19th April 2024
Share

TUMAKURU:SHAKTHIPEETA FOUNDATION

ಶ್ರೀ ಭೈರತಿ ಬಸವರಾಜ್‌ರವರ ಗಡುವು ನಾಗರೀಕ ಆಂದೋಲನ- 3 ನೇ ದಿವಸ ದಿನಾಂಕ:11.01.2021

ದಿನಾಂಕ:31.03.2011 ರ ಅಂತ್ಯಕ್ಕೆ ತುಮಕೂರು ನಗರದಲ್ಲಿ 458 ಉದ್ಯಾನವನಗಳಿವೆ ಎಂದು ಘೋಷಣೆ ಮಾಡಲಾಗಿದೆ. ಅಂದಿನಿಂದ ಇಲ್ಲಿಯವರೆಗೂ ಪತ್ತೆ ಮಾಡಿರುವ ಉದ್ಯಾನವನಗಳಿದ್ದಲ್ಲಿ ಎಲ್ಲವನ್ನೂಸೇರ್ಪಡೆ ಮಾಡಿ ಉದ್ಯಾನವನಗಳ ಜಿಐಎಸ್ ಲೇಯರ್ ಪೂರ್ಣಗೊಳಿಸುವುದು ತುಮಕೂರು ಮಹಾನಗರಪಾಲಿಕೆ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹೊಣೆಗಾರಿಕೆ.

 ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕರವರು ಉದ್ಯಾನವನಗಳ ಜಿಐಎಸ್ ಲೇಯರ್ ಅಂತಿಮಗೊಳಿಸುವುದು ಅಗತ್ಯವಾಗಿದೆ.

 ಬಹಳ ಹಿಂದೆಯೇ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡಲು ಸಲಹೆ ನೀಡಲಾಗಿತ್ತು. ಪ್ರಸ್ತುತ ಈ ಕೆಳಕಂಡ ಜಿಐಎಸ್ ಲೇಯರ್ ಮಾಡಲು ಸಲಹೆ ನೀಡಲಾಗಿದೆ. ಇದರ ಜೊತೆಗೆ ಇನ್ನೂ ಅಗತ್ಯವಿರುವ ಜಿಐಎಸ್ ಲೇಯರ್ ಗಳ ಬಗ್ಗೆ ತಾವೂ ಸಲಹೆ ನೀಡಬಹುದು. ಯಾವುದಾದರೂ ಜಿಐಎಸ್ ಲೇಯರ್ ಅನಗತ್ಯವಾಗಿದ್ದಲ್ಲಿಯೂ ತಿಳಿಸಲು ಮನವಿ ಮಾಡಲಾಗಿದೆ.

  1. ಅಭಿವೃದ್ಧಿ ಹೊಂದಿದ ಉದ್ಯಾನವನಗಳ ಜಿಐಎಸ್ ಲೇಯರ್.
  2. ಅಪೂರ್ಣ ಕಾಮಗಾರಿ ಉದ್ಯಾನವನಗಳ ಜಿಐಎಸ್ ಲೇಯರ್.
  3. ಅಭಿವೃದ್ಧಿ ವಂಚಿತ ಉದ್ಯಾನವನಗಳ ಜಿಐಎಸ್ ಲೇಯರ್.
  4. ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅಭಿವೃದ್ಧಿ ಮಾಡಿದ ಉದ್ಯಾನವನಗಳ ಜಿಐಎಸ್ ಲೇಯರ್.
  5. ಅಮೃತ್ ಯೋಜನೆಯಡಿ ಅಭಿವೃದ್ಧಿ ಮಾಡಿದ ಉದ್ಯಾನವನಗಳ ಜಿಐಎಸ್ ಲೇಯರ್.
  6. ದಾನಿಗಳು ಅಭಿವೃದ್ಧಿ ಮಾಡಿರುವ ಉದ್ಯಾನವನಗಳ ಜಿಐಎಸ್ ಲೇಯರ್.
  7. ಖಾಸಗಿಯವರು ಒತ್ತುವರಿ ಮಾಡಿರುವ ಉದ್ಯಾನವನಗಳ ಜಿಐಎಸ್ ಲೇಯರ್.
  8. ಸರ್ಕಾರಿ ಯೋಜನೆಗಳಿಗೆ ಬಳಸಿಕೊಂಡಿರುವ ಉದ್ಯಾನವನಗಳ ಜಿಐಎಸ್ ಲೇಯರ್.
  9. ಮುಳ್ಳುತಂತಿ ಹಾಕಿರುವ ಉದ್ಯಾನವನಗಳ ಜಿಐಎಸ್ ಲೇಯರ್.
  10. ಆವರಣಗೋಡೆ ಹಾಕಿರುವ ಉದ್ಯಾನವನಗಳ ಜಿಐಎಸ್ ಲೇಯರ್.
  11. ನೀರಿನ ಸಂಪರ್ಕವಿರುವ ಉದ್ಯಾನವನಗಳ ಜಿಐಎಸ್ ಲೇಯರ್.
  12. ಪತ್ತೆ ಆಗದೆ ಇರುವ ಉದ್ಯಾನವನಗಳ ಜಿಐಎಸ್ ಲೇಯರ್.
  13. ನಾಪತ್ತೆ ಆಗಿರುವ ಉದ್ಯಾನವನಗಳ ಜಿಐಎಸ್ ಲೇಯರ್.
  14. ಭೂಬಳಕೆ ಬದಲಾವಣೆ ಆಗಿರುವ ಉದ್ಯಾನವನಗಳ ಜಿಐಎಸ್ ಲೇಯರ್.
  15. ಗಿಡಗಳನ್ನು ಹಾಕದೆ ಇರುವ ಉದ್ಯಾನವನಗಳ ಜಿಐಎಸ್ ಲೇಯರ್.

ಕ್ಲಿಕ್ ಮಾಡಿದರೆ ಇತಿಹಾಸ ಪುಟದಲ್ಲಿ ಕೆಳಕಂಡ ಮಾಹಿತಿಗಳು ಇರುವುದು ಅಗತ್ಯ.

1.ಉದ್ಯಾನವನದ ನಂಬರ್

2.ಉದ್ಯಾನವನದ ಹೆಸರು:

3.ಗ್ರಾಮ:

4.ವಾರ್ಡ್:

5.ಬಡಾವಾಣೆ:

6.ಸರ್ವೆನಂಬರ್:

7.ಲೇಔಟ್ ನಂ:          ದಿನಾಂಕ:

8.ರಸ್ತೆಯ ಹೆಸರು:

9.ವಿಸ್ಥೀರ್ಣ:

10.ಪೂರ್ವ-ಪಶ್ಚಿಮ: —-   ಮೀ/ಅಡಿ

11.ಉತ್ತರ-ದಕ್ಷಿಣ: —-   ಮೀ/ಅಡಿ

12.ಅನುದಾನದ ವಿವರ:

13.ಒತ್ತುವರಿ ಮಾಹಿತಿ:

14.ಗಿಡಗಳ ಜಾತಿವಾರು ಸಂಖ್ಯೆ:

15.ನೀರಿನ ಸಂಪರ್ಕ:

16.ಆವರಣದ ರೀತಿ:

17.ಕೈಗೊಳ್ಳಬೇಕಿರುವ ಕಾಮಗಾರಿಗಳ ಮಾಹಿತಿ:

18.ವಿದ್ಯುತ್ ಸಂಪರ್ಕ:

19.ಅನೈತಿಕ ಚಟುವಟಿಕೆ ದೂರು:

20.ನಿರ್ವಹಣೆ::