TUMAKURU:SHAKTHIPEETA FOUNDATION
‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’
ಮುಖ್ಯಮಂತ್ರಿಗಳ ಆದೇಶ ದಿನಾಂಕ:09.11.2020 ಇಂದಿಗೆ 9 ದಿವಸ.
ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-7 ದಿನಾಂಕ: 17.11.2020
ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವಾಲಯದ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್ ರವರೊಂದಿಗೆ ’ರಾಜ್ಯದ ನದಿ ಜೋಡಣೆ’ ಮತ್ತು ’ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ದಿನಾಂಕ: 17.11.2020 ರಂದು ಅವರ ಕಚೇರಿಗೆ ತೆರಳಿದ ಶ್ರೀ ಜಿ.ಎಸ್.ಬಸವರಾಜ್‌ರವರು ಶೀಘ್ರವಾಗಿ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಮಾನ್ಯ ಮುಖ್ಯಮಂತ್ರಿಗಳಿಂದ ನಮಗೆ ಆದೇಶದ ಪ್ರತಿ ಬಂದಿದೆ. ಈಗಾಗಲೇ ನಾನು ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯವರಾದ ಶ್ರೀ ಅನಿಲ್‌ಕುಮಾರ್ ರವರಿಗೆ ರವಾನಿಸಿದ್ದೆನೆ ಎಂದು ತಿಳಿಸಿದರು.
ಶ್ರೀ ಅನಿಲ್‌ಕುಮಾರ್‌ರವರಿಗೆ ಮಾತನಾಡಿ ಕೈಗೊಳ್ಳಬೇಕಾದ ವಿಚಾರಗಳ ಬಗ್ಗೆ ಚರ್ಚಿಸಿದರು. ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ರಮೇಶ್‌ರವರು ಈಗ ನಿಮ್ಮ ಬಳಿ ಬರುತ್ತಾರೆ ಮಾತನಾಡಿ ಎಂದು ಸೂಚಿಸಿದರು.