29th March 2024
Share

TUMAKURU:SHAKTHI PEETA FOUNDATION

TUMAKURU INVEST- 2 nd MEETING

  ತುಮಕೂರು ಜಿಲ್ಲಾ ದಿಶಾ ಸಮಿತಿ 2019-20  ನೇ ಸಾಲಿನಲ್ಲಿ  ವರ್ಷ ಪೂರ್ತಿ ಜಿಐಎಸ್ ಲೇಯರ್ ಮಾಡುವ ವರ್ಷವಾಗಿತ್ತು. ಸುಮಾರು ನಾಲ್ಕು ಸಭೆಗಳಲ್ಲಿ ಸುಧೀರ್ಘವಾಗಿ ಚರ್ಚಿಸಲಾಗಿದೆ. ಪ್ರತಿ ವಾರವೂ ಇಲಾಖಾವಾರು ಸಭೆ ನಡೆಸುವ ಮೂಲಕ ಜಿಐಎಸ್ ಅಧಿಕಾರಿಗಳ ಜಾಗೃತಿ ಆಂದೋಲನ’ ವನ್ನು ಜಿಲ್ಲಾ ಪಂಚಾಯತ್‌ನಲ್ಲಿ ಸಿಇಓ ಶ್ರೀಮತಿ ಶುಭಕಲ್ಯಾಣ್‌ರವರು  ಮತ್ತು ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್ ಕುಮಾರ್‌ರವರು ಪ್ರತ್ಯೇಕವಾಗಿ ನಡೆಸಿದ್ದು ಇತಿಹಾಸ.

 2020-21  ನೇ ಸಾಲಿನಲ್ಲಿ ಈ ಡೇಟಾಗಳನ್ನು ಮೂಲಾಧಾರ ಇಟ್ಟುಕೊಂಡು ಯೋಜನೆಗಳ ಅನಾಲೀಸಿಸ್ ಮಾಡುವ ಮೂಲಕ ಹಾಲಿ ಆಗಿರುವ ಅಭಿವೃದ್ಧಿ ಯೋಜನೆಗಳ ಲೇಯರ್ ಹಾಗೂ ಮುಂದೆ ಕೈಗೊಳ್ಳಬಹುದಾದ ಯೋಜನೆಗಳ ಲೇಯರ್ ಮಾಡುವ ಮೂಲಕ ಅಭಿವೃದ್ಧಿಯಲ್ಲಿ ಜಿಐಎಸ್ ಕ್ರಾಂತಿ’ ಮಾಡುವ ಬಗ್ಗೆ ಇಂದು (07.10.2020) ಸಿಇಓ ಶ್ರೀಮತಿ ಶುಭಕಲ್ಯಾಣ್‌ರವರೊಂದಿಗೆ ಸಮಾಲೋಚನೆ ನಡೆಸಲಾಯಿತು. 

 ತಕ್ಷಣವೇ ಸ್ಪಂಧಿಸಿದ ಸಿಇಓ ಮತ್ತು ಅಧಿಕಾರಿಗಳ ತಂಡ ಎಲ್ಲಾ ಇಲಾಖೆಗಳಿಗೂ ಪತ್ರ ಬರೆಯುವ ಮೂಲಕ ಇದೂವರೆಗೂ ಮಾಡಿರುವ ಸಭೆ ನಡವಳಿಕೆಗಳ ಪ್ರತಿಯೊಂದು ಯೋಜನೆಗಳ ಪಾಲನಾ ವರದಿ ಮಾಹಿತಿ ನೀಡಲು ಸೂಚಿಸಿದ್ದಾರೆ.

ಯೋಜನಾ ನಿರ್ದೇಶಕರಾದ ಶ್ರೀ ಮೋಹನ್‌ಕುಮಾರ್‌ರವರೊಂದಿಗೆ ಎನ್.ಆರ್.ಡಿ.ಎಂ.ಎಸ್ ವಿಭಾಗಕ್ಕೆ ಭೇಟಿ ನೀಡಿ, ಶ್ರೀ ಸತೀಶ್‌ರವರೊಂದಿಗೆ ಸಮಾಲೋಚನೆ ನಡೆಸಿ ವಿವಿಧ ಜಿಐಎಸ್ ಲೇಯರ್‌ಗಳನ್ನು ಪರಿಶೀಲಿಸಲಾಯಿತು.  ದಿಶಾ ಸಮಿತಿ ನಿರ್ಣಯದ ಮೇರೆಗೆ ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸ್ತ್ರೀ ಸಂಘಗಳ ಫೆಡ್‌ರೇಷನ್‌ಗಳು ತಯಾರಿಸುವ ಉತ್ಪನ್ನಗಳ ಜಿಐಎಸ್ ಲೇಯರ್ ಪರಿಶೀಲಿಸಿದಾಗ ಸಮರ್ಪಕವಾದ ಮಾಹಿತಿ ದೊರೆಯಲಿಲ್ಲ.

 ಸತೀಶ್‌ರವರೇ ನಾನೊಬ್ಬ ರೈತ ನನಗೆ ತಿಳುವಳಿಕೆ ಕಡಿಮೆ ನಾನು ಕೇಳಿದ ಮಾಹಿತಿಯನ್ನು ಜಿಐಎಸ್ ಆಧಾರಿತ ನಕ್ಷೆಯಲ್ಲಿ ತೋರಿಸಲು ನಿಮಗಿರುವ ಸಮಸ್ಯೆ ಹೇಳಿ ಅಥವಾ ತೋರಿಸಿ, ಈ ಎರಡು ಬಿಟ್ಟು ಬೇರೆ ಕಥೆ ಹೇಳಿದರೆ ನಾನು ಕೇಳುವುದಿಲ್ಲ.

 ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಮಟ್ಟದ ದಿಶಾ ಸಮಿತಿಗೆ ಹಾಗೂ ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರು ಜಿಲ್ಲಾ ದಿಶಾ ಸಮಿತಿಗೆ ಸದಸ್ಯನಾಗಿ ಮಾಡಿದ್ದಾರೆ. ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಸದಸ್ಯರು ಈ ಕೆಲಸ ಮಾಡಿ ಎಂದಿದ್ದಾರೆ. ನಾನು ಕೇಳಬಹುದಾ ಅಥವಾ ಬೇಡವಾ ತಿಳಿಸಿ ಎಂದಾಗ ಶ್ರೀ ಮೋಹನ್ ಕುಮಾರ್‌ರವರು ಒಂದು ವಾರದೊಳಗೆ ಎಲ್ಲಾ ಸಮಸ್ಯೆ ಬಗೆಹರಿಸಿ ನೀವು ಕೇಳಿದ ಮಾಹಿತಿ ನೀಡುವ ಭರವಸೆ ನೀಡಿದರು.

 ‘ಸರ್ವರ್ ಸಮಸ್ಯೆ ಎಂದು ತಿಳಿಸಿದಾಗ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನಿರ್ದೆಶಕರಾದ ಶ್ರೀ ಪ್ರಭುರವರಿಗೆ ಮಾತನಾಡಿ ಸರ್ವರ್ ಸಮಸ್ಯೆ ಕೃತಕವಾಗಿ ಆಗಿದೆಯೋ ಅಥವಾ ನಿಜವಾಗಿ ಆಗಿದೆಯೋ ತಿಳಿದುಕೊಳ್ಳಲು ಆಟೋಮ್ಯಾಟಿಕ್ ಡಿಜಿಟಲ್ ರೆಕಾರ್ಡಿಂಗ್ ಸಿಸ್ಟ್ಂ ಮಾಡುವ   ಮಾಹಿತಿ ನೀಡುವ ಬಗ್ಗೆಯೂ ಚರ್ಚಿಸಲಾಯಿತು’

ಶ್ರೀ ಮೋಹನ್ ಕುಮಾರ್‌ರವರು ಸತೀಶ್‌ರವರಿಗೆ ಪ್ರಸ್ತುತ ಪೂರ್ಣಗೊಂಡಿರುವ, ಪ್ರಗತಿಯಲ್ಲಿರುವ, ಆರಂಭಿಸಬೇಕಾಗಿರುವ ಇಲಾಖಾವಾರು ಜಿಐಎಸ್ ಲೇಯರ್ ಪಟ್ಟಿ  ಮಾಡಲು ಸೂಚಿಸಿದರು. ತುಮಕೂರು ಇನ್‌ವೆಸ್ಟ್ ವರದಿ ತಯಾರಿಸುವ ಬಗ್ಗೆ ಸ್ತ್ರೀ ಸಂಘಗಳ ಫೆಡ್‌ರೇಷನ್‌ಗಳ ಸಹಕಾರದ ಬಗ್ಗೆಯೂ ಚರ್ಚಿಸಲಾಯಿತು. 

ಶ್ರೀ ಶಶಿಕುಮಾರ್, ಶ್ರೀ ಪ್ರಮೋದ್ ಮತ್ತು ಶ್ರೀ ಅಶೋಕ್ ಇನ್ನೂ ಮುಂತಾದವರು ಇದ್ದರು.