14th July 2024
Share

TUMAKURU:SHAKTHI PEETA FOUNDATION

ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿಪೀಠ ಕ್ಯಾಂಪಸ್ ಲೇ ಔಟ್ ಅಥವಾ ಮಾಸ್ಟರ್ ಪ್ಲಾನ್ ಅಂತಿಮಗೊಳಿಸಲು ಇಂದಿನಿಂದ(01.01.2021) 15 ದಿವಸಗಳ ಕಾಲ ಪ್ರಭುದ್ಧರ ಆಂದೋಲನ’ ಆರಂಭಿಸಲು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ತೀರ್ಮಾನ ಮಾಡಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ದೇಶದಲ್ಲಿ ಅಭಿವೃದ್ಧಿ ವಿಷಯಗಳಿಗಾಗಿ ಒಂದು ಕ್ಯಾಂಪಸ್ ಮಾಡಿರುವುದು ನಾನಂತು ಕೇಳಿಲ್ಲ. ಇದು ಒಂದು ಹುಚ್ಚಾಟ, ದಡ್ಡಾಟ ಎಂಬ ಭಾವನೆ ಒಮ್ಮೊಮ್ಮೆ ನನ್ನ ಮನಸ್ಸಿನಲ್ಲಿಯೇ ಬರಲಿದೆ.

ಇರಲಿ ಬಿಡಿ ಯಾವ್ಯಾವುದೋ ದೇವಾಲಯ ಕಟ್ಟುತ್ತಾರೆ, ನಾವೂ ಒಂದು ಅಭಿವೃದ್ಧಿ ದೇವಾಲಯ ಕಟ್ಟೋಣ, ನಮ್ಮ ಜೊತೆಗೆ ನೀವೂ ಬನ್ನಿ, ನಿಮ್ಮ ಸಲಹೆ, ಮಾರ್ಗದರ್ಶನ ನೀಡಿ, ಸಹಕಾರ ನೀಡಿ, ಉಚಿತ ಸೇವೆ ಮಾಡಿ, ಸಾದ್ಯಾವಾದಲ್ಲಿ ಆರ್ಥಿಕ ನೆರವು ನೀಡಿ, ಇಲ್ಲವಾದಲ್ಲಿ ನಿಮ್ಮ ಬುದ್ದಿವಂತಿಕೆ, ಪರಿಣಿತಿ ಹಂಚಿಕೊಳ್ಳಿ.

ಇದು ನಮ್ಮ ನಮ್ರತೆಯ ಮನವಿ.

ನಮ್ಮ ಕ್ಯಾಂಪಸ್ ಮಾಸ್ಟರ್ ಪ್ಲಾನ್ ನನ್ನ ಅನುಭವದ ಪ್ರಕಾರ ಪೂರ್ಣಗೊಳ್ಳುವ ಹಂತದಲ್ಲಿದೆ. ನಾನು ಪೇಪರ್ ಮೇಲೆ ಮಾಸ್ಟರ್ ಪ್ಲಾನ್ ಮಾಡಿ ಇಟ್ಟುಕೊಳ್ಳದೆ ಭೂಮಿಯ ಮೇಲೆ ಎಲ್ಲೆಲ್ಲಿ, ಏನೇನು ಬರಲಿದೆ ಎಂಬ ಗುರುತು ಮಾಡಿ ನಾಮಫಲಕ ಹಾಕಲು ನಿರ್ಧರಿಸಿದ್ದೇನೆ.

ಭೂಮಿಯ ಮೇಲೆ ಗುರುತು ಮಾಡಿದ ನಂತರ, ಅಧಿಕಾರಿಗಳು, ಆಸಕ್ತರು, ಅನುಭವಿಗಳು, ವಿವಿಧ ವಿಷಯಗಳಲ್ಲಿ ಪರಿಣಿತರು, ದಾನಿಗಳು ಮತ್ತು ಹೂಡಿಕೆ ದಾರರನ್ನು ಆಹ್ವಾನಿಸಿ ಅವರ ಸಲಹೆಗಳಿಗೆ ಅನುಗುಣವಾಗಿ ಮಾರ್ಪಾಡು ಮಾಡಲು ಚಿಂತನೆ ನಡೆಸಿದ್ದೇನೆ.

ನಮ್ಮ ಕ್ಯಾಂಪಸ್‌ನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ಆರಂಭಿಸಲು ಕನಸು ಕಾಣಲಾಗಿದೆ. ಇದೊಂದು ವಿಶ್ವದಲ್ಲಿಯೇ ವಿನೂತನವಾದ ಪರಿಕಲ್ಪನೆ. ಆದ್ದರಿಂದ ಆಸಕ್ತರು ಸ್ಥಳಕ್ಕೆ ಆಗಮಿಸಿ ತಮ್ಮ ಅಮೂಲ್ಯವಾದ ಸಲಹೆ ನೀಡಲು ಮನವಿ.

ಹಲವಾರು ಜನರು ಇದುವರೆಗೂ ಉಚಿತವಾಗಿ, ಕೆಲಸಕ್ಕೆ ತಕ್ಕ ಹಣ ಪಡೆದು,  ಹಣವನ್ನು ನಿಮಗೆ ದೊರೆತಾಗ  ಸಾಲದ ರೂಪದಲ್ಲಿ ಕೊಡಿ ಎಂಬ ಕರಾರು ಮಾಡಿಕೊಂಡು ಹಾಗೂ ಮುಯ್ಯಾಳು ರೀತಿಯಲ್ಲಿ ವಿವಿದ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಮೊದಲು ಇಷ್ಟು ಹಣ ನೀಡಿ ಎಂದು ಹೇಳದೆ, ಲಕ್ಷಗಟ್ಟಲೇ ಬಿಲ್ ನೀಡಿ, ಇವನು ದುಡ್ಡು ಕೊಡುವುದಿಲ್ಲಾ ಎಂದು ಹೇಳದೇ, ಕೇಳದೇ ಬಿಟ್ಟು ಹೋಗಿದ್ದಾರೆ, ಫೋನ್ ಸ್ವಿಚ್ ಆಫ್, ಬ್ಯುಸಿ, ನಿಮ್ಮ ಕರೆಯನ್ನು ಸ್ವೀಕರಿಸುವುದಿಲ್ಲಾ ಎಂಬ ಧ್ವನಿ ಕೇಳಿ ಸಂತೋಷ ಪಡಬೇಕಿದೆ.

ಅದ್ದರಿಂದ ನಮ್ಮ ಸಮಿತಿ ಒಂದು ದೃಢ ನಿರ್ಧಾರ ಮಾಡಿದೆ. ಯಾರು ಏನೇ ಮಾಡಲು ಬಂದರೂ ಎಂಓಯು ಮಾಡಿಕೊಂಡು ನಿಯಾಮುನುಸಾರ ಕೆಲಸ ನೀಡಬೇಕಿದೆ. ಆರಂಭದಲ್ಲಿ ಏನು ಬೇಡ ಎಂದು ಹೇಳಿ ನಂತರ ಬಿಲ್ ಕೊಡುವ ಆಟವೇ ಬೇಡ.

ಕಟ್ & ಡ್ರೈ ವ್ಯವಹಾರ, ಇದೂವರೆಗೂ ಕೆಲಸ ಮಾಡಿದವರಿಗೂ ಅನ್ವಯವಾಗಲಿದೆ, ಮುಂಗಡ ಹಣ ಪಡೆದು ಏನು ಕೆಲಸ ಮಾಡದವರಿಗೂ ಇದು ಅನ್ವಯವಾಗಲಿದೆ. ಯಾವುದೇ ರೀತಿಯಲ್ಲಿ ಸೇವೆ ಮಾಡುವವರು ಇಚ್ಚೆ ಪಟ್ಟರೇ ಮಾತ್ರ ಇ-ಪೇಪರ್‌ನಲ್ಲಿ ಸುದ್ಧಿ ಪ್ರಕಟವಾಗಲಿದೆ. ಇಚ್ಚಿಸದೇ ಇದ್ದಲ್ಲಿ ರಹಸ್ಯವಾಗಿ ಇರಲಿದೆ. ಕೆಲವರಂತೂ ನಮ್ಮ ಹೆಸರು ಎಲ್ಲಿಯೂ ಬರಬಾರದು ಎಂಬ ಸಲಹೆ ನೀಡಿದ್ದಾರೆ.

‘ದಿ.ಮದನ್ ಮೋಹನ್ ಮಾಳವೀಯರವರು ಹಿಂದೂ ಮಹಾ ವಿಶ್ವವಿದ್ಯಾಲಯ ಆರಂಭಿಸಿದಂತೆ, ಬರೀ ಕೈಯಲ್ಲಿ ನಮ್ಮ ಕ್ಯಾಂಪಸ್ ಆರಂಭವಾಗಿದೆ. ಪಾರದರ್ಶಕತೆ ನಮ್ಮ ಗುರಿ. ಸೇವೆ ಮಾಡಿವರನ್ನು ಗುರುತಿಸುವುದು ನಮ್ಮ ಆಧ್ಯ ಕರ್ತವ್ಯ’

ನಮ್ಮ ಕ್ಯಾಂಪಸ್‌ನಲ್ಲಿ ಒಂದು ಕಲ್ಲು ಇಟ್ಟರೂ, ಯಾರು ಇಟ್ಟರೂ, ಹೇಗೆ ಇಟ್ಟರು, ಯಾಕೆ ಇಟ್ಟರು ಎಂಬುದು ಡಿಜಿಟಲ್ ದಾಖಲೆಯಾಗಲಿದೆ.

ನಮ್ಮ ಸಂಸ್ಥೆ ಯಾವ ಇಲಾಖೆಯಿಂದ, ಯಾವ ಯೋಜನೆಗೆ, ಅನುದಾನ ಪಡೆದಿದೆ, ಇಲಾಖಾ ಅಧಿಕಾರಿಗಳು ಹೇಗೆ ಸ್ಪಂಧಿಸಿದ್ದಾರೆ ಎಂಬ ಬಗ್ಗೆಯೂ ಡಿಜಿಟಲ್ ದಾಖಲೆ ಮಾಡುವ ಆಲೋಚನೆ ಇದೆ.

‘ಕ್ಯಾಂಪಸ್‌ನಿಂದ ಕಾರ್ಯಕ್ರಮಗಳನ್ನೂ ಅತೀ ಶೀಘ್ರವಾಗಿ ಆರಂಭಿಸಲಾಗುವುದು. ಮರದ ನೆರಳೇ ನಮ್ಮ ಕಚೇರಿ. ಮೊಬೈಲೇ ನಮ್ಮ ಪ್ರಪಂಚವಾಗಲಿದೆ. ಹಾಲಿ ಇರುವ ಗೋಶಾಲೆಯೇ  ನಮ್ಮ ಅರಮನೆಯಾಗಲಿದೆ’