23rd May 2024
Share

TUMAKURU:SHAKTHIPEETA FOUNDATION

ಭಾರತ ಸರ್ಕಾರ ದೇಶದ ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ  ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿಗಳನ್ನು ದಿನಾಂಕ:27.06.2016  ರಂದು ಜಾರಿಗೊಳಿಸಿದೆ.

ಆರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಪ್ರಗತಿ ಬಗ್ಗೆ ವಿಜಿಲೆನ್ಸ್ & ಮಾನಿಟರಿಂಗ್ ಸಮಿತಿ ರಚಿಸಿದ್ದು ನಂತರ, ದೇಶದ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆ ಮತ್ತು ದೂರದೃಷ್ಠಿಯಿಂದ, ಪ್ರತಿಯೊಂದು ಇಲಾಖೆಯ ಅನುದಾನದ ಬಗ್ಗೆ ಗಮನ ಹರಿಸಲು ಅವಕಾಶ ಕಲ್ಪಿಸಿದೆ.

ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಿಸುವುದೇ ದಿಶಾ ಸಮಿತಿಯ ಮೂಲ ಉದ್ದೇಶ. ಅರ್ಹರೂ ಯೋಜನೆಯ ಸೌಲಭ್ಯ ವಂಚಿತರಾಗಬಾರದು ಮತ್ತು ಅನರ್ಹರು ಯೋಜನೆಯನ್ನು ಕಬಳಿಸಬಾರದು. ಇದನ್ನು ಸಂಸದರು ಮತ್ತು ಮುಖ್ಯಂತ್ರಿಗಳು ಗುರುತಿಸಿ, ಸೂಕ್ತ ಕ್ರಮಕೈಗೊಳ್ಳಿ ಎಂಬುದೇ ದಿಶಾ ಘೋಷಣೆ ಎಂದರೆ ತಪ್ಪಾಗಲಾರದು.

ವ್ಯಕ್ತಿ, ಒಂದು ಕುಟುಂಬ, ಒಂದು ಗ್ರಾಮದ ಸಮುದಾಯ ಹಾಗೂ ಒಂದು ಇಂಚು ಭೂಬಳಕೆ, ಒಂದು ಸರ್ವೆನಂಬರ್, ಒಂದು ಗ್ರಾಮದಿಂದ ಆರಂಭಿಸಿ ಇಡೀ ಜಿಲ್ಲೆಯ ಅಭಿವೃದ್ಧಿ ಡಿಜಿಟಲ್ ತಾಜಾ ಡೇಟಾ ಮತ್ತು ವಿಶ್ಲೇಷಣೆಯ ಪ್ಲಾಟ್ ಫಾರಂ ಎಂದರೂ ಅತಿಶಯೋಕ್ತಿ ಆಗಲಾರದು’

 ಒಂದು ವರ್ಷದಲ್ಲಿ 4 ಸಭೆಗಳನ್ನು ಏಫ್ರಿಲ್, ಜುಲೈ, ಅಕ್ಟೋಬರ್ ಮತ್ತು ಫೆಬ್ರವರಿಯಲ್ಲಿ ಒಂದೊಂದು ಸಭೆಯನ್ನು ಕಡ್ಡಾಯವಾಗಿ ಮಾಡಿ, ಅಧ್ಯಕ್ಷರ ಒಪ್ಪಿಗೆ ಮೇರೆಗೆ  ಅಗತ್ಯವಿದ್ದಲ್ಲಿ ಎಷ್ಟಾದರೂ ಸಭೆ ಮಾಡಬಹುದು ಎಂದು ಮಾರ್ಗದರ್ಶಿಯಲ್ಲಿದೆ. ತುಮಕೂರಿನಲ್ಲಿ ಕಳೆದ ವರ್ಷ ಮತ್ತು ಈ ವರ್ಷ ಮಾಡಿದ ಎಲ್ಲಾ ಸಭೆಗಳ ಅಜೆಂಡಾವನ್ನು ಪೋರ್ಟಲ್‌ನಲ್ಲಿ ಏಕೆ ಅಫ್ ಲೋಡ್ ಮಾಡಿಲ್ಲ ಎಂಬುದೇ ಒಂದು ಯಕ್ಷ ಪ್ರಶ್ನೆ.

ತುಮಕೂರುಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಅವರಿಗೆ ಅಧಿಕಾರ ಇರಲಿ, ಇಲ್ಲದಿರಲಿ  ಅಭಿವೃದ್ಧಿ ಆಸಕ್ತರ ವಿಷನ್ ಗ್ರೂಪ್ ಜೊತೆ ಸದಾ ಸಂಪರ್ಕದಲ್ಲಿದ್ದಾರೆ. ಅಭಿವೃದ್ಧಿ ಚಿಂತಕರ ಚಿಂತನೆಗಳಿಗೆ ರೆಕ್ಕೆ-ಪುಕ್ಕ ಕಟ್ಟುತ್ತಾರೆ. ಇವರಿಗೆ ಚುನಾವಣೆ ಪ್ರಣಾಳಿಕೆ ಮುಖ್ಯವಲ್ಲ. ಮನಸ್ಸಿಗೆ ಬಂದ ಯೋಜನೆಗಳ ಜಾರಿಗೆ ಶ್ರಮಿಸುವ ನಿರಂತರ ಪ್ರಣಾಳಿಕೆ ಇದೆ’

ದಿಶಾ ಸಮಿತಿ ಇವರಿಗೆ ವರದಾನವಾಗಿದೆ. ಅವರು 5  ನೇ ಭಾರಿಗೆ ಸಂಸದರಾದ ಕೂಡಲೇ ಇಡೀ ರಾಜ್ಯದಲ್ಲಿಯೇ ಪ್ರಥಮವಾಗಿ ದಿಶಾ ಸಮಿತಿ ರಚಿಸಿ ದಿನಾಂಕ:21.09.2019 ರಂದು ಪ್ರಥಮ ಸಭೆ ನಡೆಸುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ. ಅವರು ನಡೆಸಿರುವ ಸಭೆಗಳು 11 ಆದರೂ 2019  ರಲ್ಲಿ 3 ಸಭೆಗಳ ನಡವಳಿಕೆ ಮಾತ್ರ ಅಫ್ ಲೋಡ್ ಮಾಡಿದ್ದಾರೆ.

  ಈ ವರ್ಷವೂ ವಿವಿದ ಇಲಾಖೆಗಳ ಯೋಜನೆಯ ಬಗ್ಗೆ 14 ಸಭೆಗಳನ್ನು ನಡೆಸಿದ್ದಾರೆ. ಈ ವರ್ಷವೂ ಸಹ ಕೇವಲ ಎರಡು ಸಭೆಗಳ ಸಭೆ ನಡವಳಿಕೆ ಅಫ್ ಲೋಡ್ ಮಾಡಿದ್ದಾರೆ. ಇಂದು (ದಿನಾಂಕ:21.01.2021) ಮೂರನೇ ಸಭೆ ನಡೆಯಲಿದೆ. ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.

ದಿಶಾ ಸಭೆಯಲ್ಲಿ ಮಂಡ್ಯ ಪಸ್ಟ್, ಸುಮಲಥ ಫಸ್ಟ್ ಎಂಬ ಪತ್ರಿಕಾ ವರದಿ ಸಾಮಾಜಿಕ ತಾಣದಲ್ಲಿ ಬಂದ ತಕ್ಷಣ. ಜಿಲ್ಲೆಯ ಜನ ನನಗೆ ಡಿಜಿಟಲ್ ಚಾಟಿ ಬೀಸಿದ್ದಾರೆ. ನಿಜಕ್ಕೂ ನನಗೆ ಅತ್ಯಂತ ನೋವಾಗಿದೆ. ಇಷ್ಟೆಲ್ಲಾ ಶ್ರಮ ಬಿದ್ದರೂ ನಾವೂ ಹಿಂದೆ ಬಿದ್ದಿದ್ದೇವೆ ಎಂಬ ಸುದ್ದಿ ಹರಡಿದಂತಾಗಿದೆ? ಅದೇನೆ ಇರಲಿ. ಸರಿಪಡಿಸಿ ಕೊಳ್ಳೋಣ’

 ದಿಶಾ ಸಭೆ ಹೇಗಿರಬೇಕು. ಯಾವ ವಿಷಯಗಳನ್ನು ಚರ್ಚೆ ಮಾಡಬೇಕು ಎಂಬ ಬಗ್ಗೆ ಕೆಳಕಂಡ 9 ಅಂಶಗಳ ಬಗ್ಗೆ ಶ್ರೀ ಜಿ.ಎಸ್.ಬಸವರಾಜ್‌ರವರು ತಮ್ಮದೇ ಆದ ಒಂದು ಮಾರ್ಗಸೂಚಿ ಪ್ರಕಟಿಸಿದ್ದಾರೆ. 3 ನೇ ದಿಶಾ ಸಮಿತಿಯಲ್ಲಿ ತುಮಕೂರು ಜಿಐಎಸ್ ಪೋರ್ಟಲ್ ಉದ್ಘಾಟನೆ ಮಾಡಿದ ಬಸವರಾಜ್‌ರವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ.

ವಿಶ್ವದ ಜನತೆ ತುಮಕೂರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ನೋಡಬಹುದು. ಸಲಹೆ ನೀಡಬಹುದು ಮತ್ತು ತಪ್ಪಾಗಿದ್ದಲ್ಲಿ ಮಾಹಿತಿಯನ್ನು ನೀಡಬಹುದು. ಜಿಲ್ಲೆಯ ಪ್ರತಿಯೊಂದು ಗ್ರಾಮದ ಜನತೆಯೂ ಯೋಜನೆಗಳ ಬಗ್ಗೆ ವಿಶ್ಲೇಷಣೆ ಮಾಡಬಹುದು. ಇಂತಹ ಡಿಜಿಟಲ್ ಪ್ಲಾಟ್ ಫಾರಂ ರಚಿಸಿದ ಪ್ರಥಮ ಜಿಲ್ಲೆಯಾಗಲಿದೆ ಎಂಬ ಅರಿವು ನಮ್ಮದಾಗಿದೆ.

ದೇಶದಲ್ಲಿ ನಮ್ಮ ಜಿಲ್ಲೆಗಿಂತಲೂ ಚೆನ್ನಾಗಿ, ಯಾವ ಸಂಸದರಾದರೂ ದಿಶಾ ಸಮಿತಿಯಲ್ಲಿ ಉತ್ತಮ ಕ್ರಮಕೈಗೊಂಡಿದ್ದಲ್ಲಿ, ಜಾರಿಗೊಳಿಸಿದ್ದಲ್ಲಿ, ಅದನ್ನು ಅಧ್ಯಯನ ಮಾಡುವ ಚಿಂತನೆ ನಮ್ಮದಾಗಿದೆ. ಏಕೆಂದರೆ ಮರಕ್ಕಿಂತ ಮರ ದೊಡ್ಡದು’ ಅಲ್ಲವೇ?.

 ಇಂದಿನ ಸಭೆಯ ನಡವಳಿಕೆಯೂ ಸೇರಿದಂತೆ, ಇದೂವರೆಗೂ ನಡೆದಿರುವ 6 ದಿಶಾ ಸಭೆಗಳ ನಿರ್ಣಯಗಳು, ಅನುಪಾಲಾನಾ ವರದಿ ಮತ್ತು 7 ನೇ ಸಭೆಯ ನಡವಳಿಕೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ದಿಕ್ಸೂಚಿ’ ಆಗಲಿದೆ.

‘ಎಲ್ಲವನ್ನೂ ಡಿಜಿಟಲ್ ಮಾಡಿ, ವರದಿಯನ್ನು ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೂ ಸಲ್ಲಿಸಲಾಗುವುದು ಎಂಬ ಅಂಶವನ್ನು ಜಿಲ್ಲೆಯ ಜನರಿಗೆ ಶ್ರೀ ಜಿ.ಎಸ್.ಬಸವರಾಜ್‌ರವರು ಮನವರಿಕೆ ಮಾಡುವ ಸ್ತಿತಿ ಬಂದಿದೆ’

ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್, ದಿಶಾ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶುಭ ಕಲ್ಯಾಣ್, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನಿರ್ದೇಶಕರಾದ ಶ್ರೀ ಪ್ರಭು  ಸೇರಿದಂತೆ ತುಮಕೂರು ಜಿಲ್ಲೆಯ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಗುರಿ ಒಂದೇ! ತುಮಕೂರು ಜಿಲ್ಲೆಯನ್ನು ’ಡಿಜಿಟಲ್ ಡೇಟಾ ಜಿಲ್ಲೆ’ ಮತ್ತು ’ಒಂದು ಜಿಲ್ಲೆ- ಒಂದು ನಕ್ಷೆ’ ಯಾಗಿ ಘೋಶಿಸುವುದಾಗಿದೆ.

 ಮತ್ತೊಮ್ಮೆ ಅಧಿಕಾರಿಗಳಲ್ಲಿ ನಮ್ರತೆಯ ಮನವಿ, ಕೇಂದ್ರ ಸರ್ಕಾರದಿಂದ ತಮ್ಮ ಇಲಾಖೆಯಡಿಯಲ್ಲಿ ಮಂಜೂರಾಗಿರುವ ಪ್ರತಿಯೊಂದು ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿ. 5 ನೇ ದಿಶಾ ಸಮಿತಿ ಸಭೆ ನಿರ್ಣಯದಂತೆ ಸುಮಾರು 15 ಪುಟಗಳ ಇಲಾಖಾವಾರು ಯೋಜನೆಗಳ ಪಟ್ಟಿ ನೀಡಿದ್ದೇವೆ. ಇದರಲ್ಲಿ ಬಿಟ್ಟುಹೋಗಿರುವ ಇತರೆ ಯೋಜನೆಗಳನ್ನು ನೀಡುವ ಹೊಣೆಗಾರಿಕೆ ಆಯಾ ಇಲಾಖೆಯ ಅಧಿಕಾರಿಗಳದ್ದಾಗಿದೆ.

‘ಪ್ರತಿಯೊಂದು ಇಲಾಖೆಯ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು, ಒಂದೇ ಪೋರ್ಟಲ್‌ನಲ್ಲಿ ಬರಲೇ ಬೇಕು, ಇದು ತುಮಕೂರು ಜಿಲ್ಲೆ ದಿಶಾ ಸಮಿತಿ ಘೋಷಣೆಯೂ ಹೌದು. 6 ಮತ್ತು 7 ನೇ ಸಭೆ ನಡವಳಿಕೆ ಅತ್ಯಂತ ಮಹತ್ವದ್ದಾಗಿದೆ. ದೇಶದ ಪ್ರಧಾನಿಯವರ ಕಚೇರಿಗೂ ತಲುಪಲಿದೆ. ಜಿಲ್ಲೆಯ, ವಿಶ್ವದ ಜನತೆಗೂ ಬೆರಳ ತುದಿಯಲ್ಲಿ ದೊರೆಯಲಿದೆ’

ಇದೂವರೆಗೂ ಚರ್ಚಿಸಿರುವ ತುಮಕೂರು ಜಿಲ್ಲಾ ಮಟ್ಟ ದಿಶಾ ಸಮಿತಿಯ ಪ್ರಮುಖ ಅಂಶಗಳು.

  1. ಕೇಂದ್ರ ಸರ್ಕಾರದ ಅನುದಾನವನ್ನು ಕಾಲಮಿತಿಯಲ್ಲಿ ಸಮರ್ಪಕ ಬಳಕೆ ಮಾಡಲು ಇಲಾಖೆಗಳ ಸಮನ್ವಯತೆ.
  2. ಯೋಜನೆಯ ಪಾರದರ್ಶಕತೆ.
  3. ಕ್ಲಿಕ್ ಮಾಡಿದ ತಕ್ಷಣ ಡಿಜಿಟಲ್ ಡೇಟಾ.
  4. ತುಮಕೂರು ಜಿಐಎಸ್ ಪೋರ್ಟಲ್ ಮೂಲಕ ಯೋಜನಾವಾರು ಜಿಐಎಸ್ ಲೇಯರ್.
  5. ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯ, ಪ್ರತಿಯೊಂದು ಯೋಜನೆಯ ತಾಜಾ ಲೆಕ್ಕ.

(ಪ್ರಗತಿಯಲ್ಲಿರುವ, ನೆನೆಗುದಿಗೆ ಬಿದ್ದಿರುವ, ಮಂಜೂರಾತಿ ಹಂತದಲ್ಲಿರುವ, ಹೊಸ ಪ್ರಸ್ತಾವನೆಗಳು ಮತ್ತು ಹಣ ಬಿಡುಗಡೆ, ಖರ್ಚು ಮತ್ತು ಬಾಕಿ ಹಣದ ಮಾಹಿತಿ)

6.ಪ್ರತಿಯೊಬ್ಬ ಸಾರ್ವಜನಿಕರು ಸಹ ಕುಳಿತಲ್ಲೆ, ಬೆರಳತುದಿಯಲ್ಲಿ ಯೋಜನೆಯ ವಿಶ್ಲೇಷಣೆ.

7.ಆಯಾ ಜಿಲ್ಲೆಗೆ ಹೊಸದಾಗಿ ಕೇಂದ್ರ ಸರ್ಕಾರದಿಂದ, ಯಾವ ಇಲಾಖೆಯಡಿಯಲ್ಲಿ, ಯಾವ ಯೋಜನೆ ಮಂಜೂರು ಮಾಡಿಸಬಹುದು ಎಂಬ ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್.

8.ಅಭಿವೃದ್ಧಿ ಇ- ಲೈಬ್ರರಿ ಮತ್ತು ಲೈಬ್ರರಿ ಸ್ಥಾಪನೆ.

9.ಪ್ರತಿಯೊಂದು ಯೋಜನೆಯ ದುರುಪಯೋಗದ ತಡೆಗಟ್ಟುವುವಿಕೆ.