22nd December 2024
Share

TUMAKURU:SHAKTHIPEETA FOUNDATION

ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಸದಸ್ಯರುಗಳನ್ನು ಒಳಗೊಂಡಂತೆ ಸುಮಾರು 3285 ಕುಟುಂಬಗಳ ಶಕ್ತಿಪೀಠ ಫ್ಯಾಮಿಲಿ ಮತ್ತು ದಿಶಾ ಕ್ಯಾಬಿನೇಟ್ ರಚಿಸಲು ನವರಾತ್ರಿಯ ಒಂಬತ್ತು ದಿವಸಗಳ ಕಠಿಣ ಅಭಿವೃದ್ಧಿ ವೃತ’ ದಲ್ಲಿ ನಿರ್ಣಯ ಮಾಡಲಾಗಿದೆ.

 ರಾಜ್ಯದ

  1. 342 ಚುನಾಯಿತ ಜನಪ್ರತಿನಿಧಿಗಳು. 
  2. ಯೋಜನಾವಾರು ವಿಷನ್‌ಗ್ರೂಪ್.
  3. ಯೋಜನಾವಾರು ಪ್ರಷರ್‌ಗ್ರೂಪ್.
  4. ಶಕ್ತಿಪೀಠ ಕ್ಯಾಂಪಸ್ ದಾನಿಗಳು.
  5. ನಮ್ಮ ಪರಿಕಲ್ಪನೆಗಳಿಗೆ ಉಚಿತವಾಗಿ ವಿವಿಧ ಸೇವೆ ಸಲ್ಲಿಸುವವರು.
  6. ನಿಮಗಿದು ಗೊತ್ತೆ? ಇ-ಪೇಪರ್ ಜಾಹಿರಾತುದಾರರು.
  7. ಶಕ್ತಿಪೀಠ ಕ್ಯಾಂಪಸ್ ನಿತ್ಯ ಕಾರ್ಯಕ್ರಮ/ಪೂಜೆಯ ಆಸಕ್ತರು.
  8. ಶಕ್ತಿಪೀಠ ಕ್ಯಾಂಪಸ್ ನಿತ್ಯ ದಾಸೋಹ ಸೇವೆಯ ಆಸಕ್ತರು.
  9. ನಮ್ಮ ಸಂಸ್ಥೆಗಳ ಪರಿಕಲ್ಪನೆಯ ವಿವಿಧ ಅಧ್ಯಯನ ಪೀಠಗಳ ಪ್ರತಿನಿಧಿಗಳು.

ಸೇರಿದಂತೆ ಕನಿಷ್ಠ ಮೇಲ್ಕಂಡ ವಿವಿಧ ವರ್ಗಗಳ ಒಬ್ಬರು ಪತ್ರಿನಿಧಿಯಂತೆ ವರ್ಷದ 365 ದಿವಸಗಳಿಗೂ 365×9=3285 ಕುಟುಂಬಗಳ ಡಿಮ್ಯಾಂಡ್ ಸರ್ವೆ ಮಾಡಲು ಆರಂಭಿಸಲಾಗಿದೆ. ವಿಜಯದಶಮಿ ವೇಳೆಗೆ ಕಳೆದ ನವರಾತ್ರಿಯ ಒಂಬತ್ತು ದಿನಗಳಿಂದ 365 ಕುಟುಂಬಗಳ ಪಟ್ಟಿ ಮಾಡಲಾಗಿದೆ.

  1. ನನ್ನ ಹುಟ್ಟೂರು ಕುಂದರನಹಳ್ಳಿ ಗ್ರಾಮದ.  
  2. ನಮ್ಮ ಕಾವಲರ ವಂಶದ.
  3. ನಮ್ಮ ಸಂಭಂದಿಗಳು.
  4. ನನ್ನ ಸ್ನೇಹಿತರು.
  5. ಯಾವುದೇ ರೂಪದಲ್ಲಾಗಲಿ ಈವರೆಗೂ ಸಹಾಯ ಮಾಡಿರುವವರು.
  6. ನಮ್ಮ ಸಂಸ್ಥೆಗಳು ಮತ್ತು ಇದೂವರೆಗೂ ಶ್ರೀ ಜಿ.ಎಸ್.ಬಸವರಾಜ್‌ರವರ ನೇತೃತ್ವದಲ್ಲಿ ಶ್ರಮಿಸಿದ ಅಭಿವೃದ್ಧಿ ಯೋಜನೆಗಳಿಗೆ ಸಹಕರಿಸಿದ ಪರಿಣಿತರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು.
  7. ಹಲವಾರು ಕಾರಣಗಳಿಂದ ನನ್ನಿಂದ ತೊಂದರಗೆ ಒಳಗಾದವರು.
  8. ಅವರ ಖುಷಿಗಾಗಿ  ವಿನಾಕಾರಣ ನನಗೆ ತೊಂದರೆ ಕೊಟ್ಟವರು.
  9. 108 ಶಕ್ತಿಪೀಠಗಳ ಕ್ಯಾಂಪಸ್ ಭಕ್ತರು.

 ಸೇರಿದಂತೆ ವಿವಿಧ ವರ್ಗದ ಕುಟುಂಬಗಳ ಪಟ್ಟಿ ಮಾಡಿ ಅವರೊಂದಿಗೆ ಸಮಾಲೋಚನೆ ನಡೆಸಿ ಆಸಕ್ತರ ಅಂತಿಮ ಪಟ್ಟಿಯನ್ನು ಸಿದ್ಧಗೊಳಿಸಲಾಗುವುದು. 32 ವರ್ಷಗಳ ಅನುಭವದ ಆಧಾರದ ಮೇಲೆ ‘ಆತ್ಮಾವಲೋಕನ’ ಮಾಡಿಕೊಂಡು, ಇದೂವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿದ್ದರೂ ಅವುಗಳನ್ನು ಸರಿಪಡಿಸಿಕೊಂಡು. ಆಸಕ್ತ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಶ್ರಮಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

 ‘ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ, ಶಕ್ತಿ ದೇವತೆಗಳಿಗೆ ಪೂಜಿಸಿ, ಪಾದಗಳಿಗೆ ನಮಸ್ಕರಿಸಿ, ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಕಾರ್ಯವೈಖರಿ ಅಧ್ಯಯನ ಮಾಡಲು ರಾಜ್ಯಾಧ್ಯಾಂತ ಪ್ರವಾಸ ಕೈಗೊಳ್ಳಲಾಗುವುದು. ಪ್ರಥಮವಾಗಿ ಹಾಸನ ಜಿಲ್ಲೆಯಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಆಸಕ್ತರು   ಕೈಜೋಡಿಸಿ, ಸಲಹೆ, ಸಹಕಾರ, ಮಾರ್ಗದರ್ಶನ ನೀಡಬಹುದಾಗಿದೆ.