22nd November 2024
Share

ಎತ್ತಿನಹೊಳೆ ಯೋಜನೆಯ 5 ಪೈಪ್‌ಲೈನ್ ಮಾರ್ಗದ ಬಗ್ಗೆ ಹರೀಶ್‌ರವರು ನನಗೆ ಪಾಠ ಮಾಡುತ್ತಿರುವುದು.   

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಸುಮಾರು 2000 ಟಿ.ಎಂ.ಸಿ ಅಡಿ ನದಿ ನೀರಿನ ಒಂದು ಹಳ್ಳದ ಹೆಸರು ಎತ್ತಿನಹೊಳೆ. ಇಲ್ಲಿ ಹಲವಾರು ಹಳ್ಳಗಳು ಹರಿಯಲಿವೆ.

ನೇತ್ರಾವತಿ ನದಿ ಇದು ಸಹ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರಿನ ಒಂದು ಭಾಗದ ಹೆಸರು. ಸರ್ಕಾರದ ಹಂತದಲ್ಲೂ ಕೆಲವರು ನೇತ್ರಾವತಿ ನದಿ ಪಾತ್ರ’ ಎನ್ನುತ್ತಾರೆ. ಕೆಲವರು ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ ನದಿ ಪಾತ್ರ’ ಎನ್ನುತ್ತಾರೆ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಅಧ್ಯಯನ ಮಾಡಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರನ್ನು, ಪೂರ್ವಕ್ಕೆ ತಿರುಗಿಸಿ ನದಿ ನೀರಿನ ಸ್ವಲ್ಪ ಭಾಗ ತರುವ ಯೋಜನೆ ರೂಪಿಸಿ ಅದಕ್ಕೆ ನೇತ್ರಾವತಿ ತಿರುವು’ ಎಂದು ಹೆಸರಿಟ್ಟಿದ್ದು ಇತಿಹಾಸ.

ಜಿ.ಎಸ್.ಪರಮಶಿವಯ್ಯನವರ ವರದಿ ಪ್ರಕಾರ ಅತ್ಯಂತ ಎತ್ತರದ ಪ್ರದೇಶದಲ್ಲಿ ಗಾರ್ಲೆಂಡ್ ಕೆನಾಲ್’ ನಿರ್ಮಿಸಿ, ಗುರುತ್ವಾಕರ್ಷಣೆ ಮೂಲಕ ನೀರು ತರುವುದಾಗಿತ್ತು. ಮನೆಯ ಚಾವಣೆಯ ನೀರನ್ನು ಒಂದು ಪೈಪ್ ಹಾಕಿ ನಾವು ಒಂದು ಕಡೆ ಸಂಗ್ರಹ ಮಾಡುವ ಮಾದರಿ.

ನೇತ್ರಾವತಿ ನದಿ ತಿರುವು ಹೆಸರೇ ಒಂದು ದೊಡ್ಡ ಸುದ್ದಿ ಮಾಡಿತ್ತು. ನದಿ ತಿರುಗಿಸುವ ಯೋಜನೆ ಇದಾಗಿರಲಿಲ್ಲ. ಮಳೆ ಕೊಯ್ಲು ಯೋಜನೆ ಇದಾಗಿತ್ತು. ನಂತರ ಟನಲ್ & ಫನಲ್’ ಯೋಜನೆಯಡಿ ನೀರು ತರುವ ಆಲೋಚನೆ ಮೊಳಕೆಯೊಡೆಯಿತು.

 ಇವೆಲ್ಲಾ ತಕ್ಷಣದಲ್ಲಿ ಸಾಹಸ, ಹಳ್ಳಕ್ಕೆ ಮೋಟಾರ್ ಇಟ್ಟು ಪಂಪ್ ಮಾಡುವ ಆಲೋಚನೆ ಚಿಗುರಿಗೆ ಬಹುತೇಕರೂ ಜೈ ಎಂದರು ಅದೊಂದು ಇತಿಹಾಸ. ಇದು ಪರಮಶಿವಯ್ಯನವರ ವರದಿಯಲ್ಲೂ ಇತ್ತು, ಅವರು ಸಹ ಗುರುಕ್ವಾರ್ಷಣೆಯಿಂದ, ಏತನೀರಾವರಿ ಮಾಡುವ ಮೂಲಕ, ಟನಲ್ ಮಾಡುವ ಮೂಲಕ ಹೀಗೆ ಹಲವಾರು ವಿಧಗಳಲ್ಲಿ ನೀರು ತರಬಹುದು ಎಂದು ವರದಿ ನೀಡಿದ್ದರು. ಅವರ ಪ್ರಕಾರ ಮೊದಲ ಹಂತದಲ್ಲಿ ಗುರುಕ್ವಾರ್ಷಣೆಯಿಂದಲೇ ನೀರು ತರಬೇಕು ಎಂಬ ಸಲಹೆ/ವಾದ/ಮಂಡನೆ ಅವರದಾಗಿತ್ತು.

 ಹೆಡ್‌ವರ್ಕ್ಸ್ ಎಂದರೆ ನೀರು ದೊರೆಯುವ ಪ್ರದೇಶದಲ್ಲಿ ರೂಪಿಸುವ ಯೋಜನೆ. ಇದೂವರೆಗೂ ವಿಶ್ವದಲ್ಲಿ ಹರಿಯುವ ನೀರನ್ನು ತಡೆದು ಡ್ಯಾಂ ನಿರ್ಮಿಸಿ’ ನೀರು ನಿಲ್ಲಿಸಿದ್ದಾರೆ. ಎತ್ತರದ ಪ್ರದೇಶಗಳಿಗೆ ಡ್ಯಾಂನಿಂದ ’ಲಿಫ್ಟ್’ ಮಾಡಿ ನೀರು ಕೊಡುತ್ತಾರೆ. ಇವೆರಡು ಯೋಜನೆಗಳು ಹಾಲಿ ಬಳಕೆಯಲ್ಲಿದೆ.

ಈ ಎತ್ತಿನಹೊಳೆ ಯೋಜನೆಯ ವಿಶೇಷ ಏನೆಂದರೆ ಹಳ್ಳದಲ್ಲಿ ಹರಿಯುವ ನೀರನ್ನು ಸಂಗ್ರಹ ಮಾಡದೇ, ಪಂಪ್ ಮೂಲಕ ನೀರು ಎತ್ತಿ ಕಾಲುವೆಗೆ ಹಾಕುವುದು. ಈ ಯೋಜನೆಯ ಜನಕ’ ಯಾರು ಎಂಬುದನ್ನು ಸರ್ಕಾರವೇ ಸ್ಪಷ್ಟ ಪಡಿಸಬೇಕು.

ಈ ಪೈಪ್ ಅಗಲ ಎಷ್ಟಿದೆ ಎನ್ನುವುದನ್ನು ಫೋಟೋದಲ್ಲಿ ನೋಡಬಹುದು. ಈ ಪೈಫ್ ಉದ್ದ ಸುಮಾರು 126 ಕೀಮೀ. ಕೆಲವು ಕಡೆ ಒಂದು ಪೈಫ್, ಕೆಲವು ಕಡೆ ಎರಡು ಪೈಫ್, ಕೆಲವು ಕಡೆ ಮೂರು ಪೈಫ್, ಕೆಲವು ಕಡೆ ಐದು ಪೈಫ್‌ಗಳನ್ನು ಹಾಕಲಾಗಿದೆ. ಇವೆಲ್ಲಾ ಪೈಪ್ ಸೇರಿ ಉದ್ದ 126 ಕೀಮೀ. ಆದರೇ ಪೈಪ್ ಸಾಗುವ ಮಾರ್ಗದ ದೂರ ಎಷ್ಟು ಕೀಮೀ  ಎಂಬ ಮಾಹಿತಿಯನ್ನು ನೀಡಲು ಇಂಜಿನಿಯರ್‌ರವರನ್ನು ಕೇಳಿದ್ದೇನೆ.

 ನಾನು ಈ ಯೋಜನೆಯ ಬಗ್ಗೆ ಬರೆಯುವಾಗ ಬಹಳ ಎಚ್ಚರವಹಿಸಲೇ ಬೇಕು. ಹಾಲಿ ಕೈಗೊಂಡಿರುವ ಯೋಜನೆಯ ಮಾಹಿತಿಯನ್ನು ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರು, ಕಾರ್ಯದರ್ಶಿ ಶ್ರೀ ಅನಿಲ್‌ಕುಮಾರ್‌ರವರು, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎನ್.ಲಕ್ಷ್ಮಣರಾವ್ ಪೇಶ್ವೆರವರು, ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಶ್ರೀ ರುದ್ರಯ್ಯನವರು, ಶ್ರೀ ಜೈಪ್ರಕಾಶ್‌ರವರು, ಮುಖ್ಯ ಇಂಜಿನಿಯರ್ ಶ್ರೀ ಮಾಧವರವರು, ಇಐ ಟೆಕ್ನಾಲಜಿಯ ಶ್ರೀ ಎನ್.ರಂಗನಾಥ್ ರವರೊಂದಿಗೆ ಸಮಾಲೋಚನೆ ನಡೆಸಿ ಬರೆಯಲು ಉದ್ದೇಶಿಸಲಾಗಿದೆ.

 ಪರಮಶಿವಯ್ಯನವರ ಜೊತೆ ಕಾರ್ಯನಿರ್ವಹಿಸಿರುವ ತಂಡದ ಜೊತೆಯೂ ಚರ್ಚಿಸಲಾಗುವುದು.  ಜೊತೆಗೆ  ಅವರ ಯೋಜನೆಯ ಇಂಚಿಂಚು ಮಾಹಿತಿ ನನ್ನ ತಲೆಯಲ್ಲೂ ಇದೆ. ನಿವೃತ್ತ ಎಸ್.ಇ. ಶ್ರೀ ಡಿ.ಎಸ್.ಹರೀಶ್‌ರವರು ಸ್ಥಳಕ್ಕೆ ಭೇಟಿ ನೀಡಿ ಯೋಜನೆ ಬಗ್ಗೆ ತಾಂತ್ರಿಕ ಪಾಠ ಮಾಡಲು ಒಪ್ಪಿದ್ದಾರೆ.

   ರಾಜ್ಯದ ಎರಡು ಕೋಟಿ ಜನಕ್ಕೆ ಕುಡಿಯುವ ನೀರು ಕೊಡುವ ಯೋಜನೆಯನ್ನು ಜಲಜೀವನ್ ಮಿಷನ್’ ಯೋಜನೆಯಡಿ ಅಥವಾ ರಾಜ್ಯದ ನದಿ ಜೋಡಣೆ’ ಯೋಜನೆಯಾಗಿ ಮಾರ್ಪಾಡು ಮಾಡಿ, ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ತಂತ್ರಗಾರಿಕೆ ಮಾಡಲೇ ಬೇಕಾಗಿದೆ. ಇದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅವರ ನಿಲುವು ಹೌದು.

 ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುವ ಮುನ್ನ ಯೋಜನೆಯ ಇಂಚಿಂಚು ತಿಳಿಯುವುದು ನನ್ನ ಕರ್ತ್ಯವ್ಯವೂ ಆಗಿದೆ. ನಾನು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿರುವುದರಿಂದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯುವುದು ಸಲಭವಾಗಲಿದೆ.

ಪರಿಣಿತರ ಸಲಹೆ ಮಾರ್ಗದರ್ಶನಕ್ಕೆ ಆಹ್ವಾನ ನೀಡಲಾಗಿದೆ, ದಯವಿಟ್ಟು ಸಹಕರಿಸಲು ಮನವಿ.