6th December 2024
Share
G.S.BASAVARAJ. K.JAIPRAKASH. N.RANGANATH . KUNDARANAHALLI RAMESH. MANJAPPA. SHANKARALINGEGOWDA & MAHESH

TUMAKURU:SHAKTHIPEETA FOUNDATION

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-4 ದಿನಾಂಕ: 11.11.2020

 ನನ್ನ ಅನುಭವದ ಪ್ರಕಾರ, ನಮ್ಮ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಒಂದು ತರಹ ಋಷಿಗಳ ತರಹ, ಅಂದರೆ  ರೂಢಿಯಲ್ಲಿರುವ ಮಾತಿನ ಪ್ರಕಾರ ಕೊಟ್ಟರೇ ಶಾಪ- ಇಟ್ಟರೇ ವರ’ ಊ ಆಯಿತು ಎಂದರೆ ಯಾವ ಕಾರಣಕ್ಕೂ ಬದಲಾಗುವುದಿಲ್ಲ, ಆಗಲ್ಲ ಎನ್ನುವುದಾದರೇ ನೇರವಾಗಿ ಅದು ಆಗಲ್ಲ ಕಣಣ್ಣ ಅಂದರೆ ಆಗಲ್ಲ, ಎಂದು ಹೇಳಿದರೆ ಅಷ್ಟೆ?                      

 ಬಿಜೆಪಿಯ ನಾಯಕರುಗಳಿಗೆ ಇದು ನನಗಿಂತ ಜಾಸ್ತಿ ಅನುಭವವಾಗಿದೆ. ಕಳೆದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿ ಬಗ್ಗೆ ಬಿಎಸ್‌ವೈ ರವರೊಂದಿಗೆ ಜಿ.ಎಸ್.ಬಸವರಾಜ್‌ರವರು ಹಲವಾರು ಭಾರಿ ಚರ್ಚೆ ನಡೆಸಿದ್ದಾರೆ.

 ಜಿ.ಎಸ್.ಬಸವರಾಜ್‌ರವರ ಮನವಿ ಮೇರೆಗೆ, ಈ ಭಾರಿ ಮುಖ್ಯ ಮಂತ್ರಿಗಳು ಆದ ತಕ್ಷಣ ಎರಡು ಪತ್ರಗಳನ್ನು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಬರೆಯುವ ಮೂಲಕ ಚಾಲನೆ ನೀಡಿದ್ದರು. ಆ ಎರಡು ಪತ್ರಗಳನ್ನು ಈಗಿನ ಜಲಸಂಪನ್ಮೂಲ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ರವರು ಡ್ರಾಫ್ಟ್ ಮಾಡಿದ್ದು ಇತಿಹಾಸ.

  ಮೂರನೇ ಪತ್ರವನ್ನು ಬರೆಯುವಾಗ ಮೊದಲು ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿ, ನಂತರ ಕಾವೇರಿ ನೀರಾವರಿ ನಿಗಮದಲ್ಲಿ ಮಾನ್ಯ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಪ್ರಧಾನಿವರಿಗೆ ಮಾನ್ಯ ಮುಖ್ಯ ಮಂತ್ರಿಯವರಿಂದ ’ರಾಜ್ಯದ ನದಿ ಜೋಡಣೆ’ ಯೋಜನೆಗೆ ಸಹಕರಿಸಲು ಒಂದು ಪತ್ರ ಬರೆಯಲಾಗಿದೆ.

ಮೂರನೇ ಪತ್ರದ ಡ್ರಾಪ್ಟ್‌ನ್ನು ಕೆ.ಜೈಪ್ರಕಾಶ್ ಮತ್ತು ತಂಡ ಒಂದು ರಾಮಾಯಣ ಬರೆದ ಹಾಗೆ ಬರೆದಿದ್ದು ಇತಿಹಾಸ. ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿಕುಮಾರ್ ರವರು ಅಂತಿಮ ರೂಪು ನೀಡಿದ್ದರು.

ಹಾಗೂ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರು ಸಹ ಸಭೆಗೆ ಭಾಗವಹಿಸಿ, ರಾಜ್ಯದಲ್ಲಿ ಸಮಗ್ರ ನೀರಾವರಿ ಯೋಜನೆ ಕೈಗೊಳ್ಳುವುದಾಗಿ ‘ನೀತಿ ಆಯೋಗದ ಪೋರ್ಟಲ್‌ಗೆ ಅಫ್ ಲೋಡ್ ‘ ಮಾಡಲಾಗಿದೆ.

 ಮಾನ್ಯ ಮುಖ್ಯ ಮಂತ್ರಿಗಳು, ಕಳೆದ 2020-2021  ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಸಮಗ್ರ ನೀರಾವರಿ ಯೋಜನೆಗೆ ಅಗತ್ಯವಿರುವ ಎಲ್ಲಾ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇವೆಲ್ಲದರ ಜೊತೆಗೆ ವಿವರವಾದ ಡಿಪಿಆರ್ ಮಾಡಲು ಈಗ ಆದೇಶ ನೀಡುವ ಮೂಲಕ ವಿಧಿವತ್ತಾಗಿ ಚಾಲನೆ ನೀಡಿದ್ದಾರೆ.

 ಈ ಹಿನ್ನಲೆಯಲ್ಲಿ ದಿನಾಂಕ:09.11.2020 ರಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರೊಂದಿಗೆ ಸಮಾಲೋಚನೆಯನ್ನು ನಡೆಸಲಾಯಿತು. ಆರಂಭದಿಂದ ಅಂದರೆ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿಯೇ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿ ಬಗ್ಗೆ, ರಾಜ್ಯದ ಹಲವಾರು ಪರಿಣಿತರು ಬಂದು ಪಿಪಿಟಿ ಪ್ರದರ್ಶನ ಮಾಡಿದ್ದರು.

 ನಂತರ ಎಲ್ಲವನ್ನೂ ಕ್ರೋಢಿಕರಿಸಿ ಒಂದು ಕಲ್ಪನಾ ವರದಿಯನ್ನು ಮಾಡಲು ಬೆಂಗಳೂರಿನ ಇಐ ಟೆಕ್ನಾಲಜಿಯ ಶ್ರೀ ಎನ್.ರಂಗನಾಥ್‌ರವರಿಗೆ  ಬಸವರಾಜ್‌ರವರು ಹೇಳಿದ ನಂತರ ಅವರು ಪ್ರತಿಯೊಂದು ಸಭೆಯಲ್ಲಿಯೂ ಹಾಜರಾಗಿ ಸಮಾಲೋಚನೆ ನಡೆಸುವುದು ವಾಡಿಕೆಯಾಗಿದೆ.

 ಈ ಸಭೆಯಲ್ಲಿ ನಿಗಮದ ವ್ಯಾಪ್ತಿಯ ಮುಖ್ಯ ಇಂಜಿನಿಯರ್‌ಗಳಾದ ಹಾಸನದ ಶ್ರೀ ಮಂಜಪ್ಪನವರು, ಮೈಸೂರಿನ ಶ್ರೀ ಶಂಕರೇಗೌಡರವರು,  ತುಮಕೂರಿನ ಶ್ರೀ ಮಹೇಶ್‌ರವರು ಮತ್ತು ರಾಜ್ಯ ನೀರಾವರಿ ಸಲಹಾಗಾರರಾದ ಶ್ರೀ ರಾಮಯ್ಯನವರು ಭಾಗವಹಿಸಿದ್ದರು.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಿಂದ ಆರಂಭಿಸಿ ಇಲ್ಲಿಯವರೆಗಿನ ಎಲ್ಲಾ ಬೆಳವಣಿಗೆಗಳ ಒಂದು ಪರಿಷ್ಕೃತ ಪಿಪಿಟಿ ಮಾಡಲು ಶ್ರೀ ಎನ್.ರಂಗನಾಥ್‌ರವರಿಗೆ  ಬಸವರಾಜ್‌ರವರು ಹೇಳಿದ್ದಾರೆ.  ಅಂದರೆ

  1. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯ.
  2. ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಣಯ.
  3. ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರು ನೀತಿ ಆಯೋಗದ ಪೋರ್ಟಲ್‌ಗೆ ಅಫ್ ಲೋಡ್ ಮಾಡಿರುವುದು.
  4. ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆ ರವರ ಅಧ್ಯಕ್ಷತೆಯಲ್ಲಿ ವಿಶ್ವೇಶ್ವರಯ್ಯ ಜಲನಿಗಮದಲ್ಲಿ ನಡೆಸಿದ ಸಭೆ ನಿರ್ಣಯ.
  5. 2020-2021 ನೇ ಸಾಲಿನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಸಮಗ್ರ ನೀರಾವರಿ ಯೋಜನೆಗೆ ಅಗತ್ಯವಿರುವ ಪ್ರಕಟಿಸಿರುವ  ಎಲ್ಲಾ ಯೋಜನೆಗಳ ಮಾಹಿತಿ.
  6. ಮಾನ್ಯ ಮುಖ್ಯ ಮಂತ್ರಿಗಳು, ಮಾನ್ಯ ಪ್ರಧಾನ ಮಂತ್ರಿಯವರಿಗೆ ಬರೆದ ಮೂರು ಪತ್ರಗಳ ಪ್ರಗತಿ.
  7. ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿವರಾದ ಶ್ರೀ ಎಲ್.ಕೆ.ಅತೀಕ್‌ರವರ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆ ನಡವಳಿಕೆಗಳು.
  8. 2016 ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಸ್ಟೇಟ್ ಇರ್ರಿಗೇಷನ್ ಪ್ಲಾನ್ ಮತ್ತು ಡಿಸ್ಟ್ರಿಕ್ಟ್ ಇರ್ರಿಗೇಷನ್ ಮಾಡಿ ಕೇಂದ್ರ ಸರ್ಕಾರದ ಪೋರ್ಟಲ್‌ಗೆ ಅಫ್ ಲೋಡ್ ಮಾಡಿರುವ ಪ್ಲಾನ್‌ನಲ್ಲಿರುವ ಅಂಶಗಳು.
  9. ಉದ್ದೇಶಿತ ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ ಆಗುವ ಪ್ರಯೋಜನೆಗಳ ಯೋಜನಾವಾರು ಮಾಹಿತಿ.
  10. ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಮಾಡಿರುವ  ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯ ಫೈಲಟ್ ಯೋಜನೆಯ ಮಾಹಿತಿ.
  11. ಜಲಗ್ರಾಮ ಕ್ಯಾಲೆಂಡರ್ ಮಾಡಿಸಿ, ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ರವರ ಜೊತೆಯಲ್ಲಿ  ಶ್ರೀ ಜಿ.ಎಸ್.ಬಸವರಾಜ್‌ರವರು ಸಮಾಲೋಚನೆ ನಡೆಸಿದ ಅಂಶಗಳು.
  12. ಕೇಂದ್ರ ಸರ್ಕಾರದ NWDA-NATIONAL WATER DEVELOPMENT AGENCY ಮುಖ್ಯಸ್ಥರ  ಜೊತೆ ಬಸವರಾಜ್‌ರವರು ನಡೆಸಿದ ಸಭೆ ಮಾಹಿತಿ.
  13. ರಾಜ್ಯದ ಜಲಜೀವನ್ ಮಿಷನ್ ಯೋಜನೆಯ ಮಾಹಿತಿ.
  14. ಈಗಾಗಲೇ ಮಾಡಿರುವ ಪಿಪಿಟಿ ಜೊತೆಗೆ ರಾಜ್ಯದ 3೦ ಜಿಲ್ಲೆಗಳ ಮಠಾಧಿಪತಿಗಳ, ಚುನಾಯಿತ ಜನಪ್ರತಿನಿಧಿಗಳ, ಪರಿಣಿತರ, ಸಂಘಸಂಸ್ಥೆಗಳ, ಹೋರಾಟಗಾರರ ಪ್ರಸ್ತಾವನೆಗಳ ಮಾಹಿತಿ ಸಂಗ್ರಹ.
  15. ಈ ಯೋಜನೆಗೆ ಪೂರಕವಾಗುವ ವಿಶ್ವದ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಗಳ ಮಾಹಿತಿ.
  16. ರಾಜ್ಯದ 3೦ ಜಿಲ್ಲೆಗಳಲ್ಲಿ ಹುಟ್ಟಿ ಪ್ರಸ್ತುತ ಸಿವಿಲ್ ಇಂಜಿನಿಯರ್ ವಿಭಾಗದಲ್ಲಿ ಮುಖ್ಯ ಇಂಜಿನಿಯರ್ ಆಗಿರುವವರು ಮತ್ತು ನಿವೃತ್ತ ಮುಖ್ಯ ಇಂಜಿನಿಯರ್  ಆಗಿರುವವರ ಜಿಲ್ಲಾವಾರು ಪಟ್ಟಿ. 
  17. ರಾಜ್ಯದ 3೦ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಸಮಗ್ರ ನೀರಾವರಿ ಕನಸು ಕಾಣುತ್ತಿರುವ ಯಾವುದೇ ಇಂಜಿನಿಯರ್ ಅಂದರೆ ಜೂನಿಯರ್ ಇಂಜಿನಿಯರ್‌ನಿಂದ ಆರಂಭಿಸಿ ಕಾರ್ಯದರ್ಶಿವರೆಗಿನ ಜಿಲ್ಲಾವಾರು ಪಟ್ಟಿ.
  18. ರಾಜ್ಯಾಧ್ಯಾಂತ ಅಟಲ್ ಭೂಜಲ್ ಮತ್ತು ಜಲಾಮೃತ ಯೋಜನೆಯಡಿಯಲ್ಲಿ ಗ್ರಾಮಪಂಚಾಯಿತಿವಾರು ಮಾಡಿರುವ ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಮಾಹಿತಿ.

 ಜೊತೆಗೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದಿಂದ ರಾಜ್ಯ ಸಮಗ್ರ ನೀರಾವರಿ ಯೋಜನೆಗೆ ಸಂಭಂದಿಸಿದಂತೆ, ವಿವಿಧ ಇಲಾಖೆಗಳಲ್ಲಿನ ವಿವಿಧ ವರಧಿಗಳು ಮತ್ತು ಪ್ರಮುಖ ಆದೇಶಗಳ ಮಾಹಿತಿ ಸಂಗ್ರಹ.

 ದಿನಾಂಕ:30.11.2020 ರ ಕಾಲಮಿತಿ ಗಡುವು ನೀಡಿ, ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಸಮಗ್ರ ನೀರಾವರಿ ವಿವರವಾದ ಯೋಜನಾವರದಿ ತಯಾರಿಸಲು ಇಂದು ನೀಡಿರುವ ಆದೇಶಕ್ಕೆ, ಇಲಾಖೆ ಯಾವ ರೀತಿ ಯೋಜನೆ ರೂಪಿಸಬೇಕು ಎಂಬ ಬಗ್ಗೆ ಕಲ್ಪನಾವರದಿ ತಯಾರಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

ತಾವೂ ಸಲಹೆ ನೀಡಬಹುದು.