27th December 2024
Share

TUMAKURU:SHAKTHIPEETA FOUNDATION

  ಶಕ್ತಿಪೀಠ ಫೌಂಡೇಷನ್ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಉದ್ದೇಶಿಸಿರುವ ದಿಶಾ ಡೇಟಾ ಪಾರ್ಕ್’   ಎರಡನೇ ಸುತ್ತಿನಲ್ಲಿ ಕೈಗೊಳ್ಳುವ ವಿವಿಧ ಯೋಜನೆಗಳನ್ನು 2020 ರ ಶರದ್ ನವರಾತ್ರಿಯ ನವದುರ್ಗಾ ಮಾತೆಯರ ಪೂಜೆಯೊಂದಿಗೆ  ಶುಭಾರಂಭ ಮಾಡಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

  ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪಿಪಿಪಿ ಮಾದರಿಯಲ್ಲಿ ದಿಶಾ ಡೇಟಾ ಪಾರ್ಕ್’ ಪ್ರಸ್ತಾವನೆ ಸಲ್ಲಿಸುವ ವೇಳೆಗೆ ನಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳ ಮಾದರಿ ಯೋಜನೆಯ ಆರಂಭದ ಅನುಭವಗಳೊಂದಿಗೆ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ.

 ಶಕ್ತಿಪೀಠ ಫೌಂಡೇಷನ್ ಹಳ್ಳಿಯಿಂದ- ದೆಹಲಿವರೆಗೂ ಅಧ್ಯಯನ ಮಾಡಲು ಉದ್ದೇಶಿಸಿರುವ 9 ಯೋಜನೆಗಳಿಗೆ ವಿಷನ್ ಮತ್ತು ಪ್ರಷರ್ ಗ್ರೂಪ್ ರಚಿಸಲು ಸಂಚಾಲಕರನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ.

ಈ 9 ಯೋಜನೆಗಳಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರನ್ನು ಸಂಚಾಲಕರನ್ನಾಗಿ ನೇಮಿಸಲು ಚಿಂತಿಸಲಾಗಿದೆ. ಅವರುಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಪಟ್ಟಿಯನ್ನು ಘೋಶಿಸಲಾಗುವುದು.

 ಅವರ ಜೊತೆಗೆ ಅವರು ಇಚ್ಚಿಸುವ ಒಂದು ತಂಡ ರಚಿಸಲು ಮನವಿ ಮಾಡಲಾಗಿದೆ. ತಂಡ ರಚಿಸಲು ಇಷ್ಟವಿಲ್ಲದಿದ್ದರೆ ಒಬ್ಬರೇ ವರದಿ ಸಲ್ಲಿಸ ಬಹುದು. ಎಲ್ಲಾ ಸಂಚಾಲಕರಿಗೂ ಒಪ್ಪಿಗೆ ಪತ್ರ ಸೂಚಿಸಲು ಬಹಿರಂಗ ಮನವಿ ಮಾಡಲಾಗಿದೆ.

  1. ಕುಂದರನಹಳ್ಳಿ ಪ್ರಧಾನ ಕಚೇರಿ: ಕೋವಿಡ್-19 ಕೇಂದ್ರ ಸರ್ಕಾರದ ನೆರವು ಮತ್ತು ಬಳಕೆ.  
  2. ತುಮಕೂರು ಆಡಳಿತ ಕಚೇರಿ: ಆತ್ಮನಿರ್ಬರ ಯೋಜನೆಯಿಂದ ರಾಜ್ಯಕ್ಕಾದ ಲಾಭಗಳೇನು. 
  3. ಹಿರಿಯೂರು ಕ್ಯಾಂಪಸ್:  ಪ್ರವಾಹ ಕೇಂದ್ರ ಸರ್ಕಾರದ ನೆರವು ಮತ್ತು ಬಳಕೆ.   
  4. ಬೆಂಗಳೂರು ಬ್ರ್ಯಾಂಚ್:  ಕೋವಿಡ್-19 ಆಯುಷ್ ಇಲಾಖೆ ಪಾತ್ರ.
  5. ದೆಹಲಿ ಬ್ರ್ಯಾಂಚ್:  ಕೋವಿಡ್-19 ರಾಜ್ಯ ಸರ್ಕಾರದ ನಿಲುವು.
  6. ತುಮಕೂರು ನಿಮ್ಜ್ ಬ್ರ್ಯಾಂಚ್:  ಕೋವಿಡ್-19 ಕೇಂದ್ರದ ಪ್ಯಾಕೇಜ್.
  7. ಮೊಬೈಲ್ ಕಚೇರಿ: ಕೋವಿಡ್-19 ನಲ್ಲಿ ಗೂಕುಲ್ ಮಿಷನ್  ಪಾತ್ರ
  8. ದಿಶಾ ಕ್ಯಾಬಿನೆಟ್: ಕೋವಿಡ್-19 ಲಸಿಕೆ.
  9. ಶಕ್ತಿಪೀಠ ಫ್ಯಾಮಿಲಿ: ಯೋಜನೆಗೆ ಒಂದು ಕುಟುಂಬದಂತೆ 9 ಕುಟುಂಬಗಳ ಹೊಣೆಗಾರಿಕೆ. 

 ವಿವಿಧ ಯೋಜನೆಗಳ ವಿಷನ್ ಮತ್ತು ಪ್ರಷರ್ ಗ್ರೂಪ್ ಸಮಿತಿಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು ನೋಂದಾಯಿಸಿಕೊಳ್ಳಬಹುದು. ಸಮಿತಿಯ ಕಾರ್ಯವೈಖರಿಯ ರೂಪುರೇಷೆಗಳನ್ನು ಶೀಘ್ರವಾಗಿ ಪ್ರಕಟಿಸಲಾಗುವುದು.

  ಈ ಅಂಶಗಳ ವರದಿಯನ್ನು ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಾಜ್ಯ ದಿಶಾ ಸಮಿತಿಯಲ್ಲಿಟ್ಟು ಚರ್ಚಿಸಲು ಉದ್ದೇಶಿಸಲಾಗಿದೆ.