21st November 2024
Share

TUMAKURU:SHAKTHIPEETA FOUNDATION

 ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ನಗರ ಮತ್ತು ಗ್ರಾಮೀಣ HOUSING FOR ALL 2022. ಈ ಯೋಜನೆ ಜಾರಿಗೆ  ತುಮಕೂರು ಜಿಲ್ಲಾ ದಿಶಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಜಿಲ್ಲೆಯ 330 ಗ್ರಾಮಪಂಚಾಯತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ ಗ್ರಾಮವಾರು ನಿವೇಶನ ರಹಿತರು, ವಸತಿ ರಹಿತರು ಪಟ್ಟಿ ಪರಿಶೀಲಿಸಿ, ಪ್ರತಿ ಗ್ರಾಮದಲ್ಲೂ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಅಥವಾ ಭೂ ಸ್ವಾಧೀನ ಮಾಡಿಕೊಳ್ಳುವ ಜಮೀನು ಹುಡುಕಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ.

‘ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ದಿನಾಂಕ:06.09.2020 ರಂದು ಸಭೆ ನಡೆಸಿ ಮುಂದಿನ 100 ದಿವಸಗಳ ಆಂದೋಲನ ಹಮ್ಮಿಕೊಂಡು ವಸತಿ ರಹಿತರಿಗೆ ಸಹಕರಿಸಿ ಎಂದು ಬಹಿರಂಗ ಕರೆ ನೀಡಿದ್ದಾರೆ.’

  ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್‌ಕುಮಾರ್‌ರವರು ಹಲವಾರು ಸಭೆ ನಡೆಸಿ ಜಮೀನು ಹುಡುಕಾಟಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸುಮಾರು ಪತ್ರಗಳನ್ನು ಬರೆದು ಗ್ರಾಮವಾರು ಸರ್ಕಾರಿ ಜಮೀನುಗಳ ಪಟ್ಟಿ ಘೋಷಣೆ ಮಾಡಲು ಸೂಚಿಸಿದ್ದಾರೆ.

 ‘ತುಮಕೂರು ಮಹಾನಗರ ಪಾಲಿಕೆ ಮಾತ್ರ ವಸತಿ ರಹಿತರು ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ಅರ್ಜಿಸಲ್ಲಿಸಿದ್ದ ಪಟ್ಟಿ ಪರಿಶೀಲನೆ ಮಾಡಿ ಸುಮಾರು 19000 ಅರ್ಜಿಗಳಲ್ಲಿ, ಅರ್ಹರು ಕೇವಲ 3000 ಆಸುಪಾಸು ಎಂದು ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು ಬಾಯಿಮಾತಿನಲ್ಲಿ ಹೇಳಿದ್ದಾರೆ. ಇವರಿಗೆ ಸಾಕಾಗುವಷ್ಟು ಸರ್ಕಾರಿ ಜಮೀನನ್ನು ತಾಲ್ಲೂಕು ಆಡಳಿತ ಹುಡುಕಿದೆ ಎಂದು ತಹಶೀಲ್ಧಾರ್‌ರವರಾದ ಶ್ರೀ ಮೋಹನ್‌ರವರು ಬಾಯಿ ಮಾತಲ್ಲಿ ಹೇಳಿದ್ದಾರೆ. ಲಿಖಿತ ವರದಿ ಇನ್ನೂ ಕೈಸೇರಿಲ್ಲ’

 ಇಷ್ಟು ಕೆಲಸ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಸುಮಾರು 9 ಸಭೆಗಳನ್ನು ಮಾಡಿದ್ದಾರೆ. ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ಧಾರ್, ಪಾಲಿಕೆ ಆಯುಕ್ತರು ಎಲ್ಲರೂ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ.

ಉಳಿದ ನಗರ ಸ್ಥಳೀಯ ಸಂಸ್ಥೆ ಮತ್ತು 330  ಗ್ರಾಮಪಂಚಾಯಿತಿವಾರು ಪ್ರತಿಯೊಂದು ಗ್ರಾಮಗಳವಾರು ಮಾಹಿತಿಯನ್ನು ತುಮಕೂರು ಜಿಐಎಸ್‌ನಲ್ಲಿ ಪ್ರಕಟಿಸಿ. ಇಲ್ಲವಾದಲ್ಲಿ ದಿನಾಂಕ:21.11.2020   ರಂದು ನಡೆಯುವ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಯಲಿದೆ. ಎಲ್ಲರೂ ಸಹ ದಾಖಲೆಗಳೊಂದಿಗೆ ಸಭೆಗೆ ಬರಲು ರಾಜ್ಯ ಮಟ್ಟ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.