22nd December 2024
Share

TUMAKURU:SHAKTHIPEETA FOUNDATIN

ತುಮಕೂರು ಜಿಲ್ಲೆಗೆ ಪ್ರತಿಯೊಂದು ಇಲಾಖೆಯಿಂದ, ಪ್ರತಿಯೊಂದು ಯೋಜನೆಯಡಿ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಅನುದಾನವನ್ನು ಮಾರ್ಚ್ 31 ರೊಳಗೆ ಶೇ 100 ರಷ್ಟು ಬಳಸಲು ಖಡಕ್ ಸೂಚನೆಯನ್ನು ದಿಶಾ ಸಮಿತಿ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅಧಿಕಾರಿಗಳಿಗೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿನಾಂಕ:22.01.2021 ರಂದು ನಡೆದ ದಿಶಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಮಕೂರು ಜಿಲ್ಲೆಯ ಇತಿಹಾಸದಲ್ಲಿ, ಒಂದೇ ಕಡೆ ಎಲ್ಲಾ ಇಲಾಖೆಗಳ, ಎಲ್ಲಾ ಯೋಜನೆಗಳ ಡಿಜಿಟಲ್ ಮಾಹಿತಿ ಲಭ್ಯವಾಗಲಿದೆ. ಯೋಜನಾವಾರು ಪರಿಣಿತರು, ಮಾಧ್ಯಮಗಳು ಹಾಗೂ ಆಸಕ್ತರು ತಮ್ಮ ಸಲಹೆಗಳನ್ನು ಪೋರ್ಟಲ್‌ನಲ್ಲಿ ದಾಖಲೆ ಮಾಡಿದರೆ, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಹರಿಸಲು ಅಥವಾ ಕಾರಣಗಳು ವಸ್ತು ಸ್ಥಿತಿ ಬಗ್ಗೆ ಡಿಜಿಟಲ್ ದಾಖಲೆ ಮಾಡುವ ಮೂಲಕ ಶ್ರಮಿಸುವ ಕಾರ್ಯಕ್ಕೆ ಮುಂದಿನ ದಿಶಾ ಸಭೆಯಲ್ಲಿ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ತಿಪ್ಪೆಸ್ವಾಮಿಯವರು ತುಮಕೂರು ಜಿಐಎಸ್ ಪೋರ್ಟಲ್ ಲೋಕಾರ್ಪಣೆ ಮಾಡಿ, ಸಾಮಾನ್ಯ ಜನರ ಅಭಿಪ್ರಾಯಗಳನ್ನು ಡಿಜಿಟಲ್ ದಾಖಲೆ ಮಾಡಿದರೆ ಸಾಲದು, ಅಭಿಪ್ರಾಯಗಳಿಗೆ ಸೂಕ್ತ ಉತ್ತರ ನೀಡಬೇಕಾದರೆ ಅಭಿವೃದ್ಧಿ ವಾರ್ ರೂಂ’ ಆರಂಭಿಸಬೇಕು ಎಂಬ ಸಲಹೆಗೆ ಉತ್ತರಿಸಿದರು.

ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ರವರಾದ ಶ್ರೀಮತಿ ಶುಭಕಲ್ಯಾಣ್‌ರವರು ಜಿಲ್ಲಾ ಪಂಚಾಯತ್ ಕಟ್ಟಡದ ಮೇಲ್ಚಾವಣೆಯಲ್ಲಿ ಒಂದು ಸಭಾಂಗಣ ಖಾಲಿ ಇದೆ. ಇಲ್ಲಿ ಅಭಿವೃದ್ಧಿ ಗ್ರಂಥಾಲಯ. ಅಭಿವೃದ್ಧಿ ಇ-ಗ್ರಂಥಾಲಯ ಮತ್ತು ಅಭಿವೃದ್ಧಿ ವಾರ್ ರೂಂ ಮಾಡಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.

ಶಕ್ತಿಪೀಠ ಫೌಂಡೇಷನ್ ಮನವಿ.

ಪ್ರತಿಯೊಂದು ಇಲಾಖೆಗಳ, ಪ್ರತಿಯೊಂದು ಯೋಜನೆಗಳ ಮಾಹಿತಿ ಯೋಜನಾವಾರು ಕಡತದಲ್ಲಿ ದೊರೆಯಲಿದೆ. ಅದೇ ಮಾಹಿತಿ ಡಿಜಿಟಲ್ ರೂಪದಲ್ಲಿಯೂ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರತಿಯೊಂದು ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿದ ಯೋಜನೆಗಳ ಅನುಪಾಲನಾ ವರದಿ ಮತ್ತು ಕೈಗೊಂಡ ಕ್ರಮಗಳ ಮಾಹಿತಿಯೂ ಒಂದೇ ಕಡೆ ದೊರೆಯಲಿದೆ.

ಮುಂದಿನ ವರ್ಷದಿಂದ ಆರಂಭದಿಂದಲೇ,  ಯಾವ ಯೋಜನೆಗೆ ಎಷ್ಟು ಹಣ ಮಂಜೂರಾಗಿದೆ, ಪ್ರತಿ ತಿಂಗಳ ಪ್ರೋಗ್ರೆಸ್ ಏನು ಎಂಬ ಬಗ್ಗೆ ಅಗಿದ್ದಾಂಗ್ಗೆ ಅಫ್‌ಡೇಟ್ ಮಾಡುವ ಕ್ರಮವನ್ನು ಅಭಿವೃದ್ಧಿ ವಾರ್ ರೂಂ ಟೀಂ ಮಾಡಲಿದೆ. ಮುಂದಿನ ಸಭೆಯ ವೇಳೆಗೆ ಅಭಿವೃದ್ಧಿ ವಾರ್ ರೂಂನ ರೂಪುರೇಷೆಗಳನ್ನು ಸಹ ಸಿದ್ಧಪಡಿಸಲು ಅಧಿಕಾರಿಗಳು ಈಗಾಗಲೇ ಕಾರ್ಯೋನುಮುಖರಾಗಿದ್ದಾರೆ.

ಪರಿಣಿತರು, ಅಭಿವೃದ್ಧಿ ಆಸಕ್ತರು, ಮಾಧ್ಯಮಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಬಹಿರಂಗ ಮನವಿ ಮಾಡಲಾಗಿದೆ. ಈ ಮಾದರಿ ಚಿಂತನೆ ದೇಶದಲ್ಲಿ ಯಾವ ಜಿಲ್ಲೆಯಲ್ಲಾದರೂ ಇದ್ದಲ್ಲಿ, ಉತ್ತಮವಾಗಿದ್ದಲ್ಲಿ ಬೆಸ್ಟ್ ಪ್ರಾಕ್ಟೀಸಸ್ ಆಗಿ ಕೈಗೊಳ್ಳಲಾಗುವುದು. ಸೂಕ್ತ ಸಲಹೆಗಳಿಗೆ ಸೂಕ್ತ ಬಹುಮಾನಗಳನ್ನು ಶಕ್ತಿಪೀಠ ಫೌಂಡೇಷನ್ ನೀಡಿ ಗೌರವಿಸಲಾಗುವುದು.

ದಿನಾಂಕ:21.01.2021 ರಂದು ಅಧಿಕಾರಿಗಳಾದ ಶ್ರೀ ಮೋಹನ್ ಕುಮಾರ್‌ರವರು, ಶ್ರೀ ಕೃಷ್ಣಮೂರ್ತಿಯವರು ಮತ್ತು ನಾನು ಈ ಬಗ್ಗೆ ಚರ್ಚಿಸಿದ್ದೆವು. ಕಟ್ಟಡವನ್ನು ಪರಿಶೀಲನೆ ಮಾಡಿದ್ದೆವು. ನಂತರ ಸಿಇಓ ರವರೊಂದಿಗೂ ಅಧಿಕಾರಿಗಳು ಸಮಾಲೋಚನೆ ಮಾಡಿದ್ದರು. ಅವರು ಸಹ ಒಳ್ಳೆಯ ಚಿಂತನೆ ಮಾಡೋಣ ಎಂಬ ಸಲಹೆ ನೀಡಿದ್ದರಂತೆ.

‘ಆದರೇ ಇದೆ ವಿಚಾರವನ್ನು ಪ್ರಸ್ತಾಪ ಮಾಡುವ  ಮೂಲಕ ವಿಧಾನಪರಿಷತ್ ಸದಸ್ಯರಾದ ಶ್ರೀ ತಿಪ್ಪೆಸ್ವಾಮಿಯವರು ಚಿಂತನೆ ಮಾಡಿದ್ದ ಎಲ್ಲರನ್ನೂ ಚಕಿತಗೊಳಿಸಿದ್ದು ಒಂದು ಪವಾಡದಂತಿತ್ತು. ನಿಜಕ್ಕೂ ನನಗಂತೂ ಆಶ್ಚರ್ಯವಾಗಿದೆ. ನಾವೆಲ್ಲರೂ ಒಬ್ಬರ ಮುಖವನ್ನು ಇನ್ನೊಬ್ಬರೂ ನೋಡಿಕೊಳ್ಳುತ್ತಿದ್ದೆವು’

ಶ್ರೀ ತಿಪ್ಪೆಸ್ವಾಮಿಯವರ ಅಭಿವೃದ್ಧಿ ವಾರ್ ರೂಂ ಪರಿಕಲ್ಪನಾ ವರದಿ ನೀಡುವುದು ಸೂಕ್ತವಾಗಿದೆ. ಇವರೊಂದಿಗೆ ಶೀಘ್ರದಲ್ಲಿಯೇ ಸಮಾಲೋಚನೆ ನಡೆಸಲಾಗುವುದು.

-ಕುಂದರನಹಳ್ಳಿ ರಮೇಶ್

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.