9th November 2024
Share
BASAVARAJ BOMMAI, G.S.BASAVARAJ, KUNDARANAHALLI RAMESH

TUMAKURU:SHAKTHIPEETA FOUNDATION   

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-6 ದಿನಾಂಕ: 17.11.2020  

 ರಾಜ್ಯದ ಮಾಜಿ ಮುಖ್ಯ ಮಂತ್ರಿಗಳು ಹಾಗೂ ಕೇಂದ್ರದ ಮಾಜಿ ಸಚಿವರಾದ ದಿ.ಎಸ್.ಆರ್.ಬೊಮ್ಮಾಯಿ ರವರ ಭಾವ ಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ, ರಾಜ್ಯದ ಗ್ರಹ ಸಚಿವರು, ಮಾಜಿ ಜಲಸಂಪನ್ಮೂಲ ಸಚಿವರು ಹಾಗೂ ನೀರಾವರಿ ತಜ್ಞರಾದ ಶ್ರೀ ಬಸವರಾಜ್ ಬೊಮ್ಮಾಯಿರವರೊಂದಿಗೆ ರಾಜ್ಯದ ನದಿ ಜೋಡಣೆ’ ಬಗ್ಗೆ ಸಮಾಲೋಚನೆ ನಡೆಸಲಾಯಿತು.

 ದಿನಾಂಕ: 17.11.2020  ರಂದು ಅವರ ಗೃಹಕಚೇರಿಗೆ ತೆರಳಿದ ಶ್ರೀ ಜಿ.ಎಸ್.ಬಸವರಾಜ್ ರವರು ರಾಜ್ಯದ ನದಿ ಜೋಡಣೆ ಬಗ್ಗೆ ಮಾತು ಆರಂಭಿಸಿದಾಗ ನಾನು ಈಗ ಈ ರಾಜ್ಯದ ಗೃಹ ಸಚಿವರು, ನೀರಾವರಿ ಬಗ್ಗೆ ಮಾತನಾಡಿದರೆ ನಾನು ಏನು ಮಾಡಲಿ, ಈ ವಿಚಾರವನ್ನು ಜಲಶಕ್ತಿ ಸಚಿವರೊಡನೆ ಮಾತನಾಡಿ, ನನ್ನೊಂದಿಗೆ ನನ್ನ ಇಲಾಖೆ ಬಗ್ಗೆ ಮಾತನಾಡಿ ಎಂದು ಹಾಸ್ಯ ಮಾಡಿದರು.

  ಅಷ್ಟೆ ನಯವಾಗಿ ಬಸವರಾಜ್‌ರವರು ನಾನು ಈಗ ರಾಜ್ಯದ ಒಬ್ಬ ನೀರಾವರಿ ತಜ್ಞರೊಡನೆ ಮಾತನಾಡುತ್ತಿರುವುದು ಎಂದಾಗ ಇಬ್ಬರು ನಕ್ಕು ವಿಚಾರಕ್ಕೆ ಬಂದರು. ರಾಜ್ಯದ ರೈತರಿಗೆ ನೀರು ಕೊಡಲೇ ಬೇಕು, ಇಲಾಖೆಗೆ ಬರೇ ಟ್ರಿಬ್ಯುನಲ್ ವಿವಾದಗಳಿಗೆ ಉತ್ತರಕೊಡುವ ಕೆಲಸವೇ ದೊಡ್ಡದಾಗಿದೆ. ದಿನಕ್ಕೊಂದು ವಿವಾದ ಸೃಷ್ಟಿಯಾಗಲಿದೆ. ಎಂಬ ಆತಂಕದ ಬಗ್ಗೆಯೂ ಚರ್ಚಿಸಿದರು.

 ಸಮಗ್ರವಾದ ವರದಿ ಸಿದ್ಧಪಡಿಸಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು   ಆದೇಶ ಮಾಡಿದ್ದಾರೆ, ಪ್ರಕ್ರಿಯೇ ಆರಂಭವಾಗಲಿ, ನಂತರ ಏನೇನು ಮಾಡಬೇಕು ಎಂಬ ಚಿಂತನೆ ಮಾಡೋಣ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಧ್ಯಕರ್ತವ್ಯ ಎಂಬ ಅಭಿಪ್ರಾಯವನ್ನು ಇಬ್ಬರು ನಾಯಕರು ವ್ಯಕ್ತಪಡಿಸಿದರು.