14th July 2024
Share

ಊರಿಗೊಂದು ಕೆರೆ- ಕೆರೆಗೆ ನದಿ ನೀರು’

ಮುಖ್ಯಮಂತ್ರಿಗಳ ಆದೇಶ ದಿನಾಂಕ: 09.11.2020 ಇಂದಿಗೆ 49 ದಿವಸ.

ರಾಜ್ಯ ನದಿ ಜೋಡಣೆ- ಬಹಿರಂಗ ಡೈರಿ ಭಾಗ-24 ದಿನಾಂಕ: 28.12.2020

 ಕೇಂದ್ರ ಸರ್ಕಾರದ ನದಿಜೋಡಣೆ, ರಾಜ್ಯದ ನದಿ ಜೋಡಣೆ ಮತ್ತು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಡಿಪಿಆರ್ ಮಾಡುವ ಬಗ್ಗೆ, ದಿನಾಂಕ:05.12.2020 ರಂದು ರಾಜ್ಯ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್‌ಸಿಂಗ್‌ರವರ ಅಧ್ಯಕ್ಷತೆಯಲ್ಲಿ ಸಭೆ ನಡವಳಿಕೆ ಸಿದ್ಧವಾಗಿದೆಯಂತೆ. ಸಹಿ ಹಾಕಲು ರಾಕೇಶ್‌ಸಿಂಗ್‌ರವರು ರಜಾ ಹಾಕಿದ್ದಾರೆ. 

ದಿನಾಂಕ:28.12.2020 ರಂದು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ಅನಿಲ್‌ಕುಮಾರ್‌ರವರನ್ನು ಶ್ರೀ ಜಿ.ಎಸ್.ಬಸವರಾಜ್‌ರವರೊಂದಿಗೆ ಭೇಟಿಯಾಗಿ ವಿಚಾರಿಸಿದಾಗ ಈ ವಿಷಯ ತಿಳಿಯಿತು.  ದಿ:31.12.2020 ರಂದು ರಾಕೇಶ್‌ಸಿಂಗ್‌ರವರು ಬಂದ ತಕ್ಷಣ ಸಹಿ ಹಾಕಿಸಿ, ಈ ವರ್ಷವೇ ಸಚಿವರಿಗೆ ರವಾನಿಸುವ ಭರವಸೆಯಿದೆ.