31st October 2024
Share

TUMAKURU:SHAKTHIPEETA FOUNDATION

ದಿನಾಂಕ: 18.01.2021 ರಂದು ತುಮಕೂರಿನ ಸಿದ್ಧಗಂಗಾ ಮಠದ ರೈಲ್ವೇ ಸೇತುವೆ ಸ್ಥಳ ವೀಕ್ಷಣೆಗಾಗಿ ರೈಲ್ವೇ ಜನರಲ್ ಮ್ಯಾನೇಜರ್ ಬಂದಿದ್ದರೂ. ಆ ವೇಳೆ ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್  ರವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ತುಮಕೂರಿನ ಮಾಜಿ ಶಾಸಕರಾದ ಶ್ರೀ ಷಫಿಅಹಮ್ಮದ್ ರವರು, ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್  ಸೇರಿದಂತೆ ಹಲವಾರು ಜನರು ಅಲ್ಲಿದ್ದರು.

ಅಲ್ಲಿ ಯಾರೋ ಒಬ್ಬ ಭಕ್ತರು ಸಾರ್ ಕ್ಯಾತಸಂದ್ರ ರೈಲ್ವೇ ಸ್ಟೇಷನ್ ಬದಲಿಗೆ ಕ್ಯಾತಸಂದ್ರ-ಸಿದ್ಧಗಂಗಾ ಮಠ ರೈಲ್ವೆ ಸೇಷನ್ ಎಂದು ನಾಮಕರಣ ಮಾಡಿಸಿ ಎಂದು ಸಂಸದರಿಗೆ ಸಲಹೆ ನೀಡಿದರು. ತಕ್ಷಣ ಬಸವರಾಜ್ ರವರು ಜನರಲ್ ಮ್ಯಾನೇಜರ್ ಗಮನಕ್ಕೆ ತಂದಾಗ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದರೆ ಶೇ 100 ರಷ್ಟು ಹೆಸರು ಬದಲಾವಣೆ ಮಾಡಬಹುದು ಎಂದು ಭರವಸೆ ನೀಡಿದರು.

ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ತುಮಕೂರು ಮಹಾನಗರ ಪಾಲಿಕೆಗೆ ಪತ್ರಬರೆದು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಸಭೆ ನಡವಳಿಕೆ ಮಾಡಲು ಸೂಚಿದ್ದಾರೆ.

ಜೊತೆಗೆ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ದಿನಾಂಕ:21.01.2021 ರಂದು ಸಿದ್ಧಗಂಗಾಮಠಕ್ಕೆ ಬಂದಾಗ ಈ ಬಗ್ಗೆ ಘೋಷಣೆ ಮಾಡಿಸಲು/ಭರವಸೆ ನೀಡಲು ಮುಖ್ಯಮಂತ್ರಿಯವರಿಗೆ ಶ್ರೀ ಜಿ.ಎಸ್.ಬಸವರಾಜ್ ಮಾತನಾಡಿದ್ದಾರೆ.

ಈ ರೈಲ್ವೇ ಸೇತುವೆ ಕಾಮಗಾರಿ ರೈಲ್ವೇ ಸಚಿವರಾದ ದಿ. ಸುರೇಶ್ ಅಂಗಡಿಯವರ ಕೊಡುಗೆ. ಅವರ ಹೆಸರು ಇಡಬೇಕು ಎಂಬ ಪರಿಕಲ್ಪನೆ ಶ್ರೀ ಜಿ.ಎಸ್.ಬಸವರಾಜ್‌ರವರ ಮನಸ್ಸಿನಲ್ಲಿದೆ. ಈ ಪ್ರಸ್ತಾವನೆಗೆ  ಸಿದ್ಧಗಂಗಾ ಭಕ್ತರ ಮೂಲಕ ಚಾಲನೆ ನೀಡಲು ಸಿದ್ಧವಾಗುತ್ತಿದ್ದಾರಂತೆ.