12th September 2024
Share

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020  ಇಂದಿಗೆ 14  ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-11  ದಿನಾಂಕ: 23.11.2020

ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡಲು  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ಮಾಡಿರುವ ಹಿನ್ನೆಲೆಯಲ್ಲಿ  ಕಡತ ಅನುಸರಣೆ ಮಾಡಿ, ರಾಜ್ಯದ ಜಲಸಂಪನ್ಮೂಲ ಸಚಿವಾಲಯದ ಶ್ರೀ ಮೋಹನ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು. 

 ದಿನಾಂಕ:20.11.2020  ರಂದು ವಿಕಾಸ ಸೌಧದಲ್ಲಿ ಭೇಟಿ ಮಾಡಿ, ಮಾನ್ಯ ಮುಖ್ಯ ಮಂತ್ರಿಯವರು ಬರೆದ ಪತ್ರಕ್ಕೆ ಅವರು ಈಗಾಗಲೇ ಟಿಪ್ಪಣೆ ಮಾಡಿಸಲ್ಲಿಸಿರುವ  ಬಗ್ಗೆ ಅವರ ಕಚೇರಿಯ ಶ್ರೀ ಯೋಗಿಶ್ ರವರು ತಿಳಿಸಿದರು. ಕಡತ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರ ಅಂಗಳದಲ್ಲಿದೆ.

‘ಶ್ರೀ ಮೋಹನ್ ರವರೊಂದಿಗೆ ಸಮಾಲೋಚನೆ ಮಾಡಿ ಕರ್ನಾಟಕ ರಾಜ್ಯದಲ್ಲಿ ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ಕಾರ್ಯದರ್ಶಿವರು ಮತ್ತು ನಿವೃತ್ತ ಮುಖ್ಯ ಇಂಜಿನಿಯರ್‌ರವರ  ಪಟ್ಟಿ ಮತ್ತು ದೂರವಾಣಿ ಸಂಖ್ಯೆಗಳನ್ನು ನೀಡಲು ಮನವಿ ಮಾಡಲಾಗಿದೆ. ಒಂದೆರಡು ದಿವಸದಲ್ಲಿ ಪಟ್ಟಿನೀಡುವ ಭರವಸೆ ನೀಡಿದ್ದಾರೆ’