9th October 2024
Share
   
TUMAKURU:SHAKTHI PEETA FOUNDATION  
ಡಾ ಸುಮನಾ, ಮುಖ್ಯ ಆಯುಷ್ ವೈದ್ಯಾಧಿಕಾರಿ, ಕೊನೇಹಳ್ಳಿ  
ರಮೇಶ್ ರವರೇ…..   ಕೆಲಸದ ಒತ್ತಡದಿಂದಾಗಿ ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆ ಇರಲಿ  ಮತ್ತು ನನ್ನ ಅಭಿಪ್ರಾಯ ಅಪೇಕ್ಷಿಸಿದ್ದಕ್ಕಾಗಿ ಧನ್ಯವಾದಗಳು.  

ತಾವೆಲ್ಲರೂ ಸೇರಿ ಹಮ್ಮಿಕೊಂಡಿರುವ  ಆಯುಷ್ ಪಾರ್ಕ್ ಸ್ಥಾಪನೆ ಸದುದ್ದೇಶವಾಗಿದ್ದೂ ಶೀಘ್ರವಾಗಿ ನೆರವೇರಲೆಂದು ಆ ಧನ್ವಂತರಿಯಲ್ಲಿ ಬೇಡುತ್ತೇನೆ .  

ನಾನೂ ಆಯುರ್ವೇದದ  benificiery ಯಾಗಿದ್ದು ಕಳೆದ 23-24 ವರುಷಗಳಿಂದ  ಆಯುಷ್ department ನಲ್ಲೇ ಸೇವೆ ಸಲ್ಲಿಸುತ್ತಿದ್ದೂ ತುಮಕೂರು ಜಿಲ್ಲೆಯಲ್ಲೇ 22 ವರುಷಗಳಿಂದ ನೆಲೆಸಿರುವ ನನ್ನ ಅನುಭವದಲ್ಲಿ ಕೆಲ ಅಭಿಪ್ರಾಯಗಳನ್ನು ತಿಳಿಸುತ್ತಿದ್ದೇನೆ ….  

ವಾಸ್ತವವಾಗಿ ಆಯುರ್ವೇದ ಎಂದರೆ ಕೇವಲ ಚಿಕಿತ್ಸಾ ಮಾರ್ಗವಲ್ಲ ಆದು ಮನುಷ್ಯ ತನ್ನ ಹಾಗು ತನ್ನ ಸುತ್ತಲಿನ ಪ್ರಾಣಿ ಪರಿಸರದ ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉನ್ನತ ಮಾರ್ಗೋಪಾಯಗಳನ್ನು  ತಿಳಿಸಿರುವಂತಹ ಅಧ್ಯಯನ ಯೋಗ್ಯ ಗ್ರಂಥ…  

ಈ ವಿಚಾರವನ್ನು ಉದ್ದೇಶಿತ ಪಾರ್ಕ್ ನಲ್ಲಿ  ಆಯುಷ್ ಪದ್ದತಿಯ ಬಗ್ಗೆ museum /ಧ್ವನಿವರ್ಧಕ / ಕಿರುಚಿತ್ರ /ಚಿತ್ರಪಟ / ಕಿರುಪುಸ್ತಕ… ಇತ್ಯಾದಿಗಳ ಮೂಲಕ  ತಿಳಿಸಿಕೊಡುವ arrangement   ರೋಗಗಳಿಗನುಗುಣವಾಗಿ ಗಿಡಮರಗಳನ್ನು ನೆಟ್ಟು ಅದರ ವಿಚಾರ ಗಳನ್ನು digitalisation / bar code ಮೂಲಕ ತಿಳಿಸುವುದು   

ಪ್ರಾಣಿ ಪರಿಸರ ಸಮತೋಲನ  ಪ್ರಾಮುಖ್ಯತೆಯನ್ನೂ ತಿಳಿಸಲೇಬೇಕು   ಪಾರ್ಕ್ ನಲ್ಲಿ ಒಂದು ಸಭಾಂಗಣ …ಅದರಲ್ಲಿ ದಿನನಿತ್ಯ ಯೋಗ ಪ್ರಾಣಾಯಾಮದ ಅಭ್ಯಾಸಕ್ಕೆ ಅನುವು …  

ಸಾದ್ಯವಾದಲ್ಲಿ ಜಿಂದಾಲ್  ಉಜಿರೆ ಮಾದರಿಯಲ್ಲಿ  Naturopathy  ಅಳವಡಿಕೆ /ಪ್ರಾತ್ಯಕ್ಷಿಕೆ ಗೆ ವ್ಯವಸ್ಥೆ …    

ನೋಡಿ ಮೇಡಂ: ಪ್ರಸ್ತುತ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಯಾವುದೇ ಯೋಜನೆ ಮಾಡುವುದು ವಿರಳ. ಎಸ್.ಪಿ.ವಿ ಗಳು ಮುಂದೆ ಬಂದಲ್ಲಿ ಮಾತ್ರ ಸರ್ಕಾರದ ನೆರವು ದೊರೆಯಲಿದೆ.

ಸಿದ್ಧರ ಬೆಟ್ಟದ ಪಕ್ಕದ ಗ್ರಾಮದ ಸುಮಾರು 45  ಎಕರೆ ಜಮೀನು ಇರುವ ಒಂದು ಕುಟುಂಬ ಅಂತರ ರಾಷ್ಟ್ರೀಯ ಮಟ್ಟದ ಆಯುಷ್ ಕ್ಲಸ್ಟರ್, ಮೆಗಾಪಾರ್ಕ್, ಆಯುಷ್ ಮಂಡಿ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ ಅವರು ಮೌನವಾಗಿ ಅಧ್ಯಯನ ನಡೆಸುತ್ತಿದ್ದಾರೆ.