22nd December 2024
Share
G.S.BASAVARAJ . RAJESHGOWDA, KUNDARANAHALLI RAMESH & RAJASHEKAR

TUMAKURU:SHAKTHIPEETA FOUNDATION

 ಮಾಜಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಕನಸಿನಂತೆ ಕರ್ನಾಟಕ ಹೆರಿಟೇಜ್ ಹಬ್ ಆರಂಭಿಸಬೇಕು ಎಂಬ ಪರಿಕಲ್ಪನೆಯಿಂದ ಆಗಿನ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್  ಅಧ್ಯಕ್ಷತೆಯಲ್ಲಿ ದಿನಾಂಕ:21.06.2016  ರಂದು ಕರ್ನಾಟಕ ಹೆರಿಟೇಜ್ ಹಬ್   ಎಂಬ ಸೊಸೈಟಿಯನ್ನು ಹುಟ್ಟು ಹಾಕಿದರು.

 ಯೋಜನೆಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾರನಗೆರೆ ಮತ್ತು ಉಜ್ಜನಕುಂಟೆ ಗ್ರಾಮಗಳಲ್ಲಿ 811 ಎಕರೆ 14 ಗುಂಟೆ ಜಮೀನು ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮದಲ್ಲಿ  108 ಎಕರೆ 06 ಗುಂಟೆ ಜಮೀನು ಸೇರಿದಂತೆ 919 ಎಕರೆ 20 ಗುಂಟೆ ಜಮೀನು ನಿಗದಿ ಮಾಡಲಾಗಿತ್ತು.

 ಈ ಯೋಜನೆಗೆ ಶಿರಾ ತಾಲ್ಲೂಕಿನ ಶಾಸಕರಾದ ಶ್ರೀ ರಾಜೇಶ್‌ಗೌಡರವರು ಮತ್ತು ಹಿರಿಯೂರು ತಾಲ್ಲೂಕಿನ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್‌ರವರು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಾರಾಯಣಸ್ವಾಮಿಯವರು  ಒಗ್ಗಟ್ಟಾಗಿ ಶ್ರಮಿಸುವುದು ಅಗತ್ಯವಾಗಿದೆ. ಕರ್ನಾಟಕ ಹೆರಿಟೆಜ್‌ಹಬ್‌ಗೆ ಮಂಗಳೂರಿನ ಪಿಲಿಕುಳ ಮಾದರಿಯಲ್ಲಿ ಒಂದು ನಿಗಮ ಮಾಡುವುದು ಸೂಕ್ತವಾಗಿದೆ.

 ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಶ್ರೀ ರಾಜೇಶ್ ಗೌಡರವರು ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಕಾವೇರಿ ನೀರಾವರಿ ನಿಗಮದಲ್ಲಿ ದಿನಾಂಕ:23.11.2020  ರಂದು ಭೇಟಿಯಾಗಿದ್ದರು.  ಈ ಸಂದರ್ಭದಲ್ಲಿ   ಹೆರಿಟೇಜ್ ಹಬ್’ ನಿರ್ಮಾಣದ ಬಗ್ಗೆ ವಿವಿರವಾದ ಚರ್ಚೆ ನಡೆಯಿತು, ನಂತರ ಪ್ರತಿಕ್ರಿಯಿಸಿದ   ನೂತನ ಶಾಸಕರು ಯೋಜನೆಯ ಅನುಷ್ಠಾನಕ್ಕೆ ಶೀಘ್ರವಾಗಿ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.

  ಈ ಜಮೀನು ಬೆಂಗಳೂರು- ಮುಂಬೈ ಎಕನಾಮಿಕ್ ಕಾರಿಡಾರ್ ಹಾಗೂ ಚನ್ಯೈ – ಬೆಂಗಳೂರು – ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ನಲ್ಲಿ ಬರುವುದರಿಂದ ಹಾಗೂ ವಾಣಿವಿಲಾಸ ಡ್ಯಾಂ ವ್ಯಾಪ್ತಿಯನ್ನು ಈಗಾಗಲೇ ಪ್ರವಾಸೋಧ್ಯೋಮ ಇಲಾಖೆ ಗುರುತಿಸಿರುವುದರಿಂದ ಇದೊಂದು ಉತ್ತಮ ಯೋಜನೆಯಾಗಲಿದೆ. 

 ಶಾಸಕರು ಮನಸ್ಸು ಮಾಡಿದರೆ, ಬರುವ ಎಲ್ಲಾ ಅಡೆ-ತಡೆಗಳನ್ನು ನಿವಾರಿಸಿಕೊಂಡು ಮುನ್ನಗ್ಗಿದರೆ, ಇಡೀ ದೇಶವೇ ಶಿರಾದತ್ತ ತಿರುಗಿ ನೋಡುವಂತಹ ಯೋಜನೆ ಇದಾಗಲಿದೆ. ಶಿರಾ ವಿಧಾನಸಭೆಯ ಪ್ರತಿಯೊಂದು ಗ್ರಾಮದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅಥವಾ ಉದ್ಯೋಗ ಸೃಷ್ಠಿಸ ಬಹುದಾಗಿದೆ.