29th March 2024
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯದ ದಿಶಾ ಸಮಿತಿಯು ಕೇಂದ್ರ ಸರ್ಕಾರದ ನಿರ್ದೇಶನದಂತೆ ಮಾನಿಟರಿಂಗ್ ಸೆಲ್ ಆರಂಭಿಸಲು ಸಿದ್ಧತೆ ನಡೆಸಿದೆ. ರಾಜ್ಯ ಮಟ್ಟದ ಮಾನಿಟರಿಂಗ್ ಸೆಲ್ ಪ್ರತಿಯೊಂದು ಜಿಲ್ಲೆಯಲ್ಲಿನ ದಿಶಾ ಸಮಿತಿಗಳ ಕಾರ್ಯ ವೈಖರಿ, ಪ್ರತಿಯೊಂದು ಇಲಾಖೆಗೂ ಕೇಂದ್ರ ಸರ್ಕಾರದಿಂದ ಮಂಜೂರಾದ ಹಣದ ಪಕ್ಕಾ ಮಾಹಿತಿಯನ್ನು ಒಂದೇ ಕಡೆ ಬೆರಳ ತುದಿಯಲ್ಲಿ ಸಂಗ್ರಹಿಸುವುದು ಅಗತ್ಯವಾಗಿದೆ.

 ಈಗಾಗಲೇ ಕೇಂದ್ರ ಸರ್ಕಾರ ಸೂಚಿಸಿರುವಂತೆ ಪ್ರತಿಯೊಂದು ಇಲಾಖೆಯ ನೋಡೆಲ್ ಆಫೀಸರ್‍ಸ್ ನೇಮಕ ಮಾಡಬೇಕು. ಕನಿಷ್ಠ ಪ್ರತಿ ತಿಂಗಳು 10 ನೇ ದಿನಾಂಕದೊಳಗೆ ಪ್ರತಿಯೊಂದು ಯೋಜನೆಯ ಪ್ರಗತಿಯ ಮಾಹಿತಿಯನ್ನು ದಿಶಾ ಡ್ಯಾಷ್ ಬೋರ್ಡ್‌ಗೆ ಅಫ್‌ಡೇಟ್ ಮಾಡುವ ವ್ಯವಸ್ಥೆ ಜಾರಿಯಾಗ ಬೇಕು.

 ಪ್ರತಿಯೊಬ್ಬ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ವ್ಯವಸ್ಥೆಯೂ ಬೇಕು. ಸದಸ್ಯರು ಯಾರು ಸಹ ಇಂಥ ಮಾಹಿತಿ ಬೇಕು ಎಂದು ಕೇಳುವ ಪ್ರಮೇಯವೇ ಇರಬಾರದು. ಇದು ಮಾಹಿತಿ ಹಕ್ಕು ಅಧಿನಿಯಮಕ್ಕೂ ಅನೂಕೂಲವಾಗಬೇಕು.

 ದಿಶಾ ಸಮಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರಾತಿನಿಧ್ಯ ಇರುವದರಿಂದ ಎಲ್ಲಾ ಪಕ್ಷಗಳ ಪ್ರತಿನಿಧಿಗಳು ತಮ್ಮ ಪಕ್ಷದ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಯೋಜನಾವಾರು ನೀಡುವುದು ಸೂಕ್ತವಾಗಿದೆ.

  ಪ್ರತಿಯೊಂದು ಯೋಜನೆಯನ್ನು ಕ್ಲಿಕ್ ಮಾಡಿದ ತಕ್ಷಣ ಜಿಐಎಸ್ ನಕ್ಷೆಯಲ್ಲಿ ಮಂಜೂರಾದ ಯೋಜನೆ, ಪ್ರಗತಿಯಲ್ಲಿರುವ ಯೋಜನೆ, ನೆನೆಗುದಿಗೆ ಬಿದ್ದಿರುವ/ವಿವಾದದ ಯೋಜನೆ, ಪೂರ್ಣಗೊಂಡ ಯೋಜನೆ, ಹೊಸ ಪ್ರಸ್ತಾವನೆ ಯೋಜನೆಗಳು ವಿವಿಧ ಬಣ್ಣಗಳಲ್ಲಿ ಕಾಣುವಂತಿರಬೇಕು.

  ‘ಕೇಂದ್ರ ಸರ್ಕಾರದ ಪಾಲು, ರಾಜ್ಯ ಸರ್ಕಾರದ ಪಾಲು, ಯೋಜನಾವಾರು ವೆಚ್ಚ, ವಿವಿಧ ಬ್ಯಾಂಕ್‌ಗಳಲ್ಲಿರುವ ಹಣದ ಮಾಹಿತಿ ಜಿಐಎಸ್ ನಕ್ಷೆಯಲ್ಲಿ ಪ್ರಕಟವಾಗಬೇಕು. ಯಾವ ಹಂತದಲ್ಲಿ ವಿಳಂಭವಾಗಿದೆ? ಏಕೆ ವಿಳಂಭವಾಗಿದೆ? ಎಂಬ ಮಾಹಿತಿ ನಕ್ಷೆಯ ಮೇಲೆ ರೆಡ್‌ಕಲರ್ ಅಲರ್ಟ್ ಎಲ್ಲಾ ಸದಸ್ಯರ ಮೊಬೈಲ್‌ಗೂ ಅಫ್‌ಡೆಟ್ ಆಗಬೇಕು’

  ಮಾನಿಟರಿಂಗ್ ಸೆಲ್ ಈ ವ್ಯವಸ್ಥೆಯನ್ನು ಅಫ್‌ಡೇಟ್ ಮಾಡುವ ಕೆಲಸವನ್ನು ಮಾಡಬೇಕು. ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿರುವ ಎಲ್ಲಾ ಇಲಾಖೆಗಳ ಡಿಜಿಟಲ್ ವ್ಯವಸ್ಥೆ ಮಾಡುವ ಹೊಣೆಗಾರಿಕೆಯ ಪ್ರತಿಯೊಬ್ಬರೂ ಒಂದೆ ಪ್ಲಾಟ್‌ಫಾರಂನಲ್ಲಿ ಎನ್.ಎಸ್.ಸಿಯ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಬೇಕು.

 ಸಾವಿರಾರು ಜನರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇವರಲ್ಲಿ ಯಾರು ಯಾವ ಕೆಲಸ ಮಾಡುತ್ತಿದ್ದಾರೆ, ಇದೂವರೆಗೂ ಏನು ಮಾಡಿದ್ದಾರೆ, ಎಂಬ ಅಕೌಂಟಬಿಲಿಟಿ ಎಲ್ಲಿಯೂ ಲಭ್ಯವಾಗುತ್ತಿಲ್ಲ, ಇದೂ ಒಂದು ದೇಶದ ದುರಂತ ಎಂದು ಅಧಿಕಾರಿಯೊಬ್ಬರೂ ತಮ್ಮ ಸಿಟ್ಟು ವ್ಯಕ್ತಪಡಿಸಿದರು.

 ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಗೌರ್ವನೆನ್ಸ್  ಎಂಬ ಹೆಸರಿನಲ್ಲಿ ಕೋಟಿ, ಕೋಟಿ ಹಣ ಖರ್ಚಾಗಿರುವುದು ನಿಂತಿಲ್ಲ. ಆದರೇ ಕೇಳುವ ಮಾಹಿತಿಯನ್ನು ಬೆರಳ ತುದಿಯಲ್ಲಿ ತೋರಿಸುವ ವ್ಯವಸ್ಥೆ ಇನ್ನೂ ಇಲ್ಲ ಎಂಬ ಕೊರಗು ಉನ್ನತ ಮಟ್ಟದ ಅಧಿಕಾರಿಗಳಲ್ಲಿ ಇದೆ.

  ನಾವೂ ಕೇಳಲು ಹೋದರೆ, ಎಲ್ಲರಿಗೂ ಮೂಗಿನ ತುದಿಯಲ್ಲಿ ಸಿಟ್ಟು ಇರುತ್ತದೆ, ಸಭೆಗಳಲ್ಲಿ ಯಾವುದೋ ಮಾಹಿತಿ ಹೇಳಿ ಸುಮ್ಮನಾಗುತ್ತಾರೆ, ಲೈವ್ ಮಾಹಿತಿ ಅಫ್‌ಡೇಟ್ ನಿರಂತರ ವ್ಯವಸ್ಥೆ ಆಗಲೇ ಬೇಕು, ಸಭೆಗೋಸ್ಕರ ಮಾಹಿತಿ ನೀಡುವ ವ್ಯವಸ್ಥೆ ಆಗಬಾರದು, ಎಂಬ ಕಟು ಸತ್ಯವನ್ನು ಹೆಸರು ಹೇಳದ ಉನ್ನತ ಅಧಿಕಾರಿಗಳು ಸ್ಪಷ್ಟ ಪಡಿಸುತ್ತಾರೆ’

 ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದು ಕೊಂಡು ದಿಶಾ ಮಾನಿಟರಿಂಗ್ ಸೆಲ್ ರೂಪುರೇಷೆ ನಿರ್ಧರಿಸುವ ಹೊಣೆಗಾರಿಕೆ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿರಜನೀಶ್‌ರವರ ಮೇಲಿದೆ. ಮೊದಲು ಒಂದು ವಿಷನ್ ಗ್ರೂಪ್ ರಚಿಸಬೇಕು ಇದರಲ್ಲಿ ಎನ್‌ಐಸಿ, ಕರ್ನಾಟಕ ರಿಮೋಟ್ ಸೆನ್ಸಿಂಗ್, ಕೆಎಂಡಿಎಸ್, ಎನ್‌ಆರ್‌ಡಿಎಂಎಸ್, ಸ್ಮಾರ್ಟ್ ಗೌರ್ವನೆನ್ಸ್  ಸೇರಿದಂತೆ ಅಗತ್ಯವಿರುವ ಎಲ್ಲಾ ಇಲಾಖೆಗಳ ಪ್ರತಿನಿಧಿಗಳು ಮತ್ತು ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರೂ ಇರಬೇಕು. ಎಂಬ ಅಭಿಪ್ರಾಯ ಶಕ್ತಿಪೀಠ ಪೌಂಡೇಷನ್ ಸಂಸ್ಥೆಯದ್ದಾಗಿದೆ.