TUMAKURU:SHAKTHIPEETA FOUNDATION
ರಾಜ್ಯ ಸರ್ಕಾರ ಸೂಕ್ತ ಕಟ್ಟಡ ನೀಡಿದರೇ ಮಾತ್ರ MSME TECHNOLOGY CENTRE ನೀಡಲಾಗುವುದು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈಗಾಗಲೇ ನೀಡಿರುವ 15 ಎಕರೆ ಜಮೀನು ಬೇಕಾದಲ್ಲಿ ಹಿಂಪಡೆಯಿರಿ. ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಎಂ.ಎಸ್.ಎಂ.ಇ ಸಚಿವರಾದ ಶ್ರೀ ನೀತೀನ್ ಗಡ್ಕರಿರವರು ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಹಿನ್ನಲೆಯಲ್ಲಿ ದಿನಾಂಕ:08.01.2021 ರಂದು ರಾಜ್ಯ ಸರ್ಕಾರದ ಸಣ್ಣ ಮತ್ತು ಸೂಕ್ಷ್ಮ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಕುಮಾರ್ ನಾಯಕ್ ರವರೊಂದಿಗೆ ಜಿಎಸ್‌ಬಿರವರು ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಸಮಾಲೋಚನೆ ಮಾಡಲಾಯಿತು.
MSME TECHNOLOGY CENTRE ಸ್ಥಾಪಿಸಲು ಎಷ್ಟು ವಿಸ್ತೀರ್ಣದ ಕಟ್ಟಡ ಬೇಕಾಗುವುದು ಹಾಗೂ ಯೋಜನೆಯ ಸಂಪೂರ್ಣ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿದಲ್ಲಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬಸವರಾಜ್‌ರವರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರಾದ ಶ್ರೀ ನಾಗೇಶ್‌ರವರಿಗೆ ಎಂ.ಎಸ್.ಎಂ.ಇ ನಿರ್ದೆಶಕರಾದ ಶ್ರೀ ಅಕಾದಾಸ್ ರವರೊಂದಿಗೆ ಚರ್ಚಿಸಿ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದರು.