22nd December 2024
Share
G.S.BASAVARAJ. MP. RAKESH SING IAS. KUNDARANAHALLI RAMESH & HONNUDIKE LOKESH

TUMAKURU:SHAKTHI PEETA FOUNDATION

ರಾಜ್ಯದ ನದಿ ಜೋಡಣೆ- ಬಹಿರಂಗ ಡೈರಿ ಭಾಗ-3 ದಿನಾಂಕ: 09.11.2020

  ರೈತರೇ ನನ್ನ ಉಸಿರು, ರಾಜ್ಯದ ರೈತರಿಗೆ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸುವುದು ನನ್ನ ಆಧ್ಯ ಕರ್ತವ್ಯ, ಎಷ್ಟೇ ಕಷ್ಠವಾಗಲಿ ರಾಜ್ಯದ ಜನತೆಗೆ ನದಿ ನೀರು ನೀಡುವ ಮೂಲಕ ನೆಮ್ಮದಿ ನೀಡಲೇ ಬೇಕು. ಎಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿಗೆ ಸ್ಪಂಧಿಸುವ ಮೂಲಕ ರಾಜ್ಯದ ನದಿ ಜೋಡಣೆಗೆ ಡಿಪಿಆರ್ ತಯಾರಿಸಲು ಬಿಎಸ್‌ವೈ ಹಸಿರು ನಿಶಾನೆ ನೀಡಿದರು.                             

ದಿನಾಂಕ: 09.11.2020 ರಂದು ಬೆಂಗಳೂರಿನ ನಿವಾಸದಲ್ಲಿ ಬೇಟಿಯಾಗಿ ಮನವಿ ಸಲ್ಲಿಸಿದಾಗ,  ರಾಜ್ಯದ ನದಿ ಜೋಡಣೆ  ಯೋಜನೆಗಳ ವಿವರವಾದ ಯೋಜನಾ ವರದಿ(ಡಿಪಿಆರ್) ತಯಾರಿಸಲು, ಅಗತ್ಯ ಕ್ರಮ ಕೈಗೊಳ್ಳಲು ಜಲಸಂಪನ್ಮೂಲ ಸಚಿವಾಲಯದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್ ಸಿಂಗ್ ರವರಿಗೆ ಆದೇಶ ನೀಡಿದರು. 

ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿ ವಿವರ

  ಈಗಾಗಲೇ ತಾವೂ ಮಾನ್ಯ ಪ್ರಧಾನ ಮಂತ್ರಿಯವರಿಗೆ ಬರೆದ ಪತ್ರದ ಹಿನ್ನೆಲೆಯಂತೆ, ಕೇಂದ್ರ ಸರ್ಕಾರದ  NPP- National Perspective Plan’      ಯೋಜನೆ ಅಡಿಯಲ್ಲಿ ರಾಜ್ಯದ ನದಿ ಜೋಡಣೆ ಯೋಜನೆ ಮಾಡುವ ಮೂಲಕ, ಜಲಜೀವನ್ ಮಿಷನ್ ಯೋಜನೆ’ಯಡಿ, ರಾಜ್ಯದ ಪ್ರತಿಯೊಂದು ಗ್ರಾಮಗಳ ಮನೆ-ಮನೆಗೆ ಕೊಳಾಯಿ ಮೂಲಕ  ನೀರು ಸರಬರಾಜು ಮಾಡುವ ಯೋಜನೆ   ಹಾಗೂ ರಾಜ್ಯಾಧ್ಯಾಂತ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಮೂಲಕ   ಎಲ್ಲಾ ಕೆರೆ-ಕಟ್ಟೆಗಳಿಗೆ ಮತ್ತು ‘ಒಣ ಭೂಮಿ ಕೃಷಿಗಾಗಿ’ ನದಿ ನೀರು ಅಲೋಕೇಷನ್ ಮಾಡಿ, ಯೋಜನೆ ಜಾರಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ.

  ಮೇಲ್ಕಂಡ ಯೋಜನೆಗಳಿಗೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ 2020-2021 ನೇ ಸಾಲಿನ ಆಯವ್ಯಯದಲ್ಲಿರುವ  ಜಲಸಂಪನ್ಮೂಲ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ, ಕೇಂದ್ರ ಸರ್ಕಾರದ  NWDA-NATIONAL WATER DEVELOPMENT AGENCY   ಮತ್ತು ರಾಜ್ಯ ಸರ್ಕಾರದ  ಜಲ ಸಂಪನ್ಮೂಲ ಇಲಾಖೆಯ ಸಹಭಾಗಿತ್ವದಲ್ಲಿ ವಿವರವಾದ ಯೋಜನಾ ವರದಿ (ಡಿಪಿಆರ್)   ಮಾಡಲು  ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಕೋರಿದೆ.

ಶ್ರೀ ರಾಕೇಶ್‌ಸಿಂಗ್‌ರವರಿಗೆ ಜಿಎಸ್‌ಬಿ ಪತ್ರ

  ಮಾನ್ಯ ಮುಖ್ಯ ಮಂತ್ರಿಗಳು ಆದೇಶ ಮಾಡಿದ ಪತ್ರವನ್ನು ಜಲಸಂಪನ್ಮೂಲ ಸಚಿವಾಲಯದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್‌ಸಿಂಗ್‌ರವರಿಗೆ ಜಿ.ಎಸ್.ಬಸವರಾಜ್‌ರವರು ನೀಡಿ ಕಾಲಮಿತಿ ನಿಗದಿಗೊಳಿಸಿ, ಸಮರೋಪಾದಿಯಲ್ಲಿ ಡಿಪಿಆರ್ ತಯಾರಿಸಲು ಸಮಾಲೋಚನೆ ನಡೆಸಿದರು.

  ಈ ಸಂದರ್ಭದಲ್ಲಿ ಹಾಜರಿದ್ದ ಕುಂದರನಹಳ್ಳಿ ರಮೇಶ್‌ರವರು ಕೈ ಮುಗಿದು ಈ ಕಡತದ ಅನುಸರಣೆ ಮಾಡಲು  ಟೇಬಲ್ ಟೇಬಲ್ ಮುಂದೆ ಕೂರುವ ಮೂಲಕ, ಯಾರ್‍ಯಾರು ಅತಿ ಶೀಘ್ರವಾಗಿ ಕೆಲಸ ಮಾಡಿದರು, ಯಾರು ವಿಳಂಭ ಮಾಡಿದರು ಎಂಬ ಬಗ್ಗೆ ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ’ ಬರೆಯುವುದಾಗಿ ವಿಷಯ ಹಂಚಿಕೊಂಡರು.

 ಶ್ರೀ ರಾಕೇಶ್‌ಸಿಂಗ್‌ರವರು ಪ್ರತಿಕ್ರಿಯಿಸಿ  ಸಾರ್ ನಿಮಗೂ, ಮಾನ್ಯ ಮುಖ್ಯ ಮಂತ್ರಿಗಳಿಗೂ, ಮಾನ್ಯ ಸಚಿವರಿಗೂ ಏನೂ ಬೇಕಾದರೂ ಹೇಳ ಬಹುದು. ಆದರೇ ರಮೇಶ್‌ಜಿಯವರಿಗೆ —- ಎಂದು ಹಾಸ್ಯ ಮಾಡುತ್ತಾ ಕೂಡಲೇ ಕಾರ್ಯ ಪ್ರವೃತ್ತರಾಗುವುದಾಗಿ ತಿಳಿಸಿದರು. ಜೊತೆಯಲ್ಲಿ ಶ್ರೀ ಲೋಕೇಶ್‌ರವರು ಇದ್ದರು.