22nd December 2024
Share

TUMAKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿಯ ಜಿಐಎಸ್ ಅನಾಲೀಸಿಸ್ ಮಾಡುತ್ತೇವೆ, ನಮಗೆ ಕೆಲಸ ಕೊಡಿಸಿ ಎಂದು ತುಮಕೂರು ತಾಲ್ಲೂಕು ಮೆಳೆಹಳ್ಳಿಯ ಶ್ರೀ ರಕ್ಷಿತ್‌ರವರು ಮತ್ತು ಶ್ರೀ ರಮೇಶ್‌ರವರು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರ  ಮತ್ತು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಬಳಿ ಬಂದು ಮನವಿ ಸಲ್ಲಿಸಿದ್ದಾರೆ.

ಶ್ರೀ ಜಿ.ಎಸ್.ಬಸವರಾಜ್‌ರವರು ಅವರನ್ನು ಕರೆದು ಮಾತನಾಡಿ, ನಾನು ನಿಮ್ಮ ಸಾಮಾರ್ಥ್ಯವನ್ನು ತಿಳಿದು ಕೊಳ್ಳಬೇಕೆಂದರೆ, ನೀವೂ ಇದೂವರೆಗೂ ಮಾಡಿರುವ ಕಲರ್, ಕಲರ್ ಚಿತ್ರಗಳನ್ನು ನಾನು ನೋಡುವುದಿಲ್ಲಾ. ನೋಡಿ ಈಗಾಗಲೇ ಡೂಪ್ ಬಿದ್ದಿರುವುದು ಸಾಕು.

 ತುಮಕೂರು ನಗರದ ಈ ಮೂರು ಕಾಮಗಾರಿಗಳ ಜಿಐಎಸ್ ಅನಾಲೀಸಿಸ್ ಮಾಡಿಕೊಂಡು ಬನ್ನಿ, ನಾನು ಕೇಳಿದ ಮಾಹಿತಿ ಹೇಳಿ, ನಂತರ ನಿಮಗೆ ಕೆಲಸ ಕೊಡುವ ಬಗ್ಗೆ ಯೋಚಿಸುತ್ತೇನೆ, ಎಂದಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

 ಅವರಿಬ್ಬರೂ ಈ ಪ್ರಾಕ್ಟಿಕಲ್ ಸಂದರ್ಶನಕ್ಕೆ ಒಪ್ಪಿದ್ದಾರೆ, ತುಮಕೂರು ಸ್ಮಾರ್ಟ್ ಸಿಟಿ ಎಂ.ಡಿ.ಯವರಾದ ಶ್ರೀ ರಂಗಸ್ವಾಮಿರವರಿಗೆ ಇವರು ಕೇಳುವ ದಾಖಲೆಗಳನ್ನು ಕೊಡಿಸಲು ಸಂಸದರು ಮತ್ತು ಶಾಸಕರು ಇಬ್ಬರೂ ಸೂಚಿಸಿದ್ದಾರೆ. ನೋಡೋಣ ಅವರ ಕಾರ್ಯವೈಖರಿ ಹೇಗಿರುತ್ತದೆ.