19th May 2024
Share
G.S.BASAVARAJ. T.R.RAGHOTTAMARAO. AJAY & KUNDARNAHALLI RAMESH

TUMAKURU: SHAKTHIPEETA FOUNDATION

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ದಿನಾಂಕ:10.12.2020 ರಂದು ನವದೆಹಲಿಯಲ್ಲಿ ನೂತನ ಸಂಸತ್ ಭವನದ ಶಂಕುಸ್ಥಾಪನೆ ಮಾಡುವಾಗ ತುಮಕೂರಿನ ಎನ್.ಐ.ಸಿಯಲ್ಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ಕಾರ್ಯಕ್ರಮ ವೀಕ್ಷಣೆ ಮಾಡಿದರು.

ಮೋದಿಜಿಯವರು ಯಾವುದೇ ಕಾರಣದಿಂದಲೂ ವಿಳಂಭ ಮಾಡದೆ 2022 ರ ನಿಗದಿತ ಸಮಯದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಸುಮಾರು 65000 ಚದುರ ಮೀಟರ್ ಅಂದರೆ 16 ಎಕರೆ 25 ಗುಂಟೆ ಜಮೀನಿನನಲ್ಲಿ ನಿರ್ಮಾಣವಾಗುವ ಸಂಸತ್ ಭವನದ ಕಟ್ಟಡ ಐತಿಹಾಸಿಕ ಯೋಜನೆಯಾಗಲಿದೆ.

ಹಳೆಯ ಮತ್ತು ಹೊಸ ಸಂಸತ್ ಭವನಗಳೆರಡಲ್ಲೂ ಭಾಗಿಯಾಗುವ ಅದೃಷ್ಟ ನನಗೂ ದೊರೆಯಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೋದಿಯವರು ಬಸವಣ್ಣವರ ಅನುಭವ ಮಂಟಪದ ಬಗ್ಗೆ ಕನ್ನಡದಲ್ಲಿ ಮಾತನಾಡಿದಾಗ ಸಂಸದರು ಚಪ್ಪಾಳೆ ಹೊಡೆಯುವ ಮೂಲಕ ಖುಷಿ ಪಟ್ಟರು.

ಈ ಸಂದರ್ಭದಲ್ಲಿ ದಿಶಾ ಸಮಿತಿ ಸದಸ್ಯರುಗಳಾದ ಕುಂದರನಹಳ್ಳಿ ರಮೇಶ್, ಟಿ.ಆರ್.ರಘೋತ್ತಮರಾವ್, ರಕ್ಷಿತ್ ಮತ್ತು ಎನ್.ಐ.ಸಿಯ ಅಧಿಕಾರಿ ಅಜಯ್ ರವರು ಇದ್ದರು.