22nd December 2024
Share

TUMAKURU:SHAKTHI PEETA FOUNDATION

 ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ರಚಿಸಿರುವ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯು ದೇಶಕ್ಕೆ ಮಾದರಿಯಾಗವತ್ತ ದಾಪುಗಾಲು ಹಾಕಬೇಕಿದೆ. ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಮತ್ತು ಅವರ ತಂಡ ಸಕ್ರೀಯಾಗವಾಗಿ ಕಾರ್ಯನಿರ್ವಹಿಸಬೇಕಿದೆ. ‘ಹಿಂದಿನ ಸರ್ಕಾರ ರಾಜ್ಯ ಮಟ್ಟದ ದಿಶಾ ಸಮಿತಿಯನ್ನೆ ರಚಿಸಿರಲಿಲ್ಲ

 ಮುಖ್ಯಕಾರ್ಯದರ್ಶಿ ಶ್ರೀ ವಿಜಯಭಾಸ್ಕರ್‌ರವರು, ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ಶಾಲಿನಿ ರಜನೀಶ್‌ರವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನಕಾರ್ಯದರ್ಶಿ ಶ್ರೀ ಎಲ್.ಕೆ.ಅತೀಕ್‌ರವರು ಮತ್ತು ಅಧಿಕಾರಿ ಸದಸ್ಯರು ವಿಶೇಷ ಗಮನಹರಿಸಿ ಕಾರ್ಯನಿರ್ವಹಿಸಿದಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಸಹಕಾರಿಯಾಗಲಿದೆ.

  1. ಪೂರ್ಣ ಪ್ರಮಾಣ ಮಟ್ಟದ ರಾಜ್ಯ ಮಟ್ಟದ ದಿಶಾ ಸಮಿತಿ ಯನ್ನು ರಚಿಸಲು ಕ್ರಮವಹಿಸಲಾಗಿದೆ. ಮಾನ್ಯ ಮುಖ್ಯ ಮಂತ್ರಿಗಳ ವಿವೇಚನೆ ಅಡಿಯಲ್ಲಿ ನೇಮಿಸಬಹುದಾದ ಎಲ್ಲಾ ಸದಸ್ಯರನ್ನು ಈಗಾಗಲೇ ನೇಮಿಸಲಾಗಿದೆ. ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯ ವಿವೇಚನೆ ಅಡಿಯಲ್ಲಿ ನೇಮಿಸಬಹುದಾದ ಎಲ್ಲಾ ಸದಸ್ಯರ ನೇಮಕಾತಿ ಪ್ರಕ್ರಿಯೇ ಕಡತ ಮಾನ್ಯ ಮುಖ್ಯ ಮಂತ್ರಿಗಳ ಅನುಮೋದನೆಗೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರದಿಂದ ಬಾಕಿ ಉಳಿದ ಸದಸ್ಯರುಗಳ ನಾಮ ನಿರ್ಧೇಶನ ಮಾಡಲು ಮಾನ್ಯ ಮುಖ್ಯ ಮಂತ್ರಿಗಳ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಕ್ರಮವಹಿಸಲಾಗಿದೆ. ‘ಕೋವಿಡ್-19 ನಿಂದ ಪ್ರಥಮ ಸಭೆ ನಡೆಸಲು ವಿಳಂಭವಾಗಿದೆ’ ಶೀಘ್ರದಲ್ಲಿಯೇ ರಾಜ್ಯ ಮಟ್ಟದ ದಿಶಾ ಸಮಿತಿಗೆ ಚಾಲನೆ ನೀಡಲಾಗುವುದು.
  2. ಇಡೀ ದೇಶದಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ಕಾರ್ಯದರ್ಶಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇದ್ದಾರೆ. ತುಮಕೂರು ಲೋಕಸಭಾ ಸದಸ್ಯ ಹಾಗೂ ತುಮಕೂರು ಜಿಲ್ಲಾ ದಿಶಾ  ಸಮಿತಿಯ ಅಧ್ಯಕ್ಷರು ಆದ ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿ ಮೇರೆಗೆ ರಾಜ್ಯ ಮಟ್ಟದ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಇದರಿಂದ ’ಕೇಂದ್ರ ಮತ್ತು ರಾಜ್ಯದ ಎಲ್ಲಾ ಇಲಾಖೆಗಳ ಪ್ರಗತಿಪರಿಶೀಲನೆಗೆ ಅನೂಕೂಲವಾಗಲಿದೆ’.
  3. ಇಡೀ ದೇಶದಲ್ಲಿ ಜಿಲ್ಲಾ ಮಟ್ಟದ ’ದಿಶಾ ಸಮಿತಿ ಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿ’ ಗಳಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಮಾತ್ರ ಜಿಲ್ಲಾ ಪಂಚಾಯತ್ ಸಿಇಓ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.  ತುಮಕೂರು ಲೋಕಸಭಾ ಸದಸ್ಯ ಹಾಗೂ ತುಮಕೂರು ಜಿಲ್ಲಾ ದಿಶಾ  ಸಮಿತಿಯ ಅಧ್ಯಕ್ಷರು ಆದ ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿ ಮೇರೆಗೆ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿಗಳನ್ನು ನೇಮಿಸ ಬೇಕು, ಇದರಿಂದ ರಾಷ್ಟ್ರೀಯ ಹೆದ್ಧಾರಿ, ರೈಲ್ವೆ, ಹೆಚ್.ಎ.ಎಲ್, ಇಸ್ರೋ ಇನ್ನೂ ಮುಂತಾದ ಇಲಾಖೆಗಳ ಪ್ರಗತಿಪರಿಶೀಲನೆಗೆ ಅನೂಕೂಲವಾಗಲಿದೆ ಎಂದು ಪತ್ರ ಬರೆದಿದ್ದು, ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲು ಕ್ರಮವಹಿಸಲಾಗುವುದು.
  4. ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ರಾಜ್ಯ ಸರ್ಕಾರದ ಹಂತದ ಅಧಿಕಾರಿಗಳನ್ನು ನಾಮ ನಿರ್ಧೇಶನ ಮಾಡುವ ಪ್ರಕ್ರಿಯೇ ಅಂತಿಮ ಹಂತದಲ್ಲಿದೆ. ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಜಿಯವರ ಆಶಯದಂತೆ ಜಲಶಕ್ತಿ ಅಭಿಯಾನ, ಜಲಜೀವನ್ ಮಿಷನ್, ಜಲಗ್ರಾಮ ಕ್ಯಾಲೆಂಡರ್ ಇತರೆ ವಿಶೇಷ ಯೋಜನೆಗಳ ಸಮರ್ಪಕ ಜಾರಿಗಾಗಿ ’ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಮುಖ್ಯ ಇಂಜಿನಿಯರ್ ಸಿವಿಲ್ ಮಟ್ಟದವರನ್ನು ನೇಮಕ ಮಾಡಲು ಚಿಂತನೆ’ ನಡೆಸಲಾಗಿದೆ. ಪ್ರಥಮ ಸಭೆಯಲ್ಲಿ ಚರ್ಚಿಸಿ ನೇಮಿಸಲು ಕ್ರಮವಹಿಲಾಗುವುದು.

5. ‘ತುಮಕೂರು ದಿಶಾ ಮಾದರಿ’ಇಡೀ ದೇಶದಲ್ಲಿಯೇ ಮಾದರಿ ಎಂಬಂತೆ ’ಜಿಐಎಸ್ ಮ್ಯಾಪ್-1 ಮತ್ತು ಡೇಟಾ-1’ ಎಂಬ ಘೋಷಣೆಯೊಂದಿಗೆ ದಿನಾಂಕ:21.09.2020 ರ ಪ್ರಥಮ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯಕೈಗೊಂಡಿದ್ದು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ’ತುಮಕೂರು ಜಿಐಎಸ್ ಪೋರ್ಟಲ್’ ರಚಿಸಿ ಪೂರಕವಾಗಿ ಜಿಐಎಸ್ ಲೇಯರ್ ಮಾಡಲು ಭರದಿಂದ ಎಲ್ಲಾ ಇಲಾಖೆಗಳು ಅವಿರತವಾಗಿ ಶ್ರಮಿಸುತ್ತಿದ್ದು ಶೀಘ್ರದಲ್ಲಿಯೇ ಅಂದರೆ ದಿನಾಂಕ:21.09.2020 ರೊಳಗೆ ಮಾನ್ಯ ಮುಖ್ಯ ಮಂತ್ರಿಗಳಿಂದ ಚಾಲನೆ ನೀಡಲಾಗುವುದು. ನಂತರ ಎಲ್ಲಾ ಜಿಲ್ಲೆಗಳಲ್ಲೂ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

6.ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಜಿಯವರ ಆಶಯದಂತೆ ತುಮಕೂರು ಜಿಲ್ಲೆಯನ್ನು ’ಜಿಐಎಸ್ ಆಧಾರಿತ ಡೇಟಾ ಜಿಲ್ಲೆ’ ಯಾಗಿ ಮಾರ್ಪಾಡು ಮಾಡಲು, ತುಮಕೂರು ಜಿಲ್ಲಾ ದಿಶಾ ಸಮಿತಿ ವಿಶೇಷ ಯೋಜನೆ ಹಮ್ಮಿಕೊಂಡು, ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿವರು ಪ್ರತಿವಾರವೂ 3 ದಿವಸಗಳು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಿಐಎಸ್ ಲೇಯರ್ ಅಂದೋಲನದ ರೀತಿಯಲ್ಲಿ ಸಭೆ ನಡೆಸುತ್ತಿದ್ದಾರೆ.

7.ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಜಿಯವರ ಆಶಯದಂತೆ ತುಮಕೂರು ಸ್ಮಾರ್ಟ್ ಸಿಟಿಯನ್ನು ’ಜಿಐಎಸ್ ಆಧಾರಿತ ಡೇಟಾ ಸ್ಮಾರ್ಟ್ ಸಿಟಿ’ಯಾಗಿ ಮಾರ್ಪಾಡು ಮಾಡಲು, ತುಮಕೂರು ಜಿಲ್ಲಾ ದಿಶಾ ಸಮಿತಿ ವಿಶೇಷ ಯೋಜನೆ ಹಮ್ಮಿಕೊಂಡು, ಪ್ರತಿ ಶುಕ್ರವಾರವೂ  ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಿಐಎಸ್ ಲೇಯರ್ ಅಂದೋಲನದ ರೀತಿಯಲ್ಲಿ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ತುಮಕೂರು ಜಿಲ್ಲಾಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.

8.ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಜಿಯವರ ಆಶಯದಂತೆ ’2022 ರೊಳಗೆ ಕಾಲಮಿತಿ ನಿಗದಿಗೊಳಿಸಿ ಘೋಶಿಸಿರುವ ಎಲ್ಲಾ ಯೋಜನೆಗಳ ಶೇಕಡ 100 ರಷ್ಟು ಜಾರಿಗೆ’ ಶ್ರಮಿಸಲು ತುಮಕೂರು ಜಿಲ್ಲಾ ದಿಶಾ ಸಮಿತಿ ರೂಪುರೇಷೆ ನಿರ್ಧರಿಸಿ ಪ್ರಸ್ತಾವನೆಗಳನ್ನು ಸಿದ್ಧಪಡಿಸುತ್ತಿದೆ, ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಸಾಧಕ- ಭಾದಕಗಳ ಬಗ್ಗೆ ಚರ್ಚಿಸಿ ಅಂದೋಲನದ ರೀತಿಯಲ್ಲಿ ರಾಜ್ಯಾಧ್ಯಾಂತ ಇದೇ ಮಾದರಿಯನ್ನು ಅನುಸರಿಸಲು ಚಿಂತನೆ ನಡೆಸಲಾಗಿದೆ.

           ‘ದಿಶಾ ಡೇಟಾ ಪಾರ್ಕ್’

9.2020-2021 ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಮಂಡಿಸಿರುವಂತೆ ಪಿಪಿಪಿ ಮಾದರಿ ’ದಿಶಾ ಡೇಟಾ ಪಾರ್ಕ್’ ನ್ನು ಸ್ಥಾಪಿಸಲು ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮುಂದೆ ಬಂದಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಈ ಸಂಸ್ಥೆಗಳ ಸಹಯೋಗದಲ್ಲಿ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದಲ್ಲಿ  ಸಭೆಯಲ್ಲಿ ಚರ್ಚಿಸಿ ನಿರ್ಣಯಕೈಗೊಳ್ಳಲಾಗುವುದು.

 ರಾಜ್ಯದ 30 ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಕಾರ್ಯವೈಖರಿ ಬಗ್ಗೆ ಸಲಹಾಗಾರ ಸಂಸ್ಥೆಯಿಂದ ವರದಿ ಪಡೆಯಲು ಯೋಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.