TUMAKURU:SHAKTHIPEETA FOUNDATION
‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’
ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 14 ದಿವಸ.
ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-12 ದಿನಾಂಕ: 23.11.2020
ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ’ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರವರೊಂದಿಗೆ ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ ಸಿದ್ಧಪಡಿಸಿರುವ ಪ್ರಸ್ತಾವನೆಗಳ ಬಗ್ಗೆ ಸಮಾಲೋಚನೆ ನಡೆಸಲು ದಿನಾಂಕ ನಿಗದಿ ಪಡಿಸಲು ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪೆಸ್ವಾಮಿರವರೊಂದಿಗೆ ಚರ್ಚಿಸಲಾಯಿತು.
ದಿನಾಂಕ:21.11.2020 ರಂದು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಭೆಯಲ್ಲಿ ಚರ್ಚಿಸಿ, ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ತಯಾರಿಸಿರುವ ತಾಜಾ ಮಾಹಿತಿ, ಕುಮಾರಧಾರ ಯೋಜನೆ ಪ್ರಸ್ತಾವನೆ ಮತ್ತು ಸುಮಾರು 484 ಟಿಎಂಸಿ ಅಡಿ ನೀರಿನ ಪ್ರಸ್ತಾವನೆಗಳ ಪಿಪಿಟಿ ಗಳನ್ನು ಪ್ರದರ್ಶನ ಮಾಡಿ, ಅವರ ಸಲಹೆ, ಮಾರ್ಗದರ್ಶನ ಪಡೆಯುವುದು.
ನಂತರ ದೇಶದ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಹಾಗೂ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆಸಲು ಶ್ರಮಿಸುವುದಾಗಿ ತಿಪ್ಪೆಸ್ವಾಮಿಯವರು ತಿಳಿಸಿದರು.
ದೊಡ್ಡಗೌಡರು ನೀರಾವರಿ ತಜ್ಞರು, ತುಮಕೂರು ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದವರು, ರಾಜ್ಯದ ರೈತರಿಗೆ ಸಾಮಾಜಿಕ ನ್ಯಾಯದಡಿ ನದಿ ನೀರು ಹಂಚಿಕೆ ಮಾಡಲು ಅವರ ಸಲಹೆ ಮುಖ್ಯ ಎಂಬ ವಿಚಾರ ವಿನಿಮಯ ಮಾಡಲಾಯಿತು. ಶೀಘ್ರದಲ್ಲಿ ಅವರ ಭೇಟಿಗೆ ದಿನಾಂಕ ನಿಗದಿಗೊಳಿಸುವ ಭರವಸೆ ನೀಡಿದ್ದಾರೆ.