21st December 2024
Share

TUMAKURU:SHAKTHIPEETA FOUNDATION

ಹಾಸನಾಂಬೆಯ ಕೃಪೆಯಿಂದ ಹಾಸನ ಲೋಕಸಭಾ ಕ್ಷೇತ್ರ ನಮ್ಮ ರಾಜ್ಯದ ಅದೃಷ್ಟದ ಕ್ಷೇತ್ರ. ಕನ್ನಡಿಗರಾದ ಶ್ರೀ ಹೆಚ್.ಡಿ.ದೇವೆಗೌಡರನ್ನು ಭಾರತದ ಪ್ರಧಾನಿ ಮಾಡಿದ ಕ್ಷೇತ್ರ. ನಿಜಕ್ಕೂ ಅದ್ಭುತ, ಯುವ ನಾಯಕ ಶ್ರೀ ಪ್ರಜ್ವಲ್ ರೇವಣ್ಣನವರು ಲೋಕಸಭೆಯಲ್ಲಿ ಅವರ ಮಾತಿನ ವರಸೆಯಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

 ಆದರೇ ಏಕೋ ಏನೋ ಈ ವರ್ಷ ಜಿಲ್ಲಾ ಮಟ್ಟದ ದಿಶಾ  ಸಭೆಯನ್ನೇ ಮಾಡಿಲ್ಲ. ಕಳೆದ ವರ್ಷ 2 ಸಭೆಗಳನ್ನು ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜಿ.ಎಸ್.ಬಸವರಾಜ್‌ರವರು 3 ಸಭೆ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ.

 ‘ವರ್ಷ ಚಿತ್ರದುರ್ಗದ ಶ್ರೀ ನಾರಾಯಣಸ್ವಾಮಿರವರು, ಮಂಡ್ಯದ ಶ್ರೀಮತಿ ಸುಮಲಥರವರು ಮತ್ತು ಮೈಸೂರು ಶ್ರೀ ಪ್ರತಾಪಸಿಂಹರವರು ಈಗಾಗಲೇ ಎರಡು ಸಭೆ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ’  

 ಇನ್ನೂ 15 ಜಿಲ್ಲೆಗಳಲ್ಲಿ ಈ ವರ್ಷ ಇನ್ನೂ ಸಭೆಯನ್ನೆ ಮಾಡಿಲ್ಲ, ಲೋಕಸಭಾ ಸದಸ್ಯರು ತಮಗೆ ಕೊಟ್ಟಿರುವ ಅಧಿಕಾರ ಬಳಸಿಕೊಳ್ಳಲೂ ಹೀಗೇಕೆ ಹಿಂಜರಿಯುತ್ತಾರೆ ಎಂಬುದೇ ಯಕ್ಷಪ್ರಶ್ನೆ. ದಿಶಾ ಸಭೆಯ ಖರ್ಚು ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

 ಹಾಸನದಲ್ಲಿ ಮಾಜಿ ಪ್ರಧಾನಿ ಶ್ರೀ ದೇವೇಗೌಡರು ಹಿರಿಯರಾಗಿದ್ದರೂ ರಾಜ್ಯಸಭೆ ಸದಸ್ಯರಾಗಿರುವುದರಿಂದ ದಿಶಾ ಸಮಿತಿ ಅಧ್ಯಕ್ಷರಾಗಲು ಬಹುತೇಕ ಬರುವುದಿಲ್ಲಾ. ಮೊಮ್ಮಗ ಅಧ್ಯಕ್ಷರಾದರೆ, ತಾತ ಉಪಾದ್ಯಕ್ಷರಾಗಿರ ಬಹುದು ಅನ್ನಿಸುತ್ತಿದೆ.

ಶ್ರೀ ಪ್ರಜ್ವಲ್ ರೇವಣ್ಣನವರು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರಾಗಲಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷದ ಸದಸ್ಯರು ದಿಶಾ ಸಮಿತಿಯ ಸದಸ್ಯರಾಗುವುದು ಮಾರ್ಗದರ್ಶಿಯಲ್ಲಿದೆ. ಜನತಾದಳದಲ್ಲಿ ಒಬ್ಬರೇ ಸದಸ್ಯರು ಇರುವುದರಿಂದ ಇವರ ನೇಮಕ ಗ್ಯಾರಂಟಿಯಾಗಲಿದೆ.

 ಶ್ರೀ ಪ್ರಜ್ವಲ್ ರೇವಣ್ಣನವರು ಜಿಲ್ಲಾಮಟ್ಟದ ದಿಶಾ ಸಮಿತಿಗೆ 4 ಜನರನ್ನು ನಾಮನಿರ್ದೇಶನ ಮಾಡಿದರೆ, ಕೇಂದ್ರ ಸರ್ಕಾರವೂ 4 ಜನರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಇವರುಗಳ ಪಾತ್ರ ಮಹತ್ತರವಾಗಿದೆ.

  ‘ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ದೇಶದ ಪ್ರತಿ ಜಿಲ್ಲೆಗೂ ನೀಡಿರುವ ಕೇಂದ್ರ ಸರ್ಕಾರದ ಯೋಜನೆಗಳ ಸಮರ್ಪಕ ಅನುದಾನದ ಬಳಕೆ, ಇಲಾಖೆಗಳ ಸಮನ್ವಯ ಸಾಧಿಸುವುದು,  ದುರುಪಯೋಗ ತಡೆಗಟ್ಟುವುದು ಮತ್ತು ಹೊಸ ಯೋಜನೆಗಳ ಪ್ರಸ್ತಾವನೆ ಚಿಂತನೆಗೆ ಆಯಾ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿ ರಚಿಸಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಪಂಚಾಯಿತ್ ಸಿಇಓ ಕಾರ್ಯ ನಿರ್ವಹಿಸುತ್ತಾರೆ’

ರಾಜ್ಯ ಮಟ್ಟದ ದಿಶಾ ಸಮಿತಿಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅಧ್ಯಕ್ಷರಾಗಿರುತ್ತಾರೆ. ಸದಸ್ಯ ಕಾರ್ಯದರ್ಶಿಯಾಗಿ ಯೋಜನಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರು ಕಾರ್ಯ ನಿರ್ವಹಿಸುತ್ತಾರೆ

 ರಾಜ್ಯಮಟ್ಟದ ದಿಶಾ ಸಮಿತಿ ಚುರುಕಾಗಿ ಕಾರ್ಯನಿರ್ವಹಿಸುವ ಮೂಲಕ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿ ಕಾರ್ಯವೈಖರಿಯನ್ನು ಗಮನಿಸಲಿದೆ. ಇಂದು (27.10.2020 )  ಹಾಸನ ಜಿಲ್ಲೆಗೆ ಭೇಟಿ ನೀಡಿ ದಿಶಾ ಸಮಿತಿಯ ಕಾರ್ಯವೈಖರಿ ಬಗ್ಗೆ ಅಧ್ಯಯನ ಮಾಡಲಾಗುವುದು.

 ರಾಜ್ಯ ಮಟ್ಟದ ಐದು ಜನ ನಾಮನಿರ್ದೇಶಿತ ಸದಸ್ಯರು ಒಟ್ಟಾಗಿ ರಾಜ್ಯಾದ್ಯಾಂತ ಪ್ರವಾಸ ಮಾಡಲು ಚಿಂತನೆ ನಡೆಸಿದ್ದೇವೆ, ಇದರಲ್ಲಿ ಬೀದರ್, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಮತ್ತು ತುಮಕೂರು ಈ ಐದು ಜಿಲ್ಲೆಗಳಲ್ಲಿ ನಾಮನಿರ್ದೇಶಿತ ಸದಸ್ಯರು ಇದ್ದಾರೆ.

 ಸದಸ್ಯರಾದ ಶ್ರೀ ಶಿವಯ್ಯನವರು ಶಕ್ತಿಪೀಠ ಫೌಂಡೇಷನ್ ಈಗಾಗಲೇ ದಿಶಾ ಸಮಿತಿಗಳ ಅಧ್ಯಯನ ಆರಂಭಿಸಿದೆ, ತಾವೂ ಆರಂಭಿಸಿ ನಂತರ ನಾವೂಗಳು ರೂಪುರೇಷೆ ನಿರ್ಧರಿಸಿಕೊಂಡು ಪ್ರವಾಸ ಮಾಡೋಣ ಎಂದು ನೀಡಿದ ಸಲಹೆಗೆ ಸದಸ್ಯರಾದ ಶ್ರೀ ಸುರೇಶ್‌ರವರು ಸಹಮತ ವ್ಯಕ್ತಪಡಿಸಿದ್ದರು. ಇನ್ನಿಬ್ಬರು ಮೊದಲ ಸಭೆಗೆ ವಿವಿಧ ಕಾರಣಗಳಿಂದ ಹಾಜರಾಗಿರಲಿಲ್ಲ.

-ಕುಂದರನಹಳ್ಳಿ ರಮೇಶ್.

ಸದಸ್ಯರು, ರಾಜ್ಯ ಮಟ್ಟದ ದಿಶಾ ಸಮಿತಿ. ಕರ್ನಾಟಕ