22nd December 2024
Share

TUMAKURU:SHAKTHIPEETA FOUNDATION

 ಶ್ರೀಮತಿ ಶಾಲಿನಿರಜನೀಶ್‌ರವರು, ಸದಸ್ಯ ಕಾರ್ಯದರ್ಶಿ, ರಾಜ್ಯ ಮಟ್ಟದ ದಿಶಾ ಸಮಿತಿ. ಕರ್ನಾಟಕ ಹಾಗೂ ಅಪರ ಮುಖ್ಯ ಕಾರ್ಯದರ್ಶಿ, ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ. ಕರ್ನಾಟಕ ಸರ್ಕಾರ. ಇವರಿಗೆ ಕರ್ನಾಟಕ ರಾಜ್ಯ ದಿಶಾ ಸಮಿತಿಯ ಸದಸ್ಯನಾಗಿ ಬರೆದಿರುವ  ಪತ್ರಗಳ ವಿಷಯಗಳ ಬಗ್ಗೆ ಟೇಬಲ್‌ನಲ್ಲಿ ಬರೆಯಲಾಗಿದೆ.

 ಒಬ್ಬ ಸದಸ್ಯನಾಗಿ ನಾನು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯ, ಪ್ರತಿಯೊಂದು ಯೋಜನೆಗಳ ಬಗ್ಗೆ ಅಧ್ಯಯನ ಮಾಡಲೇ ಬೇಕು ಹಾಗೂ ಸದಸ್ಯರ ಪರಿಮಿತಿ ಎಷ್ಟು ಎಂಬ ಬಗ್ಗೆಯೂ ಅರಿವು ನಮಗಿರಬೇಕು. ಆದ್ದರಿಂದ ಮೊದಲ ಹಂತದಲ್ಲಿ ಪಟ್ಟಿಯಲ್ಲಿರುವ 9 ಪತ್ರಗಳನ್ನು ಬರೆಯಲಾಗಿದೆ.

 ಇವುಗಳಿಗೆ ಉತ್ತರ ನೀಡಲು ಕೆಲವು ಪತ್ರಗಳಿಗೆ ದಿಶಾ ಸಭೆಯಲ್ಲಿಟ್ಟು ಚರ್ಚಿಸಬಹುದು ಅಥವಾ ಮಾನ್ಯ ಮುಖ್ಯ ಮಂತ್ರಿಗಳಿಗೆ ಕಡತ ಮಂಡಿಸಿ ಅನುಮೋದನೆ ಪಡೆದು ಚಾಲನೆ ನೀಡಿ, ನಂತರ ಮುಂದಿನ ಸಭೆಯಲ್ಲಿ ರ್‍ಯಾಟಿಫೀಕೇಷನ್ ಮಾಡುವುದು ವಾಡಿಕೆ.

  ಕೆಲವು ಪತ್ರಗಳಿಗೆ ಮೇಡಂ ನೇರವಾಗಿ ವಿವಿಧ ಇಲಾಖೆಗಳಿಗೆ ಪತ್ರ ಬರೆದು ಮಾಹಿತಿ ಪಡೆದು ನನಗೆ ನೀಡಬಹುದಾಗಿದೆ. ಆದರೇ ನಾನು ಕೇಳಿರುವ ಎಲ್ಲಾ ಮಾಹಿತಿಗಳನ್ನು ಸದಸ್ಯರಿಗೆ ಉಚಿತವಾಗಿ ನಿಡಬಹುದಾಗಿದೆಯೇ ಅಥವಾ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಪಡೆಯಬೇಕೆ ಎಂಬ ಸ್ಪಷ್ಟನೆಯ ಅಗತ್ಯವಿದೆ.

 ಆದ್ದರಿಂದ ಯಾವುದೇ ರೀತಿಯಲ್ಲಿ ಆಗಲಿ ಈ ಮಾಹಿತಿ ಪಡೆಯುವುದು ನನ್ನ ಆಧ್ಯಕರ್ತವ್ಯವಾಗಿದೆ. ನನಗೆ ಕೆಲವರು ರಿವ್ಯೂ ಮಾಡುತ್ತಿರುತ್ತಾರೆ. ಹೋರಾಟ ರತ್ನ ದಿ. ಕೆ.ಆರ್. ನಾಯಕ್ ಬದುಕಿರುವವರಿಗೂ ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಪೋನ್ ಮಾಡಿ ವರದಿ ಪಡೆಯುತ್ತಿದ್ದರು. ನಮ್ಮ ಮನೆಯಲ್ಲಿ ಲ್ಯಾಂಡ್ ಲೈನ್ ಫೋನ್ ಬಂದರೆ ಫೋನ್ ರಿಸೀವ್ ಮಾಡದೆ ಕೆ.ಆರ್.ನಾಯಕ್ ಫೋನ್ ಬಂದಿದೆ ನೋಡಿ ಎಂದು  ಹೇಳುತ್ತಿದ್ದರು.

  ಪ್ರಸ್ತುತ ಶ್ರೀ ಟಿ.ಆರ್.ರಘೋತ್ಮರಾವ್‌ರವರು ಮತ್ತು ಶ್ರೀ ಮುರುಳೀಧರ್ ನಾಯಕ್‌ರವರು ಬಹುತೇಕ ಪ್ರತಿವಾರದ ಅಭಿವೃದ್ಧಿ ಯೋಜನೆಗಳ ಪ್ರಗತಿ ಬಗ್ಗೆ ಚರ್ಚಿಸುತ್ತಾರೆ. ಈಗ ಇ-ಪೇಪರ್ ಓದುಗರು ಸಹ ಡಿಜಿಟಲ್ ರೂಪದಲ್ಲಿ ಇದು ಏನಾಯಿತು ಸಾರ್ ಎಂದು ಪ್ರಶ್ನೇ ಮಾಡುತ್ತಿದ್ದಾರೆ. ನನಗಂತೂ ಇದು ಖುಷಿ ನೀಡುತ್ತದೆ.

ಒಂದು ದಿವಸ ಇ-ಪೇಪರ್ ಬರೆಯದೇ ಇದ್ದರೇ, ಯಾಕೆ ಸಾರ್ ಉಷಾರ್ ಇಲ್ಲವಾ ಅನ್ನುವ ಮಟ್ಟಕ್ಕೆ ಹೋಗಿದ್ದಾರೆ ನಮ್ಮ ಓದುಗರು. ‘ಅಭಿವೃದ್ಧಿ ಹುಚ್ಚರು ಇದ್ದಾರೆ’ ಎಂದು ನನಗೆ ನಗುಬರುತ್ತದೆ.

 ಈ ಹಿನ್ನೆಲೆಯಲ್ಲಿ ನಾನು ಬರೆದ ಪತ್ರಗಳಿಗೆ ವಿಳಂಭ ಮಾಡದೇ ಪತ್ರಗಳ ಪ್ರಗತಿ ಬಗ್ಗೆ ಉತ್ತರ ನೀಡಿ ಶಾಲಿನಿ ಮೇಡಂ.

ಓದುಗರು ನಿಮಗಿಂತ ಪಾಸ್ಟ್ ಇದ್ದಾರೆ ಮೇಡಂ ಇನ್ನೂ ಉತ್ತರ ಬಂದಿಲ್ಲವಾ ಸಾರ್ ಎನ್ನುವವರು ಉಂಟು’