20th April 2024
Share

SURVEY OF VILLAGES AND MAPPING WITH IMPROVISED TECHNOLOGY IN VILLAGE AREAS

TUMAKURU:SHAKTHI PEETA FOUNDATION

ಸ್ವಮಿತ್ವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರ ಪ್ರಮುಖ ಉದ್ದೇಶ  ದೇಶದ ಎಲ್ಲಾ ಗ್ರಾಮಗಳಲ್ಲಿರುವ ವಸತಿ ಆಸ್ತಿಗಳ ಮತ್ತು ವಿವಿಧ ವಿಧವಾದ ಕಟ್ಟಡಗಳಿಗೆ ಸ್ವತ್ತಿನ ಕಾರ್ಡ್ ವಿತರಣೆ ಮಾಡುವುದಾಗಿದೆ. ಪ್ರತಿಯೊಬ್ಬರ ನಿವೇಶನ, ವಸತಿ ಅಥವಾ ಇತರೆ ಯಾವುದೇ ಕಟ್ಟಡಗಳ ಪಕ್ಕಾ ದಾಖಲೆ, ಶೇ ೧೦೦ ರಷ್ಟು ಇ-ಸ್ವತ್ತು ಜನರ ಮನೆಬಾಗಿಲಿಗೆ.

 ನೂರಾರು ವರ್ಷಗಳಿಂದ ದಾಖಲೆ ಇಲ್ಲದ ಜನರಿಗೆ ಒಂದು ಸುವರ್ಣ ಅವಕಾಶ. ಗ್ರಾಮಠಾಣದಲ್ಲಿ ಮನೆ ಇರುತ್ತದೆ ಆದರೇ ದಾಖಲೆಗಳಿಲ್ಲ, ಸರ್ಕಾರಿ ಜಮೀನಿನಲ್ಲಿ ಮನೆ ಇರುತ್ತದೆ ಆದರೇ ದಾಖಲೆಗಳಿಲ್ಲ, ನಮ್ಮದೇ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಲಾಗಿದೆ ಬ್ಯಾಂಕ್‌ನಲ್ಲಿ ಸಾಲಪಡೆಯಲು ಆಗುತ್ತಿಲ್ಲ. ಇವರೆಲ್ಲರಿಗೂ ಉತ್ತರ ಸ್ವಮಿತ್ವ ಯೋಜನೆ. ಜನರೇ ಎಚ್ಚರವಹಿಸಿ ದಾಖಲೆ ಪಡೆದುಕೊಳ್ಳಿ 2022 ರೊಳಗೆ ಪಕ್ಕಾ ದಾಖಲೆ ನಿಮ್ಮ ಕೈಸೇರಲಿದೆ.

  ಇದು ಸಹ ಕೇಂದ್ರ ಸರ್ಕಾರದ ಕಾಲಮಿತಿ ಯೋಜನೆ 2022 ರೊಳಗೆ, ಅಂದರೆ 75 ನೇ ವರ್ಷದ ಸ್ವಾತಂತ್ರ್ಯ ದಿವಸದ ಅಂಗವಾಗಿ  ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳ ಗ್ರಾಮಠಾಣ ಆಸ್ತಿಗಳ ಮತ್ತು ಸರ್ವೆ ನಂಬರ್‌ಗಳಲ್ಲಿ ನಿರ್ಮಾಣ ಮಾಡಿರುವ ವಸತಿ ಕಟ್ಟಡಗಳ ಸಮೀಕ್ಷೆಯನ್ನು ಡ್ರೋನ್ ಮೂಲಕ   ಪೂರ್ಣಗೊಳಿಸುವುದು ಮತ್ತು ಎಲ್ಲರಿಗೂ ಸ್ವತ್ತಿನ ಕಾರ್ಡ್ ವಿತರಣೆ ಮಾಡಲಾಗುವುದು.

 ದಿನಾಂಕ:20.04.2020 ರಂದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಈ ಯೋಜನೆಯನ್ನು ಉದ್ಘಾಟನೆ ಮಾಡಿರುತ್ತಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ನರೇಂದ್ರಸಿಂಗ್ ತೋಮರ್‌ರವರು ವಿಶೇಷ ಆಸಕ್ತಿ ವಹಿಸಿ ಎಲ್ಲಾ ರಾಜ್ಯಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಶ್ರಮಿಸುತ್ತಿದ್ದಾರೆ.

 ರಾಜ್ಯದಲ್ಲಿ ಈ ಯೋಜನೆ ಯಶಸ್ವಿಗಾಗಿ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಮತ್ತು ಕಂದಾಯ ಸಚಿವರಾದ ಶ್ರೀ ಆರ್. ಅಶೋಕ್‌ರವರ ತಂಡ ಸಮೋರಾಪದಿಯಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದೆ.

  ಫೈಲಟ್ ಯೋಜನೆಯಾಗಿ ಹರ್‍ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮತ್ತು ಉತ್ತರಖಾಂಡ ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ. ಪಂಚಾಯತ್ ರಾಜ್ ಇಲಾಖೆ, ಭಾರತದ ಸರ್ವೆ ಆಫ್ ಇಂಡಿಯಾ ಮತ್ತು ಭೂಮಾಪನ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯಲಿದೆ.

  ಈಗಾಗಲೇ ಪ್ರಥಮ ಹಂತದಲ್ಲಿ ಕರ್ನಾಟಕ ರಾಜ್ಯದ ರಾಮನಗರ, ಹಾಸನ, ತುಮಕೂರು, ಬೆಳಗಾಂ, ಉತ್ತರಕನ್ನಡ, ಕೊಡಗು, ದಕ್ಷಿಣ ಕನ್ನಡ, ಮೈಸೂರು, ವಿಜಯಪುರ, ಕಲ್ಬುರ್ಗಿ, ದಾವಣಗೆರೆ, ಧಾರವಾಡ, ಗದಗ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳಗಳು ಸೇರಿದಂತೆ ಸುಮಾರು 16600 ಗ್ರಾಮಗಳ ಸಮೀಕ್ಷೆಗೆ ಆದೇಶಿಸಲಾಗಿದೆ. ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

 ಕರ್ನಾಟಕ ರಾಜ್ಯ ಸ್ವಮಿತ್ವದ ಜೊತೆಗೆ  ಕೃಷಿ ಭೂಮಿಗಳ ಮರುಭೂಮಾಪನ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳುತ್ತಾರೆ. ಯೋಜನೆ ಕೈಗೊಂಡ ಪ್ರದೇಶಗಳ ಮಾಹಿತಿ ಸಂಗ್ರಹಿಸಿ ಹೆಚ್ಚಿನ ಮಾಹಿತಿ ನೀಡಬಹುದಾಗಿದೆ.

ತುಮಕೂರು ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿಗಳ ಸಮೀಕ್ಷೆ ಈಗಾಗಲೇ ಆರಂಭವಾಗಿದೆ. ಸಂಸದರ ಆದರ್ಶ ಗ್ರಾಮದ ಯೋಜನೆಗೆ ಆಯ್ಕೆಯಾಗಿರುವ ಗುಬ್ಬಿ ವಿಧಾನ ಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯು ವ್ಯಾಪ್ತಿಗೆ ಆಯ್ಕೆಯಾಗಿದ್ದು ಸಂಪೂರ್ಣ ಸಾಧಕ- ಭಾದಕಗಳನ್ನು ನಮ್ಮ ಸಂಸ್ಥೆ ಅಧ್ಯಯನ ಮಾಡಲು ಚಿಂತನೆ ನಡೆಸಿದೆ’

ಈ ಯೋಜನೆಯ ಬಗ್ಗೆ ಆಸಕ್ತರು ವಿವರವಾದ ವರದಿ ನೀಡಬಹುದು.