22nd December 2024
Share

TUMAKURU:SHSKTHIPEETA FOUNDATION

ಶ್ರೀ ಭೈರತಿ ಬಸವರಾಜ್‌ರವರ ಗಡುವು ನಾಗರೀಕ ಆಂದೋಲನ- 4 ನೇ ದಿವಸ ದಿನಾಂಕ:12.01.2021

ತುಮಕೂರು ನಗರದಲ್ಲಿ ಡಿಸೆಂಬರ್ 2016 ರವರೆಗೆ ಗುರುತಿಸಿರುವ ಉದ್ಯಾನವನಗಳು 520 ತಲುಪಿದೆ. ಈ ವರೆಗೂ ತುಮಕೂರು ಲೋಕಲ್ ಪ್ಲಾನಿಂಗ್ ಏರಿಯಾದಲ್ಲಿರುವ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿರುವ ಅಂತಿಮ ಉದ್ಯಾನವನಗಳ ಪಟ್ಟಿಯನ್ನು ಶೀಘ್ರವಾಗಿ ಘೋಷಣೆ ಮಾಡಲು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಪಾಲಿಕೆ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿಲಾಗಿದೆ ಎಂದು ತಿಳಿಸಿದ್ದಾರೆ.

ಇದೂವರೆಗೂ 458 ಉದ್ಯಾವನಗಳು ಎನ್ನುತ್ತಿದ್ದೇವು, ಈಗ 520 ಉದ್ಯಾನವನಗಳು, ಅಂತಿಮವಾಗಿ ನೋಡೋಣ. 520 ಉದ್ಯಾನವನಗಳು ಸೇರಿದಂತೆ ಸುಮಾರು 579067.14  ಚಮೀ ವಿಸ್ತೀರ್ಣ ಇದೆ.   ಅಂದರೆ ಸುಮಾರು 144.766 ಎಕರೆ ಆಗಲಿದೆ. ಇದರಲ್ಲಿ ಅಕ್ಕತಂಗಿ ಕೆರೆ ಉದ್ಯಾನವನ ಸೇರಿಲ್ಲ, ಮಾಲೀಕತ್ವ ಅರಣ್ಯ ಇಲಾಖೆಯಲ್ಲಿದೆ.

 ಜೊತೆಗೆ ತುಮಕೂರು ಅಮಾನಿಕೆರೆಯಲ್ಲಿರುವ ಉದ್ಯಾನವನದ ವಿಸ್ತೀರ್ಣ, ಉದ್ದೇಶಿತ ಗಂಗಸಂದ್ರ ಅಮಾನಿಕೆರೆಯ ಉದ್ಯಾನವನದ ವಿಸ್ತೀರ್ಣ ಸೇರಿದಂತೆ ನಗರದ ಎಲ್ಲಾ ಉದ್ಯಾನವನಗಳ ಪಟ್ಟಿ ಮತ್ತು ವಿಸ್ತೀರ್ಣವನ್ನು ಪಕ್ಕಾ ಘೋಷಣೆ ಮಾಡಲು ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದ್ದಾರೆ.

ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು 520  ಉದ್ಯಾನವನಗಳ ಪಟ್ಟಿಯನ್ನು ಮಾಡಿ, ಒತ್ತುವರಿ ಮಾಹಿತಿಯೊಂದಿಗೆ ಈಗಾಗಲೇ ಶಾಸಕರಿಗೆ ನೀಡಿದ್ದಾರೆ. ಶಾಸಕರು ವಾರ್ಡ್‌ವಾರು ಪ್ರತ್ಯೇಕ ಪಟ್ಟಿ ಮಾಡಲು ಸೂಚಿಸಿದ್ದಾರೆ. ಒಂದೆರಡು ದಿನದಲ್ಲಿ ವಾರ್ಡ್‌ವಾರು ಉದ್ಯಾನವನಗಳ ಪಟ್ಟಿ ದೊರೆಯಲಿದೆ.

 ದಿನಾಂಕ:31.12.2020 ರಂದು ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ  ಪಾಲಿಕೆ ಆಯುಕ್ತರಿಗೆ ನಗರದ ಎಲ್ಲಾ ಉದ್ಯಾನವನಗಳ ಅಭಿವೃದ್ಧಿಗೆ ತಗಲುವ ವೆಚ್ಚವನ್ನು ಸಿದ್ಧಪಡಿಸಲು ಸೂಚಿಸಿಲಾಗಿತ್ತು. ಒಂದೆರಡು ದಿನದಲ್ಲಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ನಗರಾಭಿವೃದ್ಧಿ ಸಚಿವರಿಗೆ ವಿಶೇಷ ಅನುದಾನ ನೀಡಲು ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.

 ನಗರಾಭಿವೃದ್ಧಿ ಸಚಿವರು ಒಂದು ತಿಂಗಳಲ್ಲಿ ಉದ್ಯಾನವನಗಳ ಒತ್ತುವರಿ ತೆರವು ಮತ್ತು ಅಭಿವೃದ್ಧಿಗೆ ಸೂಚಿಸಿದ್ದು ಒಂದು ರೀತಿ ಶಾಸಕರಿಗೆ ವರದಾನವಾಗಿದೆ. ವಿಶೇಷ ಹಣ ನೀಡಿ ಕೆಲಸ ಮಾಡುತ್ತೇವೆ, ಅನುದಾನ ನೀಡದೇ ಯಾವ ಹಣದಲ್ಲಿ ಕೆಲಸ ಮಾಡೋದು ಎಂಬ ಸ್ಪಷ್ಟ ಸಂದೇಶವನ್ನು ಸಚಿವರಿಗೆ ನೀಡಲು ಶಾಸಕರು ಚಿಂತನೆ ನಡೆಸಿರುವಂತಿದೆ.