23rd December 2024
Share

ವರದಿ: ಬಿ.ಸುಜಾತಕುಮಾರಿ

  ಶಕ್ತಿಪೀಠ ಫೌಂಡೇಷನ್ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಉದ್ದೇಶಿಸಿರುವ ದಿಶಾ ಡೇಟಾ ಪಾರ್ಕ್’ನ   ಪ್ರಧಾನ ಕಚೇರಿಯನ್ನು ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿಯಲ್ಲಿ ಕಾರ್ಯಾರಂಭ ಮಾಡುವ ಬಗ್ಗೆ ದಿನಾಂಕ:25.09.2020 ರಂದು ಸಮಾಲೋಚನೆ ನಡೆಸಲಾಯಿತು.

   ದಿನಾಂಕ:24.09.2020 ರಂದು ಕರ್ನಾಟಕ ರಾಜ್ಯ ದಿಶಾ ಸಮಿತಿಯ ಸದಸ್ಯರಾಗಿ ಕುಂದರನಹಳ್ಳಿ ರಮೇಶ್ ನೇಮಕವಾದ ಮಾರನೇ ದಿನವೇ ಈ ಸಭೆಯನ್ನು ನಡೆಸಲಾಗಿತ್ತು, ದಿನಾಂಕ:19.10.2020 ನೇ ಸೋಮವಾರದಿಂದ ಪ್ರಧಾನ ಕಚೇರಿಯನ್ನು ಸರಳವಾಗಿ ಆರಂಭಿಸಲಾಗುವುದು.

  ಕುಂದರನಹಳ್ಳಿಯಲ್ಲಿ ಪ್ರಧಾನ ಕಚೇರಿ ಆರಂಭಿಸುವ ಕಟ್ಟಡದ ಆಯ್ಕೆ, ನೂತನ ಕಟ್ಟಡದ ನಿರ್ಮಾಣ ಮತ್ತು ದಿನ ನಿತ್ಯದ ವ್ಯವಹಾರಗಳ ಮೇಲು ಉಸ್ತುವಾರಿ ನೋಡಿಕೊಳ್ಳಲು  ಪ್ರಧಾನ ಕಚೇರಿ ಉಪಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.

1999 ರಲ್ಲಿ ಶ್ರೀ ಜಿ.ಎಸ್.ಬಸವರಾಜ್ ನೇತೃತ್ವದಲ್ಲಿ ಚಿಂತನಾ-ಕಾರ್ಯಾಗಾರ-ಅನುಷ್ಟಾನ ಘೋಷಣೆಯಡಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಕಾರ್ಯಾಗಾರ ಮತ್ತು ಜಿ.ಎಸ್.ಪರಮಶಿವಯ್ಯನವರ ನೀರಾವರಿ ಗ್ರಂಥಾಲಯವನ್ನು ಈ ಕಟ್ಟಡದಲ್ಲಿ ಆರಂಭಿಸಲಾಗಿತ್ತು.

 ಸುಮಾರು 21 ವರ್ಷಗಳ ನಂತರ ಇದೇ ಕಟ್ಟಡ ಮತ್ತು ನೂತನವಾಗಿ ನಿರ್ಮಾಣ ಮಾಡುವ ಕಟ್ಟಡದಲ್ಲಿ ’ದಿಶಾ ಡೇಟಾ ಪಾರ್ಕ್’ ಆರಂಭಿಸಲು ಸರ್ಕಾರದ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.

  ಗ್ರಾಮ ಪಂಚಾಯಿತಿ ಜನರಲ್ ಲೈಸೆನ್ಸ್, ಕಟ್ಟಡ ನಿರ್ಮಾಣ ಮಾಡಲು ಲೈಸೆನ್ಸ್ ಮತ್ತು ಹೆಚ್.ಎ.ಎಲ್ ನವರು ಈ ಗ್ರಾಮದಲ್ಲಿ ಎಷ್ಟು ಎತ್ರರದ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಲಿದ್ದಾರೆ. ರಾಷ್ಟ್ರೀಯ ಹೆದ್ಧಾರಿಯಿಂದ ಎಷ್ಟು ಜಾಗ ಬಿಟ್ಟು ಕಟ್ಟಡ ನಿರ್ಮಾಣ ಬಹುದು ಎಂಬ ಬಗ್ಗೆ ಮಾರಶೆಟ್ಟಿಹಳ್ಳಿ ಪಿಡಿಓರವರಾದ ಶ್ರೀ ಗುರುಮೂರ್ತಿರವರೊಂದಿಗೆ ಸಮಾಲೋಚನೆ  ನಡೆಸಲಾಯಿತು.

ಸಭೆಯಲ್ಲಿ ಕುಂದರನಹಳ್ಳಿ ರಮೇಶ್. ಸಿದ್ಧರಾಮಯ್ಯ, ಕೆ.ಆರ್.ಮಹೇಶ್, ಕೆ.ವೈ.ವಿಶ್ವನಾಥ್, ಹರೀಶ್, ಉಮೇಶ್, ತ್ರಿನೇತ್ರಸ್ವಾಮಿ, ಮಂಗಳೂರಿನ Srinivas institute of technology  ಯ ವಿಧ್ಯಾರ್ಥಿಗಳಾದ  ಪ್ರಮೋದ್ ಪ್ರಭು, ಕುಮಾರ್ ಜ್ಞಾನೇಶ್ ಪ್ರಭು ಮತ್ತು ನಾರಾಯಣ್ ವಿ ಇನ್ನೂ ಮುಂತಾದವರು ಭಾಗವಹಿಸಿದ್ದರು.