15th January 2025
Share
G.S.BASAVARAJ, RAKESHKUMAR IAS. KIADB DO SUNIL, KIADB SLAO THABASAM & KUNDARANAHALLI RAMESH

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಶರವೇಗದಲ್ಲಿ ಸಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಮಹತ್ತರವಾದ ಯೋಜನೆಗಳು ಪ್ರಗತಿಯಲ್ಲಿವೆ, ಮಂಜೂರಾತಿ ಹಂತದಲ್ಲಿವೆ, ಇವುಗಳ ಅನುಷ್ಟಾನ ಶೀಘ್ರವಾಗಿ ಕಾಲಮಿತಿಯಲ್ಲಿ ಪೂರ್ಣಗೊಳ್ಳಲು ಏನೇನು ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್‌ಕುಮಾರ್‌ರವರು ಮಹತ್ವದ ಸಮಾಲೋಚನೆಯನ್ನು ನಡೆಸಿದರು.

ದಿನಾಂಕ:13.01.2021 ರಂದು ನಡೆದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್‌ರವರು, ಕೆಐಎಡಿಬಿ ಡಿಓ ಶ್ರೀ ಸುನಿಲ್‌ರವರು, ಕೆಐಎಡಿಬಿ ಭೂಸ್ವಾಧಿನಾಧಿಕಾರಿ ಶ್ರೀಮತಿ ತಬಸ್ಸಮ್ ಮತ್ತು ಶ್ರೀ ಉಮಾಶಂಕರ್‌ರವರು ಇದ್ದರು.

ಸಭೆಯಲ್ಲಿ ಸಮಾಲೋಚನೆ ನಡೆಸಿದ ಪ್ರಮುಖ ವಿಚಾರಗಳು.

  1. ತುಮಕೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್-2
  2. ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್.
  3. ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್‌ಗೆ ಹೇಮಾವತಿ, ಎತ್ತಿನಹೊಳೆ ಮತ್ತು ಕುಮಾರಧಾರ ನೀರು ಸರಬರಾಜು ಹಾಗೂ ಅಲೋಕೆಷನ್.
  4. ಒಂದು ಜಿಲ್ಲೆ- ಒಂದು ಉತ್ಪನ್ನ.
  5. ಕೊಕೊನಟ್ ಸ್ಪೆಷಲ್ ಎಕನಾಮಿಕ್ ಝೋನ್ ಸ್ಥಾಪನೆ.
  6. ರಫ್ತು ಹಬ್.
  7. ಕರ್ನಾಟಕ ಹೆರಿಟೇಜ್ ಹಬ್.
  8. ತುಮಕೂರು ಫೆರಿ-ಫೆರಿಯಲ್ ರಿಂಗ್ ರಸ್ತೆ.
  9. ತುಮಕೂರು ನಗರದ ಎಲ್ಲಾ ಕೆರೆಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗಾಗಿ ನದಿ ನೀರು ಅಲೋಕೇಷನ್.

ಬಗ್ಗೆ ವಿವರವಾದ ಸಮಾಲೋಚನೆ ನಡೆಯಿತು. ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಿತು.