13th November 2024
Share
CHANNAPPA, KRISHNAMURTHY, SHARANAPPA , N.RANGANATH & KUNDARANAHALLI RAMESH

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ:09.11.2020 ಇಂದಿಗೆ 11 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-9 ದಿನಾಂಕ: 20.11.2020

 ಕೇಂದ್ರ ಸರ್ಕಾರದ NWDA  ಇಂಜಿನಿಯರ್‌ಗಳೊಂದಿಗೆ  NPP- National Perspective Plan,   ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ಯೋಜನೆ ಡಿಪಿಆರ್ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

  ದಿನಾಂಕ: 20.11.2020 ರಂದು ಅವರ ಕಚೇರಿಗೆ ತೆರಳಿ ಇಂಜಿನಿಯರ್‌ಗಳಾದ  ಶ್ರೀ ಚನ್ನಪ್ಪನವರು, ಶ್ರೀ ಕೃಷ್ಣಮೂರ್ತಿಯವರು ಮತ್ತು ಶ್ರೀ ಶರಣಪ್ಪನವರೊಂದಿಗೆ  ಕೇಂದ್ರ ಸರ್ಕಾರದ ನದಿಜೋಡಣೆ ಯೋಜನೆಯಡಿ ರಾಜ್ಯಕ್ಕೆ ಆಗುವ ಅನೂಕೂಲಗಳು ಮತ್ತು ರಾಜ್ಯದ ಯಾವ, ಯಾವ ನದಿಜೋಡಣೆ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಚರ್ಚಿಸಲಾಯಿತು.

  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ವರಧಿ ಆಧಾರಿತ ಯಾವ ಯೋಜನೆಗಳನ್ನು ಸಮೀಕ್ಷೆ ಮಾಡಲಾಗಿದೆ ಅಥವಾ ಮಾಡಲು ಉದ್ದೇಶಿಸಲಾಗಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಯಿತು. 2014 ರಲ್ಲಿಯೇ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಸಮೀಕ್ಷೆ ಕೈಗೊಳ್ಳಲು ನಿರ್ಣಯಮಾಡಲಾಗಿದೆ ಎಂಬ ಶುಭ ಸುದ್ದಿಯೂ ಸಿಕ್ಕಿತು. ಆಗಿನ ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ಬಸವರಾಜ್ ಬೊಮ್ಮಾಯಿಯವರು ವಿಶೇಷ ಆಸಕ್ತಿ ವಹಿಸಿ ಸೇರ್ಪಡೆ ಮಾಡಿದ್ದಾರೆ.

  ಈ ಸಂದರ್ಭದಲ್ಲಿ ಬೆಂಗಳೂರಿನ ಇಐ ಟೆಕ್ನಾಲಜಿಯ ಶ್ರೀ ರಂಗನಾಥ್‌ರವರು ಇದ್ದರು.