21st May 2024
Share
G.S.BASAVARAJ, MP. DC RAKESHKUMAR, CEO SHUBHAKALYAN & SP VAMSHIKRISHNA

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020  ಇಂದಿಗೆ 14  ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-13  ದಿನಾಂಕ: 23.11.2020

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಮಹತ್ತರವಾದ ನಿರ್ಣಯ ಕೈಗೊಂಡಿದೆ. ತಮಕೂರು ಜಿಲ್ಲೆಯ ಸಮಗ್ರ ನೀರಾವರಿ ಮತ್ತು ರಾಜ್ಯದ 38608 ಕೆರೆ-ಕಟ್ಟೆಗಳಿಗೂ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಡಿ ನೀರು ತುಂಬಿಸಲು ಯೋಜನೆ ರೂಪಿಸಿ, ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಿಸಿದೆ.

ಮಾನ್ಯ ಮುಖ್ಯ ಮಂತ್ರಿಯವರು ಈಗಾಗಲೇ, ಈ ನಿರ್ಣಯದ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಮೂರು ಪತ್ರಗಳನ್ನು ಬರೆಯುವ ಮೂಲಕ ದಿಶಾ ಸಮಿತಿ ನಿರ್ಣಯಕ್ಕೆ ಗೌರವ ನೀಡಿದ್ದಾರೆ. 2020-2021 ನೇ ಸಾಲಿನ ಆಯವ್ಯಯದಲ್ಲಿಯೂ ಪೂರಕವಾದ ಅಂಶಗಳನ್ನು ಮಂಡಿಸಿದ್ದಾರೆ.

ಜೊತೆಗೆ ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡಲು  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶವನ್ನು ಮಾಡಿದ್ದಾರೆ.

‘ಶ್ರೀ ಜಿ.ಎಸ್.ಬಸವರಾಜ್‌ರವರು ತಮ್ಮ ಮೊದಲು ದಿಶಾ ಸಮಿತಿ ಸಭೆಯಲ್ಲಿ(21.09.2019) ಮಹತ್ತರವಾದ ವಿಚಾರಗಳಿಗೆ ತುಮಕೂರು ಜಿಲ್ಲೆಯ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳ ಸಭೆ ಕರೆದು ಸಲಹೆ ಪಡೆಯಲು ನಿರ್ಣಯ ಮಾಡಿಸಿದ್ದಾರೆ. ಜಿಲ್ಲಾಧಿಕಾರಿಯವರಿಗೆ ಅಗತ್ಯ ಕ್ರಮವಹಿಸಲು ಅಧಿಕಾರ ನೀಡಲಾಗಿದೆ’

ಬಹುಷಃ ದೇಶದ ಯಾವುದೇ ಜಿಲ್ಲಾ ಮಟ್ಟದ ದಿಶಾ ಸಮಿತಿ ಇಂಥಹ ನಿರ್ಣಯ ಮಾಡಿರಲಾರದು. ಪ್ರಸ್ತುತ ಈ ಕೆಳಕಂಡ ಯೋಜನೆಗಳ ಬಗ್ಗೆ ಚರ್ಚಿಸಲು ಈ ಸಭೆಯ ಅವಶ್ಯಕತೆಯಿದೆ. ತಾವೂ ಅಥವಾ ದಿಶಾ ಸದಸ್ಯ ಕಾಯದರ್ಶಿರವರು   ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ಸಭೆ ಕರೆಯುವುದು ಅನಿವಾರ್ಯವೂ ಆಗಿದೆ. ಅಗತ್ಯ ಬಿದ್ದಲ್ಲಿ ಮಾನ್ಯ ಮುಖ್ಯ ಕಾರ್ಯದರ್ಶಿರವರ ಅನುಮತಿ ಪಡೆಯವುದು ಸೂಕ್ತವೆನಿಸುತ್ತಿದೆ. ಇದೊಂದು ಇತಿಹಾಸ ನಿರ್ಮಿಸಲಿದೆ. ತಮಗೂ ವಿಶೇಷ ಅನುಭವ ದೊರೆಯಲಿದೆ. ದೇಶಕ್ಕೆ ಮಾದರಿಯೂ ಆಗಲಿದೆ.

  1. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿ, ತುಮಕೂರು ಜಿಲ್ಲೆಗೆ ಸಿದ್ಧಪಡಿಸಿರುವ ಯೋಜನೆ – ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್‌ನ ಶ್ರೀ ಸತ್ಯಾನಂದ್‌ರವರು ಪಿಪಿಟಿ ಪ್ರದರ್ಶನ ಮಾಡಲಿದ್ದಾರೆ.
  2. ಕುಮಾರಧಾರ ಯೋಜನೆ ಪ್ರಸ್ತಾವನೆ – ಬೆಂಗಳೂರಿನ ಪ್ರೀತಿಕ್ಯಾಡ್‌ನ ಶ್ರೀ ವೇದಾನಂದಮೂರ್ತಿಯವರು ಪಿಪಿಟಿ ಪ್ರದರ್ಶನ ಮಾಡಲಿದ್ದಾರೆ.
  3. ರಾಜ್ಯದ ನದಿ ಜೋಡಣೆ ಯೋಜನೆ ಪ್ರಸ್ತಾವನೆ –  ಬೆಂಗಳೂರಿನ ಇಐ ಟೆಕ್ನಾಲಜಿಯ ಶ್ರೀ ಎನ್.ರಂಗನಾಥ್‌ರವರು ಪಿಪಿಟಿ ಪ್ರದರ್ಶನ ಮಾಡಲಿದ್ದಾರೆ.
  4. ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಪ್ರಸ್ತಾವನೆ- ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರದ ತಾಂತ್ರಿಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ಪಿಪಿಟಿ ಪ್ರದರ್ಶನ ಮಾಡಲಿದ್ದಾರೆ.
  5. ತುಮಕೂರು ಜಿಲ್ಲೆಯ ಜಲಜೀವನ್ ಮಿಷನ್ ಯೋಜನೆ ಪ್ರಸ್ತಾವನೆ- ಶ್ರೀ ಚನ್ನವೀರಸ್ವಾಮಿರವರು ಪಿಪಿಟಿ ಪ್ರದರ್ಶನ ಮಾಡಬೇಕಿದೆ.
  6. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಿದ್ಧಪಡಿಸಿರುವ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್- ಈ ಸಮಿತಿಗೆ ತಾವೇ ಅಧ್ಯಕ್ಷರು.
  7. ಶರಾವತಿ ಯೋಜನೆ – ಶ್ರೀ ಡಿ.ಎಸ್.ಹರೀಶ್‌ರವರು ಪಿಪಿಟಿ ಪ್ರದರ್ಶನ ಮಾಡಲಿದ್ದಾರೆ.
  8. ತುಮಕೂರು ಜಿಲ್ಲೆಯ ಕರಾಬು ಹಳ್ಳ ಅಭಿವೃದ್ಧಿ ಆಂದೋಲನ _ ಶ್ರೀ ಹೆಚ್.ಎನ್.ಮಲ್ಲೇಶ್‌ರವರು ಪಿಪಿಟಿ ಪ್ರದರ್ಶನ ಮಾಡಲಿದ್ದಾರೆ.
  9. ಜಲಗ್ರಾಮ – ಕುಂದರನಹಳ್ಳಿ ರಮೇಶ್ ಪಿಪಿಟಿ ಪ್ರದರ್ಶನ ಮಾಡಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ನಿರ್ಣಯ ಘೋಷಣೆ ಮಾಡುವುದು ಉತ್ತಮ ಎಂಬ ಅಭಿಪ್ರಾಯ ನನ್ನದು.