TUMAKURU:SHAKTHI PEETA FOUNDATION
ಕರ್ನಾಟಕ ರಾಜ್ಯ ಸರಕಾರ ಮಾಹಿತಿ ತಂತ್ರಜ್ಞಾನ ಕಾರ್ಯ ನೀತಿ 2020-25 [ಕರಡು]ಯನ್ನು ವಲಯಾವಾರು ವರ್ಗೀಕರಣ ಮಾಡಿ ದಿನಾಂಕ 17.09.2020 ಗೆಜೆಟ್ ಪ್ರಕಟಣೆ ಮಾಡಲಾಗಿದೆ. ಆದರೆ ತುಮಕೂರು ಜಿಲ್ಲೆ ನಾಪತ್ತೆಯಾಗಿದೆ. ಕಾರಣ ಗೊತ್ತಿಲ್ಲ
ರಾಜ್ಯ ಸರಕಾರ ಕರ್ನಾಟಕ ಮಾಹಿತಿ ತಂತ್ರಜ್ಞಾನ ಕಾರ್ಯ ನೀತಿ 2020-25 [ಕರಡು] ನೀತಿಗೆ ಅನುಮೋದನೆ ಯನ್ನು ದಿನಾಂಕ 7/9/20 ರ ಆದೇಶ ಸಂಖ್ಯೆ : ಐಟಿಬಿಟಿ 07.ಎಡಿಎಂ. 2019 ರಲ್ಲಿ ನೀಡಿದ ಹಿನ್ನಲೆಯಲ್ಲಿ 17.09.2020 ರ ಗೆಜೆಟ್‌ನಲ್ಲಿ ಪ್ರಕಟಣೆಯಾಗಿದೆ. ಕೈಗಾರಿಕಾ ಪರ,ಬಂಡವಾಳ ಹೂಡಿಕೆಗೆ ಸ್ನೇಹೀಪರ ವಾತಾವರಣ,ಅದಕ್ಕೆ ಪೂರಕ ಅಂಶಗಳನ್ನು ಅಡಕಮಾಡಿ ಕರ್ನಾಟಕವನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಯ್ಕೆಯ ತಾಣವನ್ನಾಗಿಸಲು, ಹೆಚ್ಚು ಆಕರ್ಷವಾಗಿರಲು ಹಲವಾರು ಉತ್ತೇಜಕ ಅಂಶಗಳನ್ನು ವಿವರಿಸಿದೆ.
ಜೊತೆಗೆ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಈ ಆವರಣದ ಹೂಡಿಕೆಯನ್ನು ಚದುರಿಸಲು ಹೊರಬೆಂಗಳೂರಿನ ಪ್ರದೇಶಗಳನ್ನು ವಲಯಾವಾರು ವರ್ಗೀಕರಿಸಿ ಗುರುತಿಸಿದೆ. ಇದು ಸ್ವಾಗತಿಸುವ ವಿಚಾರವಾಗಿದೆ.
ರಾಜ್ಯ ಪತ್ರದಲ್ಲಿನ ಪ್ರಕಟಿಸಿರುವ ಆದೇಶ ಪ್ರತಿಗೆ ಲಗತ್ತಾಗಿರುವ ಕರಡು ಮಾಹಿತಿ ತಂತ್ರಜ್ಞಾನ ಕಾರ್ಯ ನೀತಿ 2020-25 ಕಂಡಿಕೆ ಯಲ್ಲಿ ವಲಯಾವಾರು ಉತ್ತೇಜಕ ಅಂಶಗಳನ್ನು ಗುರ್ತಿಸಿದ್ದು,ಅದರಲ್ಲಿನ ಕಂಡಿಕೆ 11 ರಲ್ಲಿ ರಾಜ್ಯದ ಬೆಂಗಳೂರು ಉತ್ತರ, ದಕ್ಷಿಣ ತಾಲ್ಲೂಕು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ,ದಾವಣಗೆರೆ,ಶಿವಮೊಗ್ಗ ಜಿಲ್ಲೆಗಳ 49 ತಾಲ್ಲೂಕಗಳನ್ನು ವಲಯ 1,2 ಮತ್ತು 3 ಗುರುತಿಸಿ, ವಲಯಾವಾರು ಲಭ್ಯವಾಗುವ ಪ್ರೋತ್ಸಾಹಕ ಅಂಶಗಳನ್ನು ಗುರುತಿಸಿದೆ.
ಈ ವಿವರಣೆಯನ್ನು ಅವಲೋಕಿಸಿದಾಗ ತುಮಕೂರು ಜಿಲ್ಲೆ ಕೈಬಿಟ್ಟಿರುವುದು ಕಂಡು ಬರುತ್ತಿದೆ. ಬೆಂಗಳೂರು ಉತ್ತರ, ದಕ್ಷಿಣ ತಾಲ್ಲೂಕು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಜಿಲ್ಲೆಗಳಂತೆ ತುಮಕೂರು ಜಿಲ್ಲೆಯು ಸಹಾ ಬೆಂಗಳೂರು ಜಿಲ್ಲೆಗೆ ಲಗತ್ತಾಗಿರುವ ಭೌಗೋಳಿಕ ಪ್ರದೇಶ, ಕಾರಣ ಗೊತ್ತಾಗುತ್ತಿಲ್ಲ, ಆದ್ದರಿಂದ ರಾಜ್ಯ ಸರಕಾರ ಮಾಹಿತಿ ತಂತ್ರಜ್ಞಾನ ಕಾರ್ಯ ನೀತಿ 2020-25 [ಕರಡು] ಇನ್ನೊಮ್ಮೆ ಪರಿಶೀಲಿಸಿ ಅಂತಿಮ ಪ್ರಕಟಣೆಯಲ್ಲಿ ತುಮಕೂರು ಜಿಲ್ಲೆಗೆ ಅಗಿರುವ ಅನ್ಯಾಯವನ್ನು ಸರಿಪಡಿಸ ಬೇಕಿದೆ. ಇಲ್ಲದಿದ್ದ ಪಕ್ಷದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೂಡಿಕೆ ವಿರಳ ಆಗಲಿದೆ.