22nd December 2024
Share

TUMAKURU:SHAKTHI PEETA FOUNDATION

ತೋಟಗಾರಿಕಾ ಇಲಾಖೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಇರುವ ಅವಕಾಶಗಳ ಬಗ್ಗೆ ತೋಟಗಾರಿಕಾ ಉಪನಿರ್ದೇಶಕರಾದ ಶ್ರೀ ಬಿ. ರಘುರವರೊಂದಿಗೆ ದಿನಾಂಕ:07.10.2020 ರಂದು ಅವರ ಕಚೇರಿಯಲ್ಲಿ ಸಮಾಲೋಚನೆ ನಡೆಸಲಾಯಿತು.

 ಕೇಂದ್ರ ಸರ್ಕಾರ ಚಿಂತನೆ ನಡೆಸಿ ಭಾರತ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಡಿಸ್ಟ್ರಿಕ್-1, ಪ್ರಾಡಕ್ಟ್ –1’ ಯೋಜನೆಯಡಿ ಒಂದು ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಬೆಳೆಯುವ ಬೆಳೆಗಳಿಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಅವಕಾಶ ಕಲ್ಪಿಸಿದೆ.

 ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಬೆಳೆಯುವ ತೆಂಗು, ಮಾವು, ಹುಣಿಸೆ ಹಣ್ಣು ಹೀಗೆ ಹತ್ತಾರು ಬೆಳೆಗಳ ಬಗ್ಗೆ ಪರಿಶೀಲಿಸಿ ತುಮಕೂರು ಜಿಲ್ಲೆಯಲ್ಲಿ ತೆಂಗು ಉತ್ಪನ್ನಗಳನ್ನು ಮಾಡಲು ವಿಫುಲ ಅವಕಾಶಗಳಿವೆ ಎಂದು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು. ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆ. 

 ಇಲಾಖೆಯಲ್ಲಿ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಇರುವ ಅವಕಾಶಗಳ ಬಗ್ಗೆ ಚರ್ಚಿಸಿ, ಗ್ರಾಮ ಪಂಚಾಯಿತಿವಾರು ಮಾಹಿತಿ ನೀಡುವ ಬಗ್ಗೆ ತಿಳಿಸಿದ್ದಾರೆ. ಇನ್‌ವೆಸ್ಟ್ ತುಮಕೂರು ಸಲಹಗಾರಾರದ ಶ್ರೀ ಪ್ರಮೋದ್, ಅಧಿಕಾರಿಗಳಾದ ಶ್ರೀ ದಿನೇಶ್, ಶ್ರೀಮತಿ ರೂಪ ಇನ್ನೂ ಮುಂತಾದವರು ಜಿಲ್ಲೆಯ ತೋಟಗಾರಿಕಾ ಫಾರಂ, ಹಾಲಿ ಇರುವ ಉದ್ದಿಮೆಗಳು, ಮುಂದೆ ಏನೇನು ಮಾಡಲು ಅವಕಾಶವಿದೆ ಎಂಬ ಬಗ್ಗೆ ವಿಷಯ ಹಂಚಿಕೊಂಡರು.

ಕರ್ನಾಟಕ ರಾಜ್ಯದ ತೆಂಗುಬೆಳೆಗಾರರ ಬಹಿರಂಗ ಸವಾಲು.

 ತುಮಕೂರು ಜಿಲ್ಲೆಯ ಎಲ್ಲಾ ಪಕ್ಷದ ಚುನಾಯಿತ ಜನಪ್ರತಿನಿಧಿಗಳಿಗೆ ತೆಂಗು ಬಗ್ಗೆ ಬದ್ಧತೆ ಇಲ್ಲ, ಇದೂವರೆಗೂ   COCONUT SPECIAL  ECONOMIC ZONE  ಮಾಡಲು ಸಾಧ್ಯಾವಾಗಿಲ್ಲ. ಬಹುತೇಕ ಪ್ರತಿ ವರ್ಷವೂ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೆಂಗು ಪಾರ್ಕ್ ಸ್ಥಾಪನೆ ಎಂದು ಆಯವ್ಯಯದಲ್ಲಿ ಮಾತ್ರ ಬರುತ್ತಲೇ ಇದೆ.

 ಕಾಂಗ್ರೆಸ್ ಸರ್ಕಾರದಲ್ಲಿ ಕೊರಟಗೆರೆಯ ಶ್ರೀ ಚಲಿಯವರು ಕರ್ನಾಟಕ ರಾಜ್ಯ ತೆಂಗಿನ ನಾರಿನ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದಾಗ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಕೆ.ಪಿ.ಮೋಹನ್‌ರಾಜ್‌ರವರು ಬೆಂಬಲ ನೀಡಿದ್ದರು, ಸರ್ಕಾರಿ ಜಾಗ ಕೊಡಲು ಮುಂದಾದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸಿದ್ದರೂ ನಿಗಮದ ಅಧ್ಯಕ್ಷರು ಮತ್ತು ಎಂಡಿ ಜಗಳದಲ್ಲಿ ನೆನೆಗುದಿಗೆ ಬಿತ್ತು. ನಾನು ಪಟ್ಟ ಶ್ರಮವೂ ವ್ಯರ್ಥವಾಯಿತು.

 ಹಿಂದಿನ ಸರ್ಕಾರದಲ್ಲಿ ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‌ರವರಿಗೆ ಸಣ್ಣ ಕೈಗಾರಿಕಾ ಖಾತೆಯು ಇತ್ತು. ನಿಗಮದ ಅಧ್ಯಕ್ಷರು ಆಗಿದ್ದರೂ ಪ್ರಯೋಜನವಾಗಲಿಲ್ಲ ಅವರ ಕ್ಷೇತ್ರದಲ್ಲಿದ್ದ ಸರ್ಕಾರಿ ಜಮೀನು ಗುರುತಿಸಿ ಯೋಜನೆಗೆ ಚಾಲನೆ ನೀಡಲು ಸಾಧ್ಯಾವಾಗಲಿಲ್ಲ ಇದೂ ಒಂದು ದುರಂತ.

  ಕುಣಿಗಲ್‌ನಲ್ಲಿ, ಶಿರಾದಲ್ಲಿ, ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ, ತೆಂಗು ಪಾರ್ಕ್ ಸ್ಥಾಪನೆ ಆಯವ್ಯಯದಲ್ಲಿ ಬಂದು ಹೋಗಿದೆ. ಶಿರಾದಲ್ಲಿ ತೆಂಗು ಪಾರ್ಕ್ ಸ್ಥಾಪಿಸಲು ಸ್ಥಳವನ್ನು ನಿಗದಿ ಪಡಿಸಲಾಗಿದೆ. ಆದರೂ ಪಲಿತಾಂಶ ಶೂನ್ಯ.

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಕೋಕೊನಟ್ ಡೆವಲಪ್‌ಮೆಂಟ್ ಬೋರ್ಡ್ ಸದಸ್ಯರು ಆಗಿದ್ದಾರೆ. ತಿಪಟೂರು ಶಾಸಕರಾದ ಶ್ರೀ ಬಿ.ಸಿ.ನಾಗೇಶ್‌ರವರು ರಾಜ್ಯದ ತೆಂಗಿನ ನಾರಿನ ನಿಗಮದ ಅಧ್ಯಕ್ಷರು ಎಂದು ಘೋಷಣೆಯೂ ಆಗಿದೆ.

 ಈ ಅವಕಾಶ ಇದ್ದರೂ ಇವರಿಬ್ಬರೂ ಜಿಲ್ಲೆಯ ತೆಂಗು ಬೆಳೆಗಾರರಿಗೆ ದ್ರೋಹ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇವರಿಬ್ಬರೂ ಇಂದಿನಿಂದ ಮನಸ್ಸು ಮಾಡಿದರೆ, ಈ ಅವಧಿಯಲ್ಲಿ ಸುಮಾರು ರೂ 500 ಕೋಟಿ ವೆಚ್ಚದ ಯೋಜನೆ ರೂಪಿಸಬಹುದು. ಕೇಂದ್ರದಲ್ಲಿ ನೂರಾರು ಕೋಟಿ ಕೊಳೆಯುತ್ತಿದೆ. ಹುಡುಕಿ ತರುವ ಚಾಣಾಕ್ಷತೆ ಬೇಕು ಅಷ್ಟೆ.

  ಇವರಿಬ್ಬರೂ ಕುಳಿತು ಚಿಂತನೆ ಮಾಡಿ ಜಿಲ್ಲೆಯ ಯಾವುದೇ ಭಾಗದಲ್ಲಿಯಾದರೂ ಮಾಡಿ, ಇಲ್ಲವೇ     ಮಾಡಲು ಮುಂದೆ ಬರುವವರೆಗೆ ಬಹಿರಂಗವಾಗಿ ಬೆಂಬಲ ಘೋಶಿಸಿ, ಅಂತರ ರಾಷ್ಟ್ರೀಯ ಮಟ್ಟದ  COCONUT SPECIAL  ECONOMIC ZONE  ಮಾಡಿ ತೋರಿಸುತ್ತೇವೆ. ಇದು ಕರ್ನಾಟಕ ರಾಜ್ಯದ ತೆಂಗುಬೆಳೆಗಾರರ ಬಹಿರಂಗ ಸವಾಲು,

 ಚುನಾವಣಾ ಸಮಯದಲ್ಲಿ ರಾಷ್ಟ್ರೀಯ ಬಿಜೆಪಿ ಪಕ್ಷದ ಅಧ್ಯಕ್ಷರಾದ ಶ್ರೀ ಅಮಿತ್‌ಷಾರವರಿಂದ ಮತ್ತು ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದಲೂ ಭಾಷಣ ಮಾಡಿಸಿದ್ದೀರಿ ನಿಮಗೆ ನೆನಪು ಇರಬೇಕು. ಅವಕಾಶವಿದ್ದಾಗ ಸುಮ್ಮನಿರುವುದು ಸರಿಯಲ್ಲ.