TUMAKURU:SHAKTHIPEETA FOUNDATION
ಶ್ರೀ ಭೈರತಿ ಬಸವರಾಜ್‌ರವರ ಗಡುವು ನಾಗರೀಕ ಆಂದೋಲನ- 5 ನೇ ದಿವಸ ದಿನಾಂಕ:13.01.2021
ತುಮಕೂರು ನಗರದಲ್ಲಿ ಡಿಸೆಂಬರ್ 2016 ರವರೆಗೆ ಗುರುತಿಸಿರುವ ಉದ್ಯಾನವನಗಳು 520 ತಲುಪಿದೆ. ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕರವರು ವಾರ್ಡ್‌ವಾರು ಪಟ್ಟಿ ಮಾಡಿ ಕಳುಹಿಸಿದ್ದಾರೆ.
ನಾನು ಅವರಿಗೆ ಒಂದೇ ಲಿಸ್ಟ್‌ನಲ್ಲಿ ಈ ರೀತಿ ಮಾಡಬೇಡಿ, ೩೫ ವಾರ್ಡ್‌ವಾರು ಪ್ರತ್ಯೇಕ ಲಿಸ್ಟ್ ಮಾಡಿ, ಈ ಪಟ್ಟಿಯನ್ನು ಮಹಾನಗರ ಪಾಲಿಕೆ ಸದಸ್ಯರು, ಪಾಲಿಕೆ ಅಧಿಕಾರಿಗಳು ಮತ್ತು ನಗರದ ಪಾರ್ಕ್ ಪ್ರೇಮಿಗಳು, ಸಂಘ ಸಂಸ್ಥೆಗಳಿಗೂ, ನಾಗರೀಕ ಸಮಿತಿಗಳಿಗೂ ನೀಡಿ, ಈ ಉದ್ಯಾನವನಗಳನ್ನು ಬಿಟ್ಟು ಇನ್ನೂ ಯಾವುದಾದರೂ ನಗರದಲ್ಲಿ ಉದ್ಯಾನವನಗಳಿದ್ದಲ್ಲಿ ಅವರೆಲ್ಲರೂ ಸಲಹೆ ನೀಡಲಿ. ಪ್ರಜಾಪ್ರಭುತ್ವದ ರೀತಿ ಇದೂ ಒಂದು ಆಂದೋಲವಾಗಬೇಕು ಎಂಬ ಸಲಹೆ ನೀಡಿದ್ದೇನೆ.
ಉದ್ಯಾನವನಗಳ ಒತ್ತುವರಿ ತೆರವು ಮತ್ತು ಸಮಗ್ರ ಅಭಿವೃದ್ಧಿ ಹಾಗೂ ರಾಜಕಾಲುವೆಗಳ ಒತ್ತುವರಿ ತೆರವು, ಊಳು ತೆಗೆಯುವುದು ಮತ್ತು ಸಮಗ್ರ ಅಭಿವೃದ್ಧಿ ಲೈನ್ ಎಸ್ಟಿಮೇಟ್ ಮಾಡುತ್ತಿದ್ದಾರೆ, ವಾರ್ಡ್‌ವಾರು ಮಾಹಿತಿಯನ್ನು ಒಂದೆರಡು ದಿನದಲ್ಲಿ ನೀಡುವುದಾಗಿ ತಿಳಿಸಿದ್ದಾರೆ.
ಪಾಲಿಕೆ ಸಿಬ್ಬಂದಿ ಕೆಲಸ ಮಾಡಲು ರೆಡಿ ಅಗತ್ಯವಿರುವ ಅನುದಾನ ನೀಡುವರು ಯಾರು?
ತುಮಕೂರು ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಸಮಯವಿದ್ದಲ್ಲಿ, ಈ ಎಲ್ಲಾ ಉದ್ಯಾನವನಗಳಿಗೆ ’ಪಾರ್ಕ್ ಯಾತ್ರೆ’ ರೀತಿ ಬೇಟಿ ಮಾಡಿ, ಸಂರಕ್ಷಣೆಗಾಗಿ ಅಕ್ಕಪಕ್ಕದ ಜನರ ಸಹಕಾರ ಮತ್ತು ಅಭಿವೃದ್ದಿಗಾಗಿ ಸಲಹೆಗಳನ್ನು ಸ್ವೀಕರಿಸುವುದು ಒಳ್ಳೆಯದು.
620 ಉದ್ಯಾನವನಗಳು ಅಂದರೆ, ತಲಾ 10 ಕುಟುಂಬದಂತೆ ಆದರೂ, ನೇರವಾಗಿ ಕನಿಷ್ಟ 6200 ಕುಟುಂಬ ಸಂಪರ್ಕ ಮಾಡುವ ಅವಕಾಶ ತಾನಾಗಿಯೇ ಒದಗಿ ಬಂದಿಗೆ. ಶಾಸಕರಿಗೆ ಇನ್ನೊಂದು ‘ಉದ್ಯಾನವನದ ಡಿಗ್ರಿ’ ಪಡೆದಂತ ವಿಶೇಷ ಅನುಭವವಾಗಲಿದೆ. ಈ ಯಾತ್ರೆ ಜನರ ಮನಸ್ಸಿನಲ್ಲಿ ಬಹಳ ಕಾಲ ಉಳಿಯಲಿದೆ.