29th March 2024
Share

TUMAKURU:SHAKTHIPEETA FOUNDATION

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 19 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-15 ದಿನಾಂಕ: 28.11.2020

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ ರಾಜ್ಯ ಜಲಸಂಪನ್ಮೂಲ ಕಾರ್ಯದರ್ಶಿವರಾದ ಶ್ರೀ ಅನಿಲ್ ಕುಮಾರ್ ರವರ ಬಳಿ ಶ್ರೀ ಜಿ.ಎಸ್.ಬಸವರಾಜ್‌ರವರು ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.

  ದಿನಾಂಕ:27.11.2020 ರಂದು ಅವರ ಕಚೇರಿಗೆ ತೆರಳಿ ಚರ್ಚಿಸಿದಾಗ ದಿನಾಂಕ:05.12.2020 ರಂದು ಈ ಸಂಬಂಧ ಮಾನ್ಯ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ಸಭೆ ಕರೆದಿರುವುದಾಗಿ ತಿಳಿಸಿದ್ದಾರೆ.

 ರಾಜ್ಯದ ನಾಲ್ಕು ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಮುಖ್ಯ ಇಂಜಿನಿಯರ್ ಹಾಗೂ ಅಂತರ ರಾಜ್ಯ ಮುಖ್ಯ ಇಂಜಿನಿಯರ್ ಸೇರಿ 6 ಜನರಿಗೆ ಸಭೆಗೆ ಬರಲು ಎಂ.ಎಸ್.ಮೋಹನ್‌ರವರು ಸೂಚಿಸಿದ್ದಾರೆ.

 ತಮ್ಮ ವ್ಯಾಪ್ತಿಗೆ ಬರುವ ರಾಜ್ಯದ ನದಿ ಜೋಡಣೆ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗುವುದು ಒಳ್ಳೆಯ ಬೆಳವಣಿಗೆ. ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲೂ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಿಂದ ನದಿ ನೀರು ತುಂಬಿಸಲು ಎಷ್ಟು ಪ್ರಮಾಣದ ನದಿ ನೀರಿನ ಅವಶ್ಯಕತೆಯಿದೆ ಎಂಬ ಮಾಹಿತಿ ಸಂಗ್ರಹವೂ ಅಗತ್ಯ. ಬಹುಷಃ ಈ ಮಾಹಿತಿಯನ್ನು ತುಮಕೂರು ಜಿಲ್ಲಾ ದಿಶಾ ಸಮತಿ ಮಾತ್ರ ಕರಾರುವಕ್ಕಾಗಿ ಮಾಡಿಸಿದೆ. ಉಳಿದವರು ಏನು ಮಾಡಿದ್ದಾರೆ ಗೊತ್ತಿಲ್ಲ.

 ಉದ್ದೇಶಿತ ಕೇಂದ್ರದ ನದಿ ಜೋಡಣೆಯಿಂದ ಯಾವ ಭಾಗಕ್ಕೆ ಅನೂಕೂಲ ಪಡೆಯ ಬಹುದು, ನಮ್ಮ ರಾಜ್ಯದಲ್ಲಿಯೇ ಹುಟ್ಟಿ ನಮ್ಮ ರಾಜ್ಯದಲ್ಲಿಯೇ ಹರಿದು ಸಮುದ್ರ ಸೇರುವ ನದಿಗಳ ನೀರಿನಿಂದ ಯಾವ ಭಾಗಕ್ಕೆ ಹೇಗೆ ಪಡೆಯಬಹುದು ಎಂಬ ಕಲ್ಪನಾ ವರದಿಯೊಂದಿಗೆ ಸಭೆಗೆ ಹಾಜರಾಗುವುದು ಅಗತ್ಯ.

ಈಗ ಯಾವ ಜಿಲ್ಲೆಗೆ ಯಾವ, ಯಾವ ನದಿಗಳಿಂದ ಎಷ್ಟೆಷ್ಟು ಟಿಎಂಸಿ ಅಡಿ ನೀರು ಬಳಸಲಾಗುತ್ತಿದೆ. ಬಳಸಲು ಯೋಜನೆ ರೂಪಿಸಲಾಗಿದೆ, ಪ್ರಸ್ತುತ  ಎಷ್ಟೆಷ್ಟು ಟಿಎಂಸಿ ಅಡಿ ನೀರು ಅಗತ್ಯವಾಗಿದೆ ಎಂಬ ಮಾಹಿತಿಯು ಅಗತ್ಯವಾಗಿದೆ.

ಯಾವ ನಿಗಮ, ಯಾವ ಯೋಜನೆ ಬಗ್ಗೆ ಡಿಪಿಆರ್ ಮಾಡಬಹುದು ಅಥವಾ ಒಂದೇ ನಿಗಮ ಅಥವಾ ಸಂಸ್ಥೆ ವತಿಯಿಂದ ಡಿಪಿಆರ್ ಮಾಡಬಹುದೇ? ಅಥವಾ ಕೇಂದ್ರ ಸರ್ಕಾರಕ್ಕೆ ಡಿಪಿಆರ್ ಮಾಡಲು ವಹಿಸುವ ಬಗ್ಗೆಯೂ ಉತ್ತಮ ಸಲಹೆ ನೀಡುವುದು ಸೂಕ್ತವಾಗಿದೆ.

‘ಯಾರು, ಯಾರು ಯಾವ ರೀತಿ ಕಲ್ಪನಾವರದಿ ಸಿದ್ಧಪಡಿಸಿ ಸಭೆಗೆ ನೀಡುತ್ತಾರೋ? ಬರಿ ಕೈಯಲ್ಲಿ ಸಭೆಗೆ ಹಾಜರಾಗುತ್ತಾರೋ ಕಾದು ನೋಡೋಣ?’