22nd December 2024
Share

TUMAKURU:SHAKTHIPEETA FOUNDATION

ಯಾವುದೇ ಸರ್ಕಾರವಿರಲಿ, ಯಾವುದೇ ವಿರೋಧ ಪಕ್ಷಗಳಿರಲಿ, ಯಾವುದೇ ಹೊಸ ಯೋಜನೆಗಳಿಗೆ ವೀರೋಧ ಮಾಡುವುದು ಸರ್ವೆ ಸಾಮಾನ್ಯ. ಆದರೇ ನೀವು ಈ ರೀತಿ ಮಾಡಿರುವುದು ತಪ್ಪು, ಇದನ್ನು ಈ ರೀತಿ ಬದಲಾಯಿಸಿ ಎಂದು ಸಲಹೆ ನೀಡುವುದು ಅತ್ಯಂತ ವಿರಳ.

ಈ ಹೇಳಿಕೆ ನಿಜವಾಗಿದ್ದಲ್ಲಿ, ಈಗ ಇಲ್ಲೊಂದು ಉತ್ತಮವಾದ ಬೆಳವಣಿಗೆಗೆ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ಕೈಹಾಕಿದ್ದಾರೆ ಎಂದರೆ ತಪ್ಪಾಗಲಾರದು. ಅವರಿಗೆ ಯಾರು ಈ ಐಡಿಯಾ ಕೊಟ್ಟರೊ ಗೊತ್ತಿಲ್ಲ. ಇದಂತು ಒಳ್ಳೆಯ ಬೆಳವಣಿಗೆ. ಕಳೆದ 6 ವರ್ಷಗಳಲ್ಲಿನ ಅವರ ನಡವಳಿಕೆಗಿಂತ ಇದು ಉತ್ತಮ. ಈ ರೀತಿ ಅಭಿವೃದ್ಧಿ ಪರ ಚಿಂತನೆ ನಡೆಸಲಿ.

‘ಪರಿಣಿತ ತಜ್ಞರು ಎರಡು ಯೋಜನೆಗಳ ಬಗ್ಗೆ ಪರಾಮರ್ಷೆ ನಡೆಸುವ ಮೂಲಕ ರೈತರಿಗೆ ನಿಜವಾದ ಮಾಹಿತಿಯನ್ನು ನೀಡಬಹುದಾಗಿದೆ. ಕಾದು ನೋಡೋಣ? ಬಹುಷಃ ಮೋದಿಯವರು ಸಹ ಹೇಳಿಕೆ ಬಗ್ಗೆ ನಗುತ್ತಿರಬಹುದು’