22nd December 2024
Share
RAJIVSULOCHANA, SATHYANAND, CHIDANAND & KUNDARANAHALLI RAMESH

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

PM FME SCHEME

 ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಒಂದು ವಿನೂತನ ಯೋಜನೆ ಜಾರಿ. ತುಮಕೂರು ಜಿಲ್ಲೆಗೆ ತೆಂಗು ಉತ್ಪನ್ನ ಆಯ್ಕೆ, ತೆಂಗಿನ ಕಾಯಿ, ನೀರಾ, ತೆಂಗಿನ ನಾರು, ತೆಂಗಿನ ಮರ ಹೀಗೆ ತೆಂಗಿನ ಯಾವುದೇ ಉತ್ಪನ್ನಗಳನ್ನು ಮಾಡಲು ಹತ್ತು ಲಕ್ಷದಿಂದ ಆರಂಬಿಸಿ, ಉದ್ದಿಮೆದಾರನ ಕನಸಿಗೆ ತಕ್ಕಯೋಜನೆಗೆ ಸಾಲ ನೀಡಲೇ ಬೇಕು.

 ಈ ಯೋಜನೆಯಡಿಯಲ್ಲಿ ಶೇಕಡ 35 ರಷ್ಟು ಸಹಾಯಧನ, ಫಲಾನುಭವಿ ಶೇ 10 ರಷ್ಟು ಹಾಕಬೇಕು. ಉಳಿದಿದ್ದು ಬ್ಯಾಂಕುಗಳು ಸಾಲ ನೀಡಲಿವೆ. ವ್ಯಕ್ತಿ, ಸಂಘಸಂಸ್ಥೆ, ಎಸ್.ಹೆಚ್.ಜಿ. ಎಸ್.ಪಿ.ವಿ. ಹೀಗೇ  ಯಾವುದೇ ಮೂಲಕ ಹೊಸ ಕೈಗಾರಿಕೆ ಆರಂಭಿಸ ಬಹುದು.

 ಹಾಲಿ ಇರುವ ತೆಂಗಿನ ಕೈಗಾರಿಕೆಗಳ ಪುನಶ್ಛೇತನ ಮಾಡಲೂ ಬಹುದು. ಕೋಕೋನಟ್ ಸ್ಪೆಷಲ್ ಎಕನಾಮಿಕ್ ನಿಂದ ಆರಂಬಿಸಿ, ತೆಂಗು ಮೆಗಾ ಪಾರ್ಕ್, ಕ್ಲಸ್ಟರ್, ಉದ್ದಿಮೆ ಹೀಗೆ ಯಾವುದೇ ಗಾತ್ರದಲ್ಲಿ ಕೈಗಾರಿಕೆ ಆರಂಬಿಸಲು ಮನೆ ಬಾಗಿಲಿಗೆ ಎಲ್ಲಾ ಸೌಲಭ್ಯ.

‘ಕಲ್ಪತರು ನಾಡಿನಲ್ಲಿ ತೆಂಗಿಗೆ ಒಂದು ಬ್ರ್ಯಾಂಡ್ ಮಾಡಿ, ಫಾರ್‌ವಾರ್ಡ್ & ಬ್ಯಾಕ್‌ವಾರ್ಡ್ ಯೋಜನೆಗೂ ಅವಕಾಶ. ಶಕ್ತಿಗೆ ತಕ್ಕ ಯೋಜನೆ ರೂಪಿಸ ಬಹುದು. ಜಿಲ್ಲೆಯ ಯಾವುದೇ ಮೂಲೆಯ ಜನ ತುಮಕೂರು ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಒಂದು ಯೋಜನಾವರದಿಯೊಂದಿಗೆ ಅರ್ಜಿಹಾಕಿ’

ಈ ಯೋಜನೆಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿವದರಿಗೆ ಬ್ಯಾಂಕ್ ಸಾಲ ನೀಡಲೇ ಬೇಕು, ಯೋಜನಾವರದಿ ತಯಾರಿಸಲು ಕೃಷಿ ಇಲಾಖೆ ಇಬ್ಬರನ್ನು ಆಯ್ಕೆ ಮಾಡಲಿದೆ. ಅವರು ಸುಮಾರು ೧೫೦ ಕ್ಕೂ ಹೆಚ್ಚು ಉತ್ಪನ್ನಗಳ ಕೈಗಾರಿಕೆಗೆ ಯೋಜನಾವರದಿ ತಯಾರಿಸುವ ಕೆಲಸ ಆರಂಬಿಸಲಿದ್ದಾರೆ.  ಯೋಜನೆ ಆಯ್ಕೆ ನಿಮ್ಮದೆ.

‘ಪೂಜಾರಿ ಸಾಲ ಎಂದು ಸಾಲ ತೆಗೆದುಕೊಂಡು ಬೇರೆ ಉದ್ದೇಶಕ್ಕೆ ಹಣ ಬಳಸದೇ, ಯೋಜನೆ ಆರಂಭಿಸುವವರಿಗೆ ಸುವರ್ಣ ಅವಕಾಶ, ಅದು ಶೇ 35 ರಷ್ಟು ಸಹಾಯಧನ, ಕಾಮನ್ ಸ್ಪೆಷಲಿಟಿಗಾಗಿ ಕ್ಲಸ್ಟರ್ ಸ್ಥಾಪಿಸಲು ಕೇಂದ್ರದಿಂದ ಶೇ 90 ರಷ್ಟು ಅನುದಾನ ದೊರೆಯಲಿದೆಯಂತೆ.’

 ಪರಿಣಿತರ ಒಂದು ವಿಷನ್ ಗ್ರೂಪ್ ರಚಸಿ, ಯೋಜನೆ ಬಗ್ಗೆ ವ್ಯಾಪಕ ಆಂದೋಲನ ಕೈಗೊಳ್ಳಲು ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಚಿಂತನೆ ನಡೆಸಿದ್ದಾರೆ. ಅವರು ಸಹ ಕೋಕೊನೆಟ್ ಡೆವಲಪ್‌ಮೆಂಟ್ ಬೋರ್ಡ್ ಸದಸ್ಯರು ಆಗಿದ್ದಾರೆ.

ತುಮಕೂರು ಜಿಲ್ಲೆಯ ಸಿರಾದ ಶ್ರೀ ಮಂಜುನಾಥ್‌ರವರು ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿದ್ದಾರೆ, ನಾರಿನ ನಿಗಮ ಎಂದರೆ ಬರೀ ನಾರಿನ ಯೋಜನೆಯಲ್ಲ, ತೆಂಗಿಗೂ ಅಂದೇ ಬೈಲಾದಲ್ಲಿ ಯೋಜನೆ ರೂಪಿಸಿದ್ದಾರೆ.

ರೈತರು ಮತ್ತು ನಿರುದ್ಯೋಗಿಗಳ  ತಾಕತ್ತು ಯಾವ ರೀತಿ ಬೇಕಾದರೂ ಉದ್ದಿಮೆದಾರರಾಗ ಬಹುದು. ಈ ಸಂಬಂದ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರ  ಜೊತೆಯಲ್ಲಿ ಒಂದು ಸಮಾಲೋಚನೆ ಸಭೆಯನ್ನು ಅವರ ಕಚೇರಿಯಲ್ಲಿ ದಿನಾಂಕ:01.12.2020  ರಂದು ನಡೆಸಲಾಯಿತು.

ಶ್ರೀ ಚಿದಾನಂದ್, ಶ್ರೀ ಸತ್ಯಾನಂದ್, ಶ್ರೀ ಪ್ರಮೋದ್, ಶ್ರೀ ರೂಪೇಶ್ ಜೊತೆಯಲ್ಲಿ ಇದ್ದರು.