22nd December 2024
Share

TUMKURU:SHAKTHIPEETA FOUNDATION

ಕರ್ನಾಟಕ ವಾಟರ್ ಗ್ರಿಡ್ ಕೆನಾಲ್

ಎತ್ತಿನಹೊಳೆ ಯೋಜನೆ ಕೆನಾಲ್, ಹೇಮಾವತಿ ಪ್ಲಢ್ ಪ್ಲೋಕೆನಾಲ್. ಜಿ.ಎಸ್.ಪರಮಶಿವಯ್ಯನವರ ಯೋಜನೆ ಕೆನಾಲ್ ಮತ್ತು ಹಾಲಿ ಇರುವ ತುಮಕೂರು ಬ್ರಾಂಚ್ ಹೇಮಾವತಿ ಕೆನಾಲ್ ನಕ್ಷೆಯಲ್ಲಿ ಗಮನಿಸಿ ಬಹುತೇಕ ಸಮಾನಂತರವಾಗಿ ಹರಿಯಲಿವೆ.

ನಾನು ಬರೆದಿರುವ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಪುಸ್ತಕದ ನಕ್ಷೆ ಗಮನಿಸಿ

ಜಿ.ಎಸ್.ಪರಮಶಿವಯ್ಯನವರ ಯೋಜನೆ ಕೆನಾಲ್ ಈಗ ಎತ್ತಿನಹೊಳೆ ಯೋಜನೆ ಕೆನಾಲ್ ಆಗಿದೆ. ಈ ಕಾಲುವೆಯನ್ನು ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಆಗಿ ರೂಪಿಸುವುದು ಶ್ರೀ ಜಿ.ಎಸ್.ಬಸವರಾಜ್‌ರವರ ಕನಸು.

ನಾನು ಬರೆದಿರುವ ’ಎತ್ತಿನಹೊಳೆ – ತಪ್ಪು ತಿದ್ದಿಕೊಳ್ಳಿ’ ಪುಸ್ತಕದ ಪುಟಗಳನ್ನು ಹಾಕಿದ್ದೇನೆ ವಿವರ ಗಮನಿಸಿ.

 ಈ ಕಾಲುವೆಯ ಸಾಮಾರ್ಥ್ಯವನ್ನು ಸುಮಾರು 10000 cusecs ನೀರಿನ ಸಾಮಾರ್ಥ್ಯಕ್ಕೆ ನಿರ್ಮಾಣ ಮಾಡಿದ್ದರೆ. ಇನ್ನೂ ಮುಂದೆ ಯಾವುದೇ ಹೆಸರಿನ ಯೋಜನೆ ರೂಪಿಸಿ ಇದೇ ಕಾಲುವೆಗೆ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರನ್ನು ಹರಿಸಬಹುದಾಗಿತ್ತು.

ಏಕೆಂದರೆ ಈ ಬಾಗದಲ್ಲಿರುವ ನೀರು ಸುಮಾರು 2೦೦೦ ಟಿಎಂಸಿ ಅಡಿ, ಇದರಲ್ಲಿ ಶೇ 2೦ ರಷ್ಟು ನೀರು ಬಳಸಲು ಸಾಧ್ಯತೆ ಇದೆ, ಅಂದರೆ ಸುಮಾರು 4೦೦ ಟಿಎಂಸಿ ಅಡಿನೀರಿನ ಯೋಜನೆ ರೂಪಿಸಿದಾಗ ಇನ್ನೊಂದು ಕೆನಾಲ್ ಮಾಡುವ ಪ್ರಮೇಯ ಬರುತ್ತಿರಲಿಲ್ಲ.

 ಈಗ ಹೆಚ್ಚಿನ ನೀರು ತರಬೇಕಾದರೆ ಇದೇ ಕೆನಾಲ್ ಮೇಲೆ ಇನ್ನೊಂದು ಪ್ಲೈಓವರ್ ಕೆನಾಲ್ ನಿರ್ಮಿಸುವ ಕಾಲ ಬರಲಿದೆ ಅಥವಾ ಎತ್ತಿನಹೊಳೆ ಕಾಲುವೆಯನ್ನು ಅಗಲೀಕರಣ ಮಾಡಬೇಕಾಗುವುದು. ನಮ್ಮ ರಾಜ್ಯದಲ್ಲೂ ಒಬ್ಬಲ್ಲ ಒಬ್ಬ ತೆಲಂಗಾಣದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಕೆ.ಚಂದ್ರಶೇಖರ್‌ರಾವ್‌ರವರು ರೂಪಿಸಿರುವ ಕಾಳೇಶ್ವರಂ ಮಾದರಿ ಯೋಜನೆ ಮಾಡುವ ಭೂಪ’ ಬಂದೇ ಬರುತ್ತಾರೆ.

‘ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಶ್ರೀ ರಮೆಶ್ ಜಾರಕಿಹೊಳೆರವರೇ ಮಹಾತ್ಮರಾಗಲಿ ಎಂಬುದು ಜಿ.ಎಸ್.ಬಸವರಾಜ್‌ರವರ  ಆಸೆ. ಅಧೃಷ್ಟ ಯಾರಪ್ಪನ ಮನೆಯದು ಕಾದು ನೋಡೋಣ’

ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಯೋಜನೆಯನ್ನು ಮೊದಲು ಮಾಡಿ, ನಂತರ ಒಂದೊಂದೇ ಹೆಡ್‌ವರ್ಕ್ಸ್ ಯೋಜನೆ ರೂಪಿಸಿ, ಸಾಧ್ಯವಾದಷ್ಟು ನೀರು ಹಾಕುತ್ತಿರ ಬಹುದು ಎಂಬ ನಮ್ಮ ಆಸೆಗೆ ಶ್ರೀ ಜಗದೀಶ್ ಶೆಟ್ಟರ್ ರವರು ಮುಖ್ಯಮಂತ್ರಿಗಳಾಗಿದ್ದಾಗ ಮುಂಗಡ ಪತ್ರದಲ್ಲಿ ಸೇರ್ಪಡೆ ಮಾಡಿಸಲು ಬಹುದೊಡ್ಡ ಹೋರಾಟ ನಡೆದಿತ್ತು.

ಶ್ರೀಮತಿ ಶಿಲ್ಪಶೆಟ್ಟರ್ ಸಹಕಾರ ಮರೆಯುವ ಹಾಗಿಲ್ಲ.

 ಮುಂಗಡ ಪತ್ರದಲ್ಲಿ ವಿಷಯ ಮಂಡಿಸಲಿಲ್ಲ, ಪೂರಕ ಮುಂಗಡ ಪತ್ರದಲ್ಲಿ ವಿಷಯ ಮಂಡಿಸಲು ತುಮಕೂರು ನಗರದ ಟೌನ್ ಹಾಲ್‌ನಲ್ಲಿ ಆಗಿನ ಕೆಜಿಪಿ ಪಕ್ಷದವರು ಧರಣೆ ಕುಳಿತರು. ಜಿ.ಎಸ್.ಬಸವರಾಜ್‌ರವರು ಧರಣಿಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ಚಾರ್ಜ್ ಮಾಡಿದರು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಂದೇ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಜಗದೀಶ್ ಶೆಟ್ಟರ್ ರವರನ್ನು ನೋಡಲು ಅವರ ಮನೆಗೆ ಜಿ.ಎಸ್.ಬಸವರಾಜ್‌ರವರು  ಮತ್ತು ನಾನು ಹೋದೆವು.

 ಜಿ.ಎಸ್.ಬಸವರಾಜ್‌ರವರು  ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಪ್ರಸ್ತಾಪ ಮುಂದೆ ಇಟ್ಟರು, ತಕ್ಷಣ ಪ್ರತಿಕ್ರೀಯಿಸಿದ ಜಗದೀಶ್‌ಶೆಟ್ಟರ್‌ರವರು ಏನ್ ಬಸವರಾಜ್ರವರೇ ಪತ್ರಿಕೆಯಲ್ಲಿ ಬಾಯಿಗೆ ಬಂದ ಹಾಗೆ ಬೈದಿದ್ದೀರಿ, ಈಗ ಬಂದು ಯೋಜನೆ ಮಾಡಿ ಅಂತೀದ್ದೀರಿ ಎಂದರು.

ಜಿ.ಎಸ್.ಬಸವರಾಜ್‌ರವರು  ಅಷ್ಟೇ ಶೀಘ್ರವಾಗಿ ಆ ಜಗಳ ಬಿಜೆಪಿ ಮತ್ತು ಕೆಜಿಪಿಯದ್ದು. ನಾನು ಈಗ ಬಂದಿರುವುದು ಒಬ್ಬ ಲೋಕಸಭಾ ಸದಸ್ಯನಾಗಿ, ಒಬ್ಬ ಮುಖ್ಯ ಮಂತ್ರಿಯವರ ಮನೆಗೆ, ಜನತೆಗೆ ಅನೂಕೂಲ ಕೇಳಲು, ನನ್ನ ಸ್ವಂತದ್ದು ಏನೂ ಇಲ್ಲವಲ್ಲ ಸಾರ್ ಎಂದರು.

ತಕ್ಷಣ ಸ್ಪಂಧಿಸಿದ ಜಗದೀಶ್‌ಶೆಟ್ಟರ್‌ರವರು ನಕ್ಕು ಬಿಟ್ಟರು, ಆಯಿತಣ್ಣ ಪೂರಕ ಮುಂಗಡ ಪತ್ರದಲ್ಲಿ ಸೇರ್ಪಡೆ ಮಾಡುತ್ತೇನೆ ಎಂಬ ಭರವಸೆ ನೀಡಿದರು. ನಂತರ ವಾಪಾಸ್ಸು ಬಂದು ಮಾನ್ಯ ಮುಖ್ಯಮಂತ್ರಿಗಳಿಗೆ ಸಿದ್ಧಗಂಗಾಮಠದ ಶ್ರೀಗಳು, ಚುಂಚನಗಿರಿ ಶ್ರೀಗಳು ಮತ್ತು ನೊಣವಿನಕೆರೆ ಶ್ರೀಗಳ ಪತ್ರವನ್ನು ತೆಗೆದುಕೊಂಡು ಹೋಗುವ ನಿರ್ಣಯ ಮಾಡಿದೆವು.

  ಶ್ರೀಗಳ ಶೀಫಾರಸ್ಸು ಪತ್ರದೊಂದಿಗೆ ಜಗದೀಶ್‌ಶೆಟ್ಟರ್‌ರವರ ಮನೆಗೆ ಶ್ರೀ ಜಿ.ಎಸ್.ಬಸವರಾಜ್‌ರವರು, ಶ್ರೀ ಕೊಪ್ಪಳ್ ನಾಗರಾಜ್ ರವರು ಮತ್ತು ನಾನು ಹೋದೆವು. ಅವರು ಸಿಗಲಿಲ್ಲ ಅವರ ಶ್ರೀಮತಿಯವರಾದ ಶ್ರೀಮತಿ ಶಿಲ್ಪ ಜಗದೀಶ್‌ಶೆಟ್ಟರ್ ರವರಿಗೆ ಸ್ವಾಮಿಜಿಗಳ ಪತ್ರ ನೀಡಿದಾಗ, ಸಿದ್ಧಗಂಗಾ ಸ್ವಾಮಿಜಿಗಳ ಪತ್ರ ನೋಡಿ ಅಜ್ಜಯ್ಯನವರು ಪತ್ರ ಕೊಟ್ಟಿದ್ದಾರೆ. ಇದನ್ನು ಸೇರಿಸಲೇ ಬೇಕು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಪ್ರತಗಳನ್ನು ಕೊಡಿ ಎಂದು ಧೃಡವಾಗಿ ಹೇಳಿದರು.

ಪುನಃ ಸಾಯಂಕಾಲ ಅವರ ಮನೆಗೆ ಹೋದೆವು, ಶ್ರೀಮತಿ ಶಿಲ್ಪ ಜಗದೀಶ್‌ಶೆಟ್ಟರ್‌ರವರು ಹುಬ್ಬಳ್ಳಿಗೆ ಹೋಗಿದ್ದರು, ಜಗದೀಶ್‌ಶೆಟ್ಟರ್‌ರವರು ಒಂದು ಗುಪ್ತಸ್ಥಳದಲ್ಲಿ ಕುಳಿತು ಪೂರಕ ಮುಂಗಡ ಪತ್ರ ರಚಿಸುತ್ತಿರುವ ಮಾಹಿತಿ ದೊರೆಯಿತು.

ಅಂದು ರಾತ್ರಿ 12 ಗಂಟೆವರೆಗೂ ನಾವು ಮೂವರು ಅವರ ಮನೆಯಲ್ಲಿ ಒಂದು ರೀತಿ ಜಾಗರಣೆ ಕುಳಿತೆವು. ಶ್ರೀಮತಿ ಶಿಲ್ಪರವರು ಪದೇ ಪದೇ ಹುಬ್ಬಳ್ಳಿಯಿಂದ ಫೋನ್ ಮಾಡಿ ಊಟ ಮಾಡಿ, ಅವರು ಸಿಕ್ಕಿದ ತಕ್ಷಣ ವಿಷಯ ತಲುಪಿಸುತ್ತೇನೆ ಎಂದು ಹೇಳುತ್ತಲೇ ಇದ್ದರು.

 ಕೊನೆಗೂ ಫೋನ್ ಮಾಡಿ ಅವರ ಕಚೇರಿಯ ಆಪ್ತ ಸಹಾಯಕರಿಗೆ ತಿಳಿಸಿ ಶ್ರೀ ಬಸವರಾಜ್‌ರವರು ಹೇಳಿದ ವಿಷಯವನ್ನು ಟೈಪ್ ಮಾಡಿ, ಮಾನ್ಯ ಮುಖ್ಯಮಂತ್ರಿಯವರಿಗೆ ಕಳುಹಿಸಲು ತಿಳಿಸಿದರು. ನಾನೇ ಕುಳಿತು ಹೇಳಿ ಟೈಪ್ ಮಾಡಿಸಿದೆ. ನಾಳೆ ನಾಲ್ಕು ಗಂಟೆಗೆ ವಿಧಾನ ಸಭೆಯಲ್ಲಿ ಮಂಡಿಸಿದ ಪೂರಕ ಮುಂಗಡ ಪತ್ರದಲ್ಲಿ ಒಂದು ಅಕ್ಷರವನ್ನು ಬಿಡದಂತೆ ವಿಷಯ ಮಂಡಿಸಿದರು. ನಾನೂ ಸಹ ವಿಧಾನಸಭೆ ಗ್ಯಾಲರಿಯಲ್ಲಿಯೇ ಕುಳಿತುಕೊಂಡಿದ್ದೆ. ನಿಜಕ್ಕೂ ಶಿಲ್ಪಶೆಟ್ಟರ್‌ರವರು ಸ್ಪಂಧಿಸಿದ ರೀತಿ ಅದ್ಭುತವಾಗಿತ್ತು.

– ಮುಂದೇನು ಮಾಡಬೇಕು ಮುಂದುವರೆಯುವುದು.