಹಿತಿಗಳನ್ನು ಹಂಚಿಕೊಳ್ಳಲು ಅಧಿಕಾರಿಗಳ ಮತ್ತು ಸಾರ್ವಜನಿಕರ ಸೋಶಿಯಲ್ ಮೀಡಿಯಾ ಗ್ರೂಪ್‌ಗಳನ್ನು ಪ್ರತ್ಯೇಕವಾಗಿ ರಚಿಸಲು,  ಗುಬ್ಬಿ ತಾಲ್ಲೂಕು ಪಂಚಾಯಿತಿ ಇಓ ಶ್ರೀ ನರಸಿಂಹಯ್ಯನವರು, ಆಡಳಿತಾಧಿಕಾರಿ ಶ್ರೀ ಸೋಮಶೇಖರ್ ರವರು ಮತ್ತು  ಪಿಡಿಓ ಶ್ರೀ ಗುರುಮೂರ್ತಿಯವರು ಸಭೆ ನಡೆಸಿ ಸರ್ವಾನುಮತದ ನಿರ್ಣಯ ಮಾಡಿದ್ದಾರೆ.

 ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ, ಸರ್ಕಾರಿ ಯೋಜನೆಗಳ ಅರ್ಹ ಪಲಾನುಭವಿಗಳ ಪಟ್ಟಿ ಹಾಗೂ ಆಯಾ ಗ್ರಾಮದ ಯೋಜನೆಗಳನ್ನು ಗ್ರಾಮಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಆಯ್ಕೆ ಮಾಡುವುದು ನಿಯಮ. ಆದರೆ ಇಂದಿನ ಗ್ರಾಮಸಭೆಗಳಲ್ಲಿ ಗ್ರಾಮಸ್ಥರ ಮಧ್ಯೆ ಗಲಾಟೆ ಮಾಡಿಸಿ, ಯಾರದೋ ಮನೆಯಲ್ಲಿ ಕುಳಿತು ಪಟ್ಟಿ ಮಾಡುವುದು ಸಹಜವಾಗಿದೆ.

  ಅಧಿಕಾರಿಗಳ ಸಮನ್ವಯತೆಗೂ ಅನೂಕೂಲವಾಗಲಿದೆ, ಈ ಎರಡು ಗ್ರೂಪ್‌ನಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಇರುವುದರಿಂದ ಅಗತ್ಯ ಮಾಹಿತಿಗಳನ್ನು ಮಾತ್ರ ಪೋಸ್ಟ್ ಮಾಡುವುದು ಸೂಕ್ತವಾಗಿದೆ. ಪಿಡಿಓ ರವರು ರಚಿಸುವ ಮುನ್ನ ಪ್ರಾಯೋಗಿಕವಾಗಿ ಈ ಗ್ರೂಪ್ ರಚಿಸಲಾಗಿದೆ.

 ಸಂಸದರ ಆದರ್ಶ ಗ್ರಾಮ ಯೋಜನೆ ಯಾವುದೇ ಒಂದು ಪಕ್ಷದ ಕಾರ್ಯಕ್ರಮವಲ್ಲ, ಕೇಂದ್ರ ಸರ್ಕಾರದ ಯೋಜನೆ, ಗ್ರಾಮದ ಎಲ್ಲಾ ಪಕ್ಷಗಳ ಮುಖಂಡರು ಸೇರಿ ಆಯಾ ಗ್ರಾಮದ ಅಭಿವೃದ್ಧಿಗೆ ಇರುವ ಯೋಜನೆಗಳ ಪಟ್ಟಿ ನೀಡಬಹುದು. ಬಿಜೆಪಿ, ಕಾಂಗ್ರೆಸ್. ಜೆಡಿಎಸ್ ಹೀಗೆ ಆಯಾ ಗ್ರಾಮಗಳ ಆಯಾ ಪಕ್ಷಗಳ ಮುಖಂಡರು ಸಹ ಸಲಹೆ ನೀಡಬಹುದು.

 ಆಯಾ ಗ್ರಾಮಗಳಲ್ಲಿರುವ ಸಂಘಸಂಸ್ಥೆಗಳು, ಗ್ರಾಮದ ಯಜಮಾನರುಗಳು, ಪರಿಣಿತರು, ಅನುಭವಿಗಳು ಮತ್ತು ಯಾವುದೇ ವ್ಯಕ್ತಿಯೂ ಸಹ ಸಲಹೆ ನೀಡಲು ಅವಕಾಶವಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಯೋಜನೆ, ಒಂದು ಕುಟುಂಬಕ್ಕೆ ಸಂಬಂಧಿಸಿದ ಯೋಜನೆ, ಒಂದು ಕುಟುಂಬಕ್ಕೆ ಸಂಬಂಧಿಸಿದ ವಿವಿಧ ಸ್ವತ್ತಿನ ಸಮಸ್ಯೆಗಳು ಮತ್ತು ಯೋಜನೆ, ಆಯಾ ಗ್ರಾಮ ಮಟ್ಟದ ಯೋಜನೆ ಹಾಗೂ ಗ್ರಾಮಪಂಚಾಯಿತಿ ಮಟ್ಟದಲ್ಲಿ ವಿವಿಧ ಇಲಾಖೆಗಳಿಂದ ಆಗಬೇಕಾದ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಪಿಡಿಓರವರಿಗೆ ಅಥವಾ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಮನವಿ ಸಲ್ಲಿಸಬಹುದು.

 ನಿಯಾಮುನುಸಾರ ಮಾಡಬಹುದಾದ ಎಲ್ಲಾ ಯೋಜನೆ ಮತ್ತು ವೈಯಕ್ತಿಕ ಸೌಲಭ್ಯಗಳಿಗೂ ಶೇ 100 ರಷ್ಟು ಸ್ಪಂಧಿಸುವುದು ಸಂಸದರ ಆದರ್ಶ ಯೋಜನೆಯ ಗುರಿಯಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು, ನೌಕರರು ಮತ್ತು ಸಾರ್ವಜನಿಕರು ಸೇರಿಸಿ ಈ ಗ್ರೂಪ್ ರಚಿಸಲಾಗಿದೆ.

 ಶೀಘ್ರದಲ್ಲಿಯೇ 18 ಗ್ರಾಮಗಳ ಜನರೂ ಈ ಗ್ರೂಪ್‌ಗೆ ಸೇರ್ಪಡೆಯಾಗಲಿದ್ದಾರೆ. ಕುಂದರನಹಳ್ಳಿ  ಶ್ರೀ ಕೆ.ಆರ್.ಮಹೇಶ್‌ರವರು ಮತ್ತು ಬಂಡಿಹಳ್ಳಿ ಶ್ರೀ ಚಂದ್ರಮೌಳಿಯವರು 18 ಗ್ರಾಮಗಳ ಎಲ್ಲಾ ಪಕ್ಷಗಳ ಮುಖಂಡರನ್ನು, ಸಮಾಜಸೇವಕರನ್ನು ಸೇರ್ಪಡೆ ಮಾಡಲಿದ್ದಾರೆ.