16th September 2024
Share

TUMAKURU:SHAKTHI PEETA FOUNDATION

ಇನ್ವೆಸ್ಟ್  ತುಮಕೂರು1 ನೇ ಸಭೆ ವರದಿ. ದಿ.05.10.2020

 ಕೇಂದ್ರ ಸರ್ಕಾರ 2020-21 ನೇ ಸಾಲಿನ ಆಯವ್ಯಯದಲ್ಲಿ 2022 ರೊಳಗೆ ರೈತರ ಆದಾಯ ದುಪ್ಪಟ್ಟು ಗೊಳಿಸಲು ‘ಪ್ರಾಡಕ್ಟ್-1 ಡಿಸ್ಟ್ರಿಕ್ಟ್-1’ ಯೋಜನೆ ಘೋಷಣೆ ಮಾಡಿದೆ. ರಾಜ್ಯ ಸರ್ಕಾರವೂ ವಿಧಾನಸಭಾ ಕ್ಷೇತ್ರಕ್ಕೊಂದು ಪ್ರಾಡಕ್ಟ್ ಯೋಜನೆ ಜಾರಿಗೊಳಿಸ ಬೇಕು ಎಂಬ ಚಿಂತನೆ ನಡೆಸಿತ್ತು.

 ಜಿಪಿ-1 ಪ್ರಾಡಕ್ಟ್-1’ ಎಂಬ ಘೋಷಣೆಯೊಂದಿಗೆ ತುಮಕೂರು ಜಿಲ್ಲೆಯಲ್ಲಿ ದೇಶಕ್ಕೆ ಮಾದರಿಯಾಗುವಂತಹ ಪ್ರಸ್ತಾವನೆ ಸಿದ್ಧಪಡಿಸಲು ಮುಂದಾಗಿದೆ. ಇಲ್ಲಿ ಟಾರ್ಗೆಟ್ ಎಂಬ ಲಿಮಿಟ್ ಇಲ್ಲ, ಅಭ್ಯರ್ಥಿಗಳ ಅರ್ಹತೆಯೇ ಪ್ರಮುಖವಾಗಿದೆ. ನಮ್ಮ ಗ್ರಾಮದಲ್ಲಿ ಇಂಥಹ ಕಚ್ಚಾವಸ್ತು ಇದೆ, ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂಥಹ ಕಚ್ಚಾ ವಸ್ತು ಹೇರಳವಾಗಿ ದೊರೆಯುತ್ತದೆ.

  ನಮಗೆ ಉದ್ದಿಮೆ ಆರಂಭಿಸಲು ಸ್ವಂತ ನಿವೇಶನ ಅಥವಾ ಕೃಷಿ ಜಮೀನು ಇದೆ ಅಥವಾ ನಮ್ಮ ಬಳಿ ಯಾವುದೇ ಭೂಮಿ ಇಲ್ಲ ಆದರೇ ನಮ್ಮ ಗ್ರಾಮದಲ್ಲಿ ಇಂತಿಷ್ಟು ಸರ್ಕಾರಿ ಜಮೀನು ಇದೆ ಅಥವಾ ನನ್ನ ಬಳಿ ಯಾವೂದೂ ಇಲ್ಲ,  ಇಲ್ಲಿ ನಮಗೆ ಉದ್ದಿಮೆ ಆರಂಭಿಸಲು ಜಮೀನು ನೀಡಿ ಎಂಬ ಮಾಹಿತಿಯೊಂದಿಗೆ ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಅಥವಾ ಗ್ರಾಮ ಪಂಚಾಯಿತಿಗೆ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಒಂದು ಮನವಿ ನೀಡ ಬೇಕಾಗುವುದು. 

 ಜೊತೆಗೆ ಯಾವ ಉದ್ದಿಮೆ ಮಾಡಲು ಬಯಸುತ್ತೀರಿ ಎಷ್ಟು ಸಾಲದ ಅಗತ್ಯವಿದೆ,  ಎಷ್ಟು ಜನರಿಗೆ ಉದ್ಯೋಗ ನೀಡುತ್ತಿರಿ, ಯಾವ ಬ್ಯಾಂಕಿನಲ್ಲಿ ಸಾಲ ಪಡೆಯಲು ಇಚ್ಚಿಸಿದ್ದೀರಿ ಎಂಬ ಬಗ್ಗೆಯೂ ತಿಳಿಸಿ. ಉಳಿದ ವಿಚಾರವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ. ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ, ನೇರವಾಗಿ ನಿಮ್ಮ ತಾಲ್ಲೂಕಿನ ಕೈಗಾರಿಕಾ ಅಧಿಕಾರಿಗಳಿಗೆ ಮನವಿ ಸಲ್ಲಿಸಬಹುದು ಅಥವಾ ಆನ್‌ಲೈನ್‌ನಲ್ಲಿ ನೊಂದಾಯಿಸುವ ವ್ಯವಸ್ಥೆ ಮಾಡಲು ಚಿಂತನೆ ಆರಂಭವಾಗಿದೆ.

ಸಾಲ ದುರುಪಯೋಗ ಮಾಡುವವರು ಇತ್ತ ತಲೆ ಹಾಕಬೇಡಿ, ಭೂಮಿ ಪಡೆದು ರಿಯಲ್ ಎಸ್ಟೇಟ್ ಮಾಡುವ ಕನಸು ಇರುವವರು ಸಹ ಅರ್ಜಿಹಾಕಬೇಡಿ, ನಾವೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠ, ಛಲ ಇರುವವರಿಗೆ ಮಾತ್ರ ಅವಕಾಶವಿರುತ್ತದೆ. ಇಲ್ಲಿ ತರಬೇತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಉದ್ದಿಮೆದಾರರನ್ನು ಡಿಜಿಟಲ್ ವ್ಯವಸ್ಥೆ ಸದಾ ಪರಿಶೀಲನೆ ನಡೆಸುವಂತಹ ವ್ಯವಸ್ಥೆಗೆ ಚಿಂತನೆ ನಡೆದಿದೆ’

 ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್ ಒಂದು ಯುನಿಟ್ ಎಂದು ಭಾವಿಸಲಾಗುವುದು. ಪ್ರತಿಯೊಂದು ಗ್ರಾಮದವರೂ ಉದ್ದಿಮೆ ಆರಂಭಿಸ ಬಹುದು. ಡೈರಿಗಳಲ್ಲಿ ಯಾವ ರೀತಿ ಪ್ರತಿ ದಿವಸ ಹಾಲು ಸಂಗ್ರಹಣೆ ಮಾಡಲಾಗುತ್ತದೆಯೋ ಅದೇ ರೀತಿ ರೈತರು ಬೆಳೆದ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಸಂಗ್ರಹ ಮಾಡಿ ಮಾರುಕಟ್ಟೆ ಮಾಡಲು ಚಿಂತನೆ ನಡೆಸಲಾಗಿದೆ.

 ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಈ ಕಲ್ಪನೆಯನ್ನು ದಿಶಾ ಸಭೆಯಲ್ಲಿ ಹಂಚಿಕೊಂಡಿದ್ದರು. ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಭಾಗಿತ್ವದಲ್ಲಿ ಅಧ್ಯಯನ ಆರಂಭವಾಗಿದೆ.

 ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು  ಇದಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆಯನ್ನು ತುಮಕೂರು ಸ್ಮಾರ್ಟ್ ಅಡಿ ಮಾಡಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನಂದಿನಿ ಮಾದರಿಯಲ್ಲಿ ಜಿಲ್ಲೆಗೆ ಒಂದು ಬ್ರ್ಯಾಂಡ್ ಮಾಡಿ ದೇಶ ವಿದೇಶಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲು ಅಧ್ಯಯನ ಆರಂಭವಾಗಿದೆ.

 ಆಸಕ್ತಿ ಇರುವ ಸಂಘ ಸಂಸ್ಥೆಗಳ ತಮ್ಮ ಕನಸನ್ನು ಹಂಚಿಕೊಳ್ಳಬಹುದು. ಉದ್ಧಿಮೆಗೆ ಸಂಬಂಧಿಸಿದ ಜಿಲ್ಲೆಯ ಎಲ್ಲಾ ಗ್ರಾಮವಾರು, ಡಿಜಿಟಲ್ ಮಾಹಿತಿ ಜಿಐಎಸ್ ಆಧಾರದಲ್ಲಿ ಒಂದೇ ಪೋರ್ಟಲ್‌ನಲ್ಲಿ ದೊರೆಯಲಿದೆ. ತುಮಕೂರು ಜಿಲ್ಲೆ ನಿರುದ್ಯೋಗ ರಹಿತ ಜಿಲ್ಲೆಯಾಗ ಬೇಕು ಎಂಬ ಕನಸು ದಿಶಾ ಸಮಿತಿಗೆ ಇದೆ.

 ಅದನ್ನು ಬಳಸಿಕೊಳ್ಳುವ ರೈತರು, ನಿರುದ್ಯೋಗಿಗಳು ಮುಂದೆ ಬರಬೇಕು, ಈ ಬಗ್ಗೆ ದಿನಾಂಕ:30.06.2020 ರ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಅಧಿಕೃತವಾಗಿ ಈಗ ಚಾಲನೆ ನೀಡಲಾಗಿದೆ. ಇಲ್ಲಿಯವರೆಗೂ ಅದೆಷ್ಟೊ ಸಭೆ ಮಾಡಿದ್ದರೂ ಲೆಕ್ಕವಿಲ್ಲ ದಿನಾಂಕ: 05.10.2020 ರಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು ಇನ್‌ವೆಸ್ಟ್ – ತುಮಕೂರು  ರೂಪುರೇಷೆಗಳ ಬಗ್ಗೆ ಪ್ರಥಮ ಸಭೆ ನಡೆಸಿದ್ದಾರೆ.

 ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೆಶಕರಾದ ಶ್ರೀ ನಾಗೇಶ್‌ರವರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ರಂಗಸ್ವಾಮಿರವರು ಮಾದರಿ ಯೋಜನೆಗೆ ಚಾಲನೆ ನೀಡಿದ್ದಾರೆ. ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಒಂದು ಸಮಿತಿ ರಚನೆಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸುವುದು ಮತ್ತು  ತುಮಕೂರು ಜಿಲ್ಲೆಯ ಉದ್ಧಿಮೆದಾರರ ಎಲ್ಲಾ ಮಾಹಿತಿಗಳ ಸಂಗ್ರಹವನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಲು  ಪ್ರಥಮ ಸಭೆಯಲ್ಲಿ ನಿರ್ಣಯ ಮಾಡಿದ್ದಾರೆ. 

 ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಶಕ್ತಿಪೀಠ ಫೌಂಡೇಷನ್ ಈ ಯೋಜನೆ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಯಾಗುವವರೆಗೂ ಕಡತ ಅನುಸರಣೆ ಮಾಡಲಾಗುವುದು. ಈ ಪ್ರಸ್ತಾವನೆಯ ಹೊಣೆಗಾರಿಕೆಯನ್ನು ತುಮಕೂರಿನ ಲೈವ್‌ಸಂಸ್ಥೆಯ ಶ್ರೀ ಪ್ರಮೋದ್ – 72598 35825 ಪಡೆದಿದ್ದಾರೆ.

 ‘ಜಿಲ್ಲೆಯ ಎಲ್ಲಾ ವಿಧಾನಸಭಾ ಸದಸ್ಯರು ಬಗ್ಗೆ ವಿಶೇಷ ಗಮನ ಹರಿಸುವುದು ಸೂಕ್ತವಾಗಿದೆ.  ಚುನಾಯಿತ ಜನಪ್ರತಿನಿಧಿಗಳ ಆಪ್ತ ಕಾರ್ಯದರ್ಶಿ ಹಾಗೂ ಆಪ್ತಸಹಾಯಕರು  ವಿಶೇಷ ಗಮನ ಹರಿಸಿ ಮೌನ ಒಳ್ಳೆಯದಲ್ಲ’