27th July 2024
Share
N.RANGANATH

TUMAKURU:SHAKTHI PEETA FOUNDATION

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ದಿನಾಂಕ:21.10.2019  ರಂದು ಜಿಲ್ಲೆಯ ಮತ್ತು ರಾಜ್ಯದ ಸಮಗ್ರ ನೀರಾವರಿ ಬಗ್ಗೆ ಚರ್ಚಿಸಲು ವಿಷಯ ಸೂಚಿಸಿದರು.

 ಈ ವಿಚಾರ ಚರ್ಚೆ ಮಾಡಿದ ಹಿರಿಯೊಬ್ಬರು ಜಿಲ್ಲಾ ಮಟ್ಟದ ಸಭೆಯಲ್ಲಿ ರಾಜ್ಯ ಮಟ್ಟದ ಯೋಜನೆ ಬಗ್ಗೆ ಚರ್ಚೆ ಮಾಡಬಹುದೇ? ಎಂದು ಪ್ರಶ್ನಿಸಿದಾಗ ನಾನು ಆಳವಾಗಿ ಅಧ್ಯಯನ ಮಾಡಿದ ಪ್ರಕಾರ, ಹೌದು ಲೋಕಸಭಾ ಸದಸ್ಯರು ದೇಶದ ವಿಚಾರಗಳನ್ನು ಚರ್ಚೆ ಮಾಡಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಬಹುದು.

ಶ್ರೀ ಜಿ.ಎಸ್.ಬಸವರಾಜ್‌ರವರು  ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರೊಂದಿಗೂ ಸೇರಿದಂತೆ, ಜಲಸಂಪನ್ಮೂಲ ಸಚಿವಾಲಯಕ್ಕೆ ಸಂಬಂಧಿಸಿದ ಎಲ್ಲಾ ಇಲಾಖಾ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದಾರೆ. ನಾನೂ ಸಹ ಈ ಎಲ್ಲಾ ಸಭೆಗಳಲ್ಲಿ ಭಾಗವಹಿಸಿದ್ದೇನೆ.

 ನಾವೂ ಸಭೆ ನಡೆಸಿದ ಉದ್ದೇಶ ಯಾವ ಇಲಾಖೆ ಯಾವ ಯೋಜನೆಯನ್ನು ಸಿದ್ಧಪಡಿಸಿ ಇಟ್ಟು ಕೊಂಡಿದೆ ಎಂಬ ತಾಜಾ ಮಾಹಿತಿ ಸಂಗ್ರಹ ನಮ್ಮ ನಿರ್ಧಿಷ್ಠ ಗುರಿಯಾಗಿತ್ತು. ನಾನು ಮುಂದೆ ಪ್ರತಿಯೊಂದು ಯೋಜನೆಯ ಜನ್ಮದ ಮತ್ತು ಜನಕರ ಬಗ್ಗೆ ಮಾಹಿತಿ ನೀಡುತ್ತೇನೆ.

 ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದ ಮೇರೆಗೆ ಸುಮಾರು 484 ಟಿ.ಎಂ.ಸಿ ಅಡಿ ನೀರಿನ ರಾಜ್ಯದ ನದಿ ಜೋಡಣೆ ಯೋಜನೆ ರೂಪಿಸಲು ರಾಜ್ಯದ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ರಾಜ್ಯದ ನದಿ ಜೋಡಣೆ ಬೀಜ’ ಹಾಕಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಲೇ ಬೇಕು.

  ಬಸವರಾಜ್ ರವರು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ  Consultative committee for the ministry of jalashkthi    ಸಮಿತಿ ಸದಸ್ಯರು ಆಗಿದ್ದಾರೆ. ಅವರು ಕೇಂದ್ರದ ಗಮನ ಸೆಳೆಯಲು ಜಲ ಶಕ್ತಿ ಲಾಬಿ’ ಆರಂಭಿಸಿದ್ದಾರೆ ಎಂದರೆ ತಪ್ಪಾಗಲಾರದು. ಕೊರೊನಾ ಮಹಾಮಾರಿ ಪ್ರವೇಶದಿಂದ ನಮ್ಮ ಕನಸಿಗೆ  ಅಡಚಣೆಯು ಆಗಿದೆ’ 

 ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆ ಅನೌಪಚಾರಿಕವಾಗಿ, ಈ ಎಲ್ಲಾ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿ ರಾಜ್ಯದ ನದಿ ಜೋಡಣೆಗೆ ಒಂದು ಪರಿಕಲ್ಪನಾ ವರದಿ’ ನೀಡಲು ಬೆಂಗಳೂರಿನ ಇ ಐ- ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎನ್. ರಂಗನಾಥ್ ರವರಿಗೆ ಸೂಚಿಸಿದ್ದಾರೆ.

  ಬಸವರಾಜ್‌ರವರ ಸಲಹೆ ಮೇರೆಗೆ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್  ವಿವಿಧ ಇಲಾಖೆಗಳು ಮತ್ತು ಪರಿಣಿತ ತಜ್ಞರಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ ಈ ಕೆಳಕಂಡ ನದಿ ನೀರನ್ನು ರಾಜ್ಯದ ನದಿ ಜೋಡಣೆ ಯೋಜನೆಗೆ ಬಳಸಬಹುದಾಗಿದೆ.

 ಇನ್ನೂ ರಾಜ್ಯದ ಎಲ್ಲಾ ಭಾಗದ ಪರಿಣಿತರ ಮತ್ತು ನೀರಾವರಿ ಹೋರಾಟಗಾರರ ಚಿಂತನೆಗಳ ಮಾಹಿತಿ ಸಂಗ್ರಹಿಸಲು ನಮ್ಮ ಸಂಸ್ಥೆಗಳಿಗೆ ಸಾಧ್ಯಾವಾಗಿಲ್ಲ. ಶ್ರೀ ಎನ್. ರಂಗನಾಥ್‌ರವರು ಈ ಉಳಿದ ಎಲ್ಲಾ ಮಾಹಿತಿಗಳನ್ನು ಸಂಗ್ರಹ ಮಾಡಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಸದಸ್ಯರು ಒಪ್ಪುವ ಹಾಗೆ ಯೋಜನೆ ರೂಪಿಸುವುದು ಅಗತ್ಯವಾಗಿದೆ.

 ರಾಜ್ಯದ ನದಿ ಜೋಡಣೆಯಿಂದ ‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಡಿ ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳಿಗೆ ಸಾಮಾಜಿಕ ನ್ಯಾಯದಡಿ ನದಿ ನೀರಿನ ಹಂಚಿಕೆ ಮತ್ತು ಪ್ರಧಾನಿಯವರ ಆಶಯದಂತೆ 2023 ರೊಳಗೆ ಜಲಜೀವನ್ ಮಿಷನ್ ಯೋಜನೆಯಡಿ ದೇಶದ ಎಲ್ಲಾ ಮನೆಗಳಿಗೂ ನಲ್ಲಿ ಮೂಲಕ ನೀರು ನೀಡುವ ಮಹತ್ವಾಕಾಂಕ್ಷೆ ನೀರಿನ ಯೋಜನೆಗೆ ನದಿ ನೀರಿನ ಅಲೋಕೇಷನ್ ಮಾಡುವುದು ಸರ್ಕಾರದ ಗುರಿಯಾಗ ಬೇಕಿದೆ’

   ಈ ಎರಡು ಯೋಜನೆಗಳಿಗೆ ಅಗತ್ಯವಿರುವ ನೀರಿನ ಪರಿಕಲ್ಪನಾ ವರದಿಯನ್ನು ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಮೊದಲ ದಿಶಾ ಸಮಿತಿ ಸಭೆಯಲ್ಲಿ (06.10.2020 ) ಚರ್ಚಿಸುವ ಹಾಗೆ ನೀಡಲು ಮನವಿ ಮಾಡಲಾಗಿದೆ.

 NWDA:National Water Development Agency,, ಕರ್ನಾಟಕ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧ್ಯಯನ ಮತ್ತು ಪರಿಣಿತರ ವರದಿಗಳ ಪ್ರಕಾರ ಈ ಕೆಳಕಂಡ ಮಾಹಿತಿ ಸಂಗ್ರಹಿಸಲಾಗಿದೆ.

  1. ಕಾಳಿ ನದಿಯಿಂದ ಸುಮಾರು 60 ಟಿಎಂಸಿ ಅಡಿ ನೀರು.
  2. ಕೃಷ್ಣಾ ಪ್ರವಾಹದಿಂದ ಸುಮಾರು 30 ಟಿಎಂಸಿ ಅಡಿ ನೀರು.
  3. ಕಾವೇರಿ ಪ್ರವಾಹದ ನೀರು ಸುಮಾರು 50  ಟಿಎಂಸಿ ಅಡಿ ನೀರು.
  4. ಮಹಾದಾಯಿ ನದಿಯಿಂದ ಸುಮಾರು 4 ಟಿಎಂಸಿ ಅಡಿ ನೀರು.
  5. ಅಘಿನಾಶಿನಿ ನದಿಯಿಂದ ಸುಮಾರು 50 ಟಿಎಂಸಿ ಅಡಿ ನೀರು.
  6. ಬೇಡ್ತಿ – ವರದಾ ನದಿಯಿಂದ ಸುಮಾರು 8 ಟಿಎಂಸಿ ಅಡಿ ನೀರು.
  7. ಗೋದಾವರಿ – ಕಾವೇರಿ  ಲಿಂಕ್ ಸುಮಾರು 20  ಟಿಎಂಸಿ ಅಡಿ ನೀರು.
  8. ಆಲಮಟ್ಟಿ – ಪೆನ್ನಾರ್ ಲಿಂಕ್ ಸುಮಾರು 25  ಟಿಎಂಸಿ ಅಡಿ ನೀರು.
  9. ಬೇಡ್ತಿ – ಧರ್ಮಾ-ವರದಾ ಲಿಂಕ್ ಸುಮಾರು 19 ಟಿಎಂಸಿ ಅಡಿ ನೀರು.
  10. ಬೇಡ್ತಿ ನದಿಯಿಂದ ಸುಮಾರು 25 ಟಿಎಂಸಿ ಅಡಿ ನೀರು.
  11. ಶರಾವತಿ ನದಿಯಿಂದ ಸುಮಾರು 100 ಟಿಎಂಸಿ ಅಡಿ ನೀರು.
  12. ಕುಮಾರಧಾರ ಹಾಗೂ ಬೆಟ್ಟಕುವರಿ ನದಿಯಿಂದ ಸುಮಾರು 18 ಟಿಎಂಸಿ ಅಡಿ ನೀರು.
  13. ಕಕ್ಕಟ್ಟುಹೊಳೆ – ಲಕ್ಷಣ ತೀರ್ಥ ನದಿಯಿಂದ ಸುಮಾರು 3 ಟಿಎಂಸಿ ಅಡಿ ನೀರು.
  14. ಕೊಂಗನಹೊಳೆ – ಲಕ್ಷಣ ತೀರ್ಥ ನದಿಯಿಂದ ಸುಮಾರು 2.90 ಟಿಎಂಸಿ ಅಡಿ ನೀರು.
  15. ಬರಪಹೊಳೆ – ಕಾವೇರಿ ನದಿಯಿಂದ ಸುಮಾರು 5 ಟಿಎಂಸಿ ಅಡಿ ನೀರು.
  16. ಮೇಕೆದಾಟು ಅಣೆಕಟ್ಟಿನಿಂದ ಸುಮಾರು 67  ಟಿಎಂಸಿ ಅಡಿ ನೀರು.
  17. ಕಿಂಡಿ ಯೋಜನೆ ಮತ್ತು ಸೌಭಾಗ್ಯ ಸಂಜೀವಿನಿ ಸುಮಾರು 63 ಟಿಎಂಸಿ ಅಡಿ ನೀರು.
  18. ಕೊಳಚೆ ನೀರು ಸಂಸ್ಕರಣೆಯಿಂದ ಸುಮಾರು 30 ಟಿಎಂಸಿ ಅಡಿ ನೀರು.
  19. ನೇತ್ರಾವತಿ ನದಿಯಿಂದ ಸುಮಾರು 150 ಟಿಎಂಸಿ ಅಡಿ ನೀರು.
  20. ತಮಿಳು ನಾಡಿನ ಮೂಲಕ ಸಮುದ್ರ ಸೇರುವ 205  ಟಿಎಂಸಿ ಅಡಿ ನೀರು. ನಮ್ಮ ರಾಜ್ಯದ ಪಾಲಿನ ನೀರಿನ ಬದಲಾಗಿ ಅವರು ಯೋಜನೆ ರೂಪಿಸಿಕೊಳ್ಳಲಿ.
  21. ಕೇಂದ್ರ ಸರ್ಕಾರದ ಇತರೆ ನದಿ ಜೋಡಣೆ ಯೋಜನೆಗಳಿಂದ ದೊರೆಯುವ ನೀರು.
  22. ನೀರಿನ ಬಳಕೆ ವಿಧಾನಗಳ ಪದ್ಧತಿಯಿಂದ ದೊರೆಯುವ ನೀರು.