22nd December 2024
Share

TUMAKURU:SHAKTHIPEETA FOUNDATION

ಗುಬ್ಬಿ  ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ.ಎಸ್.ಸುರೇಶ್‌ರವರು  ಕಾಲೇಜಿನ ಭೋಧಕವರ್ಗ, ನೌಕರ ವರ್ಗ ಮತ್ತು ವಿದ್ಯಾರ್ಥಿಗಳು ದಿನಾಂಕ: 19.01.2016   ರಂದು ಕುಂದರನಹಳ್ಳಿಯಿಂದ ಆರಂಭಿಸಿ 11 ಗ್ರಾಮಗಳಲ್ಲಿ ನಿರುದ್ಯೋಗಿಗಳ ಸರ್ವೇ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಅಂದು ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಈಗಿನ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಮೀಕ್ಷಾ ಯೋಜನೆಗೆ ಚಾಲನೆ ನೀಡಿದ್ದು ಇತಿಹಾಸ. ಈಗ ಇವರಿಬ್ಬರಿಗೂ ಭಗವಂತ ಅಧಿಕಾರ ನೀಡಿದ್ದಾರೆ. ಮಾಡು ಇಲ್ಲವೇ ಮಡಿ ಎಂಬ ರೀತಿ ಶ್ರಮ ಹಾಕುವುದು ಇವರ ಕರ್ತವ್ಯವವೂ ಆಗಿದೆ.

 ಮುಂದಿನ ತಿಂಗಳು ನಡೆಯುವ ಲೋಕಸಭಾ ಅಧಿವೇಶನದ ವೇಳೆ ದೆಹಲಿಯಲ್ಲಿ ಕ್ಯಾಂಪ್ ಮಾಡಿ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಸೇರಿದಂತೆ 40 ಜನರ ಬಳಿ ಹೋಗಿ, ಚರ್ಚಿಸಿ ಲೋಕಸಭೆಯಲ್ಲಿ ಹಾಗೂ ರಾಜ್ಯ ಸಭೆಯಲ್ಲಿ ಚರ್ಚಿಸುವುದು ಹಾಗೂ ಪ್ರಧಾನಿ ಬಳಿ ನಿಯೋಗ ಹೋಗಲು ಚಿಂತನೆ ನಡೆಸಲಾಗಿದೆ.

  ದಿನಾಂಕ:21.11.2020 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಕೇಂದ್ರ ಸರ್ಕಾರಕ್ಕೆ ವರದಿ ನೀಡುವ ಸಂಬಂದ ಚರ್ಚೆ ನಡೆಸಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ತುಮಕೂರು ಇವರ ವತಿಯಿಂದ ಸಮೀಕ್ಷಾ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. 

 ಇದೂವರೆಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣೆ ಮಾಡಿಸಿಲ್ಲವೋ, ಅಂಥವರು  ನೋಂದಣೆಮಾಡಿಕೊಳ್ಳುವುದು ಅಗತ್ಯವಾಗಿದೆ. ಉದ್ಯೋಗಾಧಿಕಾರಿಯವರು ವರದಿಯನ್ನು ದಿನಾಂಕ:09.12.2020 ರೊಳಗೆ ಸಲ್ಲಿಸಲು ಸಮಾಲೋಚನೆ ನಡೆಸಲಾಗಿದೆ.

  ಹೆಚ್.ಎ.ಎಲ್. ನಮ್ಗೂ ಕೆಲಸ…  ಕೊಡಿ

     ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಕೇಂದ್ರ ಸರ್ಕಾರದ ಹೆಚ್.ಎ.ಎಲ್. ಲಘು ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಆರಂಭವಾಗುತ್ತಿದೆ. ನಮ್ಮ ಹೋರಾಟ ಫಲ ನೀಡಿದೆ. ನಮ್ಮ ನೆಲ, ಜಲದಲ್ಲಿ ತಲೆ ಎತ್ತುತ್ತಿರುವ ಕಾರ್ಖಾನೆಯಲ್ಲಿ ತಾಲ್ಲೂಕಿನ ಪ್ರತಿ ಹೋಬಳಿ ಜನರಿಗೆ ಕೆಲಸ ನೀಡಬೇಕು. ಇದು ನಮ್ಮ ಹಕ್ಕೊತ್ತಾಯ. ಬನ್ನಿ, ನಾವು ಒಂದಾಗೋಣ, ಕೆಲಸ ಕೇಳೋಣ.

     ಸರೋಜಿನಿ ಮಹಿಷಿ ವರದಿ ಪ್ರಕಾರ ಎ ಗ್ರೂಫ್‌ಗೆ ಶೇ 65, ಬಿ ಗ್ರೂಫ್‌ಗೆ 85 ಹಾಗೂ ಸಿ, ಡಿ ದರ್ಜೆಯ ಶೇ 100ಕ್ಕೆ 100 ರಷ್ಟು ಕನ್ನಡಿಗರಿಗೇ ನೀಡಬೇಕು. ನಮ್ಮ ಉದ್ದೇಶ ಕನ್ನಡಿಗರ ಜೊತೆಗೆ ಸಂತ್ರಸ್ತ್ರರಿಗೆ ಕುಟುಂಬಕ್ಕೊಬ್ಬರಿಗೆ ಹಾಗೂ ಸ್ಥಳೀಯ ತಾಲ್ಲೂಕಿಗೆ ಶೇ 25, ಜಿಲ್ಲೆಗೆ 25 ಉದ್ಯೋಗ ನೀಡಬೇಕು. ಇದು ನಮ್ಮ ಬೇಡಿಕೆ. ಒಟ್ಟು ಸೃಷ್ಟಿಯಾಗುವ 4 ಸಾವಿರ ಉದ್ಯೋಗಗಳಲ್ಲಿ ಅರ್ಹತೆಗೆ ತಕ್ಕಂತೆ ನಮಗೆ  ಶೇ.75 ರಷ್ಟು ಉದ್ಯೋಗ ಬೇಕೇ ಬೇಕು. ನಮ್ಮನೆಲದ ಮಕ್ಕಳು ಉದ್ಯೋಗ ವಂಚಿತರಾಗದಿರಲಿ.

ಹೆಚ್.ಎ.ಎಲ್.ಉದ್ಯೋಗಆಕಾಂಕ್ಷಿಗಳು

    ಈ ಘಟಕದಲ್ಲಿ ಸ್ಥಳೀಯರಿಗೆ ಅಂದರೆ ಭೂಮಿ ಕಳೆದುಕೊಳ್ಳುವವರಿಗೆ,  ಉಳುಮೆ ಮಾಡುತ್ತಿದ್ದವರಿಗೆ , ಘಟಕದ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಗುಬ್ಬಿ ತಾಲ್ಲೋಕಿನ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಪಡೆಯಲು ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಉದ್ಯೋಗಾಂಕ್ಷಿಗಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನದ ಮೂಲಕ ಜಾಗೃತಿ ಮೂಡಿಸಲಾಗುವುದು.

   ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ನ್ಯಾಯಾಲಯದ ಮೊರೆ ಹೋಗಲು ಹೆಚ್.ಎ.ಎಲ್. ನಲ್ಲಿ ಉದ್ಯೋಗ ಪಡೆಯಲು ಅಕಾಂಕ್ಷಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಅಗತ್ಯ ಸ್ಥಳೀಯರಿಗೆ ಉದ್ಯೋಗ ಪಡೆಯಲು ಕೇಂದ್ರ ಸರ್ಕಾರದಲ್ಲಿ ರಾಷ್ಟ್ರೀಯ ಉದ್ಯೋಗ ನೀತಿ ಮತ್ತು ರಾಜ್ಯ ಸರ್ಕಾರದಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಮಾರ್ಪಾಡಾಗಬೇಕು ಇದಕ್ಕೆ ಸಂಘಟಿತ ಹೋರಾಟ ಅಗತ್ಯ.

ತುಮಕೂರಿನ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಬಹುದಾದವರು:

ಎಸ್ಸೆಸ್ಸೆಲ್ಸಿಗಿಂತ ಒಳಗಿನವರು, ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಎಲ್ಲಾ ವಿಧದ ಪದವೀಧರರು, ಟೈಪಿಸ್ಟ್ ಮತ್ತು ಡ್ರೈವರ್‌ಗಳು.

ನೋಂದಾಯಿಸಿಕೊಳ್ಳುವ ವಿಳಾಸ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ,  ಡಿಸಿಸಿ ಬ್ಯಾಂಕ್ ಎದರು ತುಮಕೂರು – 572 101 ದೂ:  : 0816-2278488

ಬೆಂಗಳೂರಿನ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಬಹುದಾದವರು:

ಎಂಬಿಎ, ಎಂಕಾಂ, ಬಿಇ,  ಎಂಇ ಸೇರಿದಂತೆ ಸಮಾನಾಂತರ ಪದವಿ, ಸ್ನಾತಕೋತ್ತರ ಪದವೀಧರರು

ನೋಂದಾಯಿಸಿಕೊಳ್ಳುವ ವಿಳಾಸ:

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬೆಂಗಳೂರು

2 ನೇ ಮಹಡಿ, ಏಷಿಯಾಟಿಕ್ ಬಿಲ್ಡಿಂಗ್, ಜನತಾ ಬಜಾರ್ ಹತ್ತಿರ, ಕೆಂಪೇಗೌಡ ರಸ್ತೆ,

ಬೆಂಗಳೂರು – 560 009
ದೂ.ವಾ:080-22261184, 22259351, 22374582,  22289668

ಅಗತ್ಯ ದಾಖಲಾತಿಗಳು:

ಶೈಕ್ಷಣಿಕ ಅರ್ಹತೆಯ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳು, ಪಾಸ್‌ಪೋರ್ಟ್ ಅಳತೆಯ ಫೋಟೋಗಳು. ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಸಂಪೂರ್ಣ ಉಚಿತವಾಗಿರುತ್ತದೆ.