29th March 2024
Share
G.S.BASAVARAJ, T.R.RAGHOTTHAMA RAO, MANUVINA KURIKE SHIVARUDRAIAH & KUNDARANAHALLI RAMESH

TUMAKURU:SHAKTHI PEETA FOUNDATION

ಇಂದಿನಿಂದ  ರಾಜ್ಯದ ನದಿ ಜೋಡಣೆ- ಬಹಿರಂಗ ಡೈರಿ ಆರಂಭ.

ರಾಜ್ಯದ ನದಿ ಜೋಡಣೆ- ಬಹಿರಂಗ ಡೈರಿ ಭಾಗ-1 ದಿನಾಂಕ: 08.11.2020   

 ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ  Consultative committee for the ministry of jalashkthi  ಸಮಿತಿ ಸದಸ್ಯರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ದಿನಾಂಕ:07.11.2020  ರಂದು ಫೋನ್ ಮಾಡಿ ಎಲ್ಲಿದ್ದೀಯಪ್ಪ ಎಂದರು.

ಅವರು ಕರೆ ಮಾಡಿದಾಗ ನಾನು ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ  ಕ್ಯಾಂಪಸ್‌ನಲ್ಲಿ ಪ್ರಪ್ರಥಮ ಕಟ್ಟಡ ನಿರ್ಮಾಣ ಮಾಡಲು ಗುತ್ತಿಗೆದಾರರ ಬಳಿ ಚರ್ಚೆ ಮಾಡುತ್ತಿದ್ದೆ.  ಶ್ರೀ ರಮೇಶ್ ಜಾರಕಿಹೊಳೆ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು ಯಾವಾಗ ಎಂದು ಕೇಳಿದರು.

 ಮೊಬೈಲ್ ಪರಿಶೀಲಿಸಿ ದಿನಾಂಕ:11.05.2020 ಸಾರ್ ಎಂದಾಗ, ಸುಮಾರು 6 ತಿಂಗಳು ಅಂದಿನ ಸಭೆ ನಿರ್ಣಯ ಏನಾಯಿತು. ಕೊರೊನಾ ಸಾರ್ ಕಡತ ನನೆಗುದಿಗೆ ಬಿದ್ದಿದೆ ಎಂದಾಗ, ಸರಿ ನಾನು ಈಗ ನಿಮ್ಮ ಮನೆಗೆ ಬರುತ್ತೇನೆ ಮನೆಯಲ್ಲಿ ಇರಿ ಎಂದರು. ಸಾರ್ ನಾನು ಹಿರಿಯೂರಿನಲ್ಲಿ ಇದ್ದೇನೆ ಎಂದಾಗ ಆಯಿತು ಬಂದು ಫೋನ್ ಮಾಡಿ ಹೇಳಿ ಎಂದು ಫೋನ್ ಇಟ್ಟರು.

 ಸಂಜೆ ಪುನಃ ಫೋನ್ ಮಾಡಿದರು, ಸಾರ್ ನಾನು ಇಲ್ಲೆ ಇದ್ದೇನೆ, ನಾಳೆ ಬೆಳಿಗ್ಗೆ ಕುಂದರನಹಳ್ಳಿಗೆ ಹೋಗಿ ಸಂಜೆ ತುಮಕೂರಿಗೆ ಬರುತ್ತೇನೆ ಎಂದಾಗ ಬಹುಷಃ ಅವರಿಗೆ ಸಿಟ್ಟು ಬಂದಿತು. ನೋಡಪ್ಪ ನಾಳೆ ಬೆಳಿಗ್ಗೆ ನೀನು ಸಿಗಲೇ ಬೇಕು, ಆ ಮೇಲೆ ಕುಂದರನಹಳ್ಳಿಗೆ ಹೋಗು ಸೀದ ತುಮಕೂರಿಗೆ ಬಂದು ಬಿಡು ಅರ್ಜೆಂಟ್ ಮಾತನಾಡಲೇ ಬೇಕು ಎಂದು ತಿಳಿಸಿದರು.

 ಸರಿ ನಾನು ಬೆಳಿಗ್ಗೆ ತುಮಕೂರಿಗೆ ಬಂದು ಅವರ ಆಪ್ತ ಸಹಾಯಕ ಶ್ರೀ ಉಮಾಶಂಕರ್‌ಗೆ ಫೋನ್ ಮಾಡಿ, ಸಾಯಿಬಾಬಾ ದೇವಾಸ್ಥಾನ ಬಳಿ ಬಂದಾಗ ಫೋನ್ ಮಾಡಪ್ಪ ಎಂದು ತಿಳಿಸಿದೆ. ಎಂಪಿಯವರು ಫೋನ್ ಮಾಡಿ ಈಗ ನಿಮ್ಮ ಮನೆಗೆ ಬರುತ್ತಾ ಇದ್ದೇನೆ ಎಂದಾಗ ಬೇಡ ಸಾರ್ ನಾನೇ ದೇವಾಸ್ಥಾನ ಬಳಿ ಬರುತ್ತೇನೆ, ಶ್ರೀ ಟಿ.ಆರ್.ರಘೋತ್ತಮರಾವ್‌ರವರು ನಾನು ಇಬ್ಬರೂ ಹೊರಟಿದ್ದೇವೆ ಎಂದೆ, ಸರಿ ಬನ್ನಿ ಎಂದು ಹೇಳಿದರು.

 ಸಾಯಿಬಾಬಾ ಬಳಿ ಹೋದಾಗ ಮಧ್ಯಾಹ್ನದ ಆರತಿ ಆರಂಭವಾಗುತ್ತಿತ್ತು, ರಾವ್ ಮತ್ತು ನಾನೂ ಇಬ್ಬರೂ ಆರತಿಗೆ ಕುಳಿತೆವು. ನನಗೆ ಎಂಪಿಯವರ ಮನದಾಳದ ಅರಿವು ಈಗಾಗಲೇ ಆಗಿತ್ತು, ‘ಸಾಯಿಬಾಬಾರಲ್ಲಿ ಪ್ರಾರ್ಥಿಸಿ ಇಂದಿನಿಂದ ರಾಜ್ಯದ ನದಿ ಜೋಡಣೆ ಕಡತಯಜ್ಞ ಆರಂಭಮಾಡುವುದಾಗಿ ಬೇಡಿದೆ’

 ಕಚೇರಿಗೆ ಬಂದಾಗ ಜಿಎಸ್‌ಬಿ ಯವರು ಎಲ್ಲರನ್ನೂ ಕಳುಹಿಸಿ, ಒಂದು ಘಂಟೆ ಯಾರನ್ನು ಒಳಗೆ ಬಿಡಬೇಡಿ ಎಂದು ಹೇಳಿ ಬಾಗಿಲು ಹಾಕಿಸಿ ಕುಳಿತು ಶುರು ಮಾಡಿದರು. ನೋಡಪ್ಪ ನಾನು ಎಂಪಿಯಾಗಿ ಎಷ್ಟು ದಿವಸ ಆಯಿತು. ಯಡಿಯೂರಪ್ಪವರು ಸಿಎಂ ಆಗಿ ಎಷ್ಟು ದಿವಸ ಆಯಿತು. ಜಾರಕಿಹೊಳೆ ಮೀಟಿಂಗ್ ಮಾಡಿ ಎಷ್ಟು ದಿವಸ ಆಯಿತು. ಜನರಿಗೆ ಮೋಸಮಾಡಿದ ಹಾಗೆ ಅಲ್ಲವಾ?

 ‘ನೀನು ಬೇರೆ ಏನು ಮಾಡುತ್ತಿಯೋ, ಬಿಡುತ್ತಿಯೋ ನಾನು ಕೇಳಲ್ಲ, ರಾಜ್ಯದ ನದಿ ಜೋಡಣೆ ಬಗ್ಗೆ ಖಡಕ್ ನಿರ್ಧಾರ ಕೈಗೊಳ್ಳಲೇ ಬೇಕು. ನನಗೆ ರಾತ್ರಿ ನಿದ್ದೆ ಬರುತ್ತಿಲ್ಲ. ಎಂದು ಶುರು ಮಾಡಿ, ಅವರ ತಲೆಯಲ್ಲಿ ಇರುವ ಎಲ್ಲಾ ನೀರಾವರಿ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಿದರು

 ಸರಿ ಬಿಡಿ ಸಾರ್ ನಾನು ಈಗ ಬಾಬಾರಲ್ಲಿ ಪ್ರತಿಜ್ಞೆ ಮಾಡಿದ್ದೇನೆ, ನಿಮ್ಮ ಕನಸು ಜಾರಿಯಾಗುವವರೆಗೂ ನಿರಂತರವಾಗಿ ಪ್ರತಿ ದಿವಸವೂ ಕನಿಷ್ಟ ಒಂದು ಗಂಟೆ ರಾಜ್ಯದ ನದಿ ಜೋಡಣೆಗೆ ಮೀಸಲು ಸಾರ್. 108 ಶಕ್ತಿ ಪೀಠಗಳಲ್ಲೂ ಈಗಾಗಲೇ ಪ್ರಾರ್ಥಿಸಿ ಪೂರ್ವಭಾವಿಯಾಗಿ ಹಲವಾರು ಹಂತದಲ್ಲಿ ಕೆಲಸ ಮಾಡಿದ್ದೇವೆ. ಇಂದಿನಿಂದ ರಾಜ್ಯದ ನದಿ ಜೋಡಣೆ- ಬಹಿರಂಗ ಡೈರಿ’ ಬರೆಯುವ ಮೂಲಕ ಪ್ರತಿ ದಿವಸದ ಕಾರ್ಯಕ್ರಮವನ್ನು ಡಿಜಿಟಲ್ ದಾಖಲೆ ಮಾಡುತ್ತೇನೆ ಎಂದು ತಿಳಿಸಿದೆ. 

 ನಾಳೆ ಬೆಳಿಗ್ಗೆ ಯಡಿಯೂರಪ್ಪನವರ ಮನೆಗೆ ಹೋಗೋಣ ಒಂದು ಪತ್ರ ರೆಡಿ ಮಾಡು ಎಂದು ತಿಳಿಸಿದರು, ಆಯಿತು ಎಂದು ಹೇಳಿ ಮನೆಗೆ ಹೊರಟೆ. ಜೊತೆಯಲ್ಲಿ ಶ್ರೀ ಟಿ.ಆರ್.ರಘೋತ್ತಮರಾವ್‌ರವರು, ಶ್ರೀ ಶಿವರುದ್ರಯ್ಯನವರು, ಶ್ರೀ ಉಮಾಶಂಕರ್ ಇದ್ದರು.

ಸಂಜೆ ಪತ್ರ ರೆಡಿ ಮಾಡಿ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದ ತಾಂತ್ರಿಕ ಸಮಿತಿ ಸದಸ್ಯರಿಗೆ ವಾಟ್ಸ್‌ಅಫ್ ಮೂಲಕ ತಿಳಿಸಿದೆ.  ಅವರು ಸಹ ಕೆಲವು ಪದಗಳ ಬದಲಾವಣೆಗೆ ಸಲಹೆ ನೀಡಿದರು.

 ರಾತ್ರಿ ಶ್ರೀ ಹೆಚ್.ಕೆ.ಪಾಟೀಲ್ ಮನೆಗೆ ಫೋನ್ ಮಾಡಿ, ಬೆಳಿಗ್ಗೆ ಜಿಎಸ್‌ಬಿಯವರು ಮತ್ತು ನಾನು ನಿಮ್ಮ ಮನೆಗೆ ಬರುತ್ತೇವೆ ಎಂದು ತಿಳಿಸಿದೆ. ಇಂದಿನಿಂದ WATER BUDGET- WATER AUDIT- WATER STRATAGY ಜೊತೆಗೆ ರಾಜ್ಯದ ನದಿ ಜೋಡಣೆಯ ಕಡತದ ಅನುಸರಣೆಯ ವಿವರ ನಿಮ್ಮ ಬೆರಳ ತುದಿಯಲ್ಲಿ ಬರಲಿದೆ. ಪ್ರಿಯ ಓದುಗರೇ ದಯವಿಟ್ಟು ತಾವೂ ಸಲಹೆ ನೀಡಿ ಸಹಕರಿಸಿ.

  ಆನ್‌ಲೈನ್ ಮೂಲಕ  www.shakthipeeta.in    ಮತ್ತು    epaper.shakthipeeta.in  FOURM    ಚರ್ಚೆಗೆ ಅವಕಾಶ ಕಲ್ಪಿಸಿ ಎಲ್ಲಾ ವರ್ಗದವರ ಪರ-ವಿರೋಧ ಸಲಹೆಗಳನ್ನು ಸ್ವೀಕರಿಸಲಾಗುವುದು.