16th September 2024
Share

TUMAKURU:SHAKTHIPEETA FOUNDATION

TUMAKURU:SHAKTHIPEETA FOUNDATION

ಒಂದು ಪವಾಡವೆಂಬಂತೆ ಗುಬ್ಬಿ ತಾಲ್ಲೂಕಿನ ಕುಂದರನಹಳ್ಳಿಗೆ ಹೊಂದಿಕೊಂಡಿರುವ ಬಿದರೆಹಳ್ಳಕಾವಲ್‌ನಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಸ್ವಾಮ್ಯದ ಹೆಚ್.ಎ.ಎಲ್ ವತಿಯಿಂದ ಸುಮಾರು ರೂ 6300 ಕೋಟಿ ವೆಚ್ಚದಲ್ಲಿ ಯುದ್ಧ ಹೆಲಿಕ್ಯಾಪ್ಟರ್ ಘಟಕ ಆರಂಭಿಸಲು ದಿನಾಂಕ:03.01.2016  ರಂದು ಪ್ರಧಾನಿ ಶ್ರೀ ನರೇಂದ್ರಮೋದಿಯವರು ಶಂಕುಸ್ಥಾಪನೆ ಮಾಡಿ 2018 ರೊಳಗೆ ಈ ಭಾಗದ ರೈತರ ಮಕ್ಕಳಿಗೆ ಉದ್ಯೋಗ ನೀಡುವ ಮೂಲಕ ಘಟಕದ ಆರಂಭ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು.

ಶಂಕುಸ್ಥಾಪನೆ ಮಾಡಿ 5 ವರ್ಷಗಳು ಕಳೆದಿವೆ, ಇಂದು(ದಿನಾಂಕ:13.01.2021) ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಹೆಚ್.ಎ.ಎಲ್ ಗೆ ನೀಡಿರುವ ಅನುಮತಿ ಗುಬ್ಬಿ ಹೆಚ್.ಎ.ಎಲ್ ಗೆ ಹಸಿರು ನಿಶಾನೆ ನೀಡಿದಂತಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರಧಾನಿಯವರಿಗೆ ಪತ್ರಬರೆದು ಘಟಕ ಉದ್ಘಾಟನೆ ಮಾಡಲು ಮನವಿ ಮಾಡಿದ್ದರು. ಬಹುತೇಕ ಘಟಕ ಆರಂಭವಾಗುವ ನೀರಿಕ್ಷೆಗಳು ನಮ್ಮ ಮುಂದಿವೆ.

ಸ್ಥಳೀಯರಿಗೆ ಉದ್ಯೋಗದ ಕನಸು ನನಸು ಮಾಡುವರು ಯಾರು? ಎಂಬ ರಹಸ್ಯ ಯಕ್ಷ ಪ್ರಶ್ನೆಯಾಗಿದೆ.