22nd November 2024
Share

TUMAKURU:SHAKTHUIPEETA FOUNDATION

ದಿನಾಂಕ:22.01.2021 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ 6 ನೇ ಸಭೆಗೆ ಕೇಂದ್ರ ಸರ್ಕಾರದ, ಅವರವರ ಇಲಾಖೆಯಡಿಯ ಯೋಜನೆಯ ಮಾಹಿತಿಯನ್ನು ಕಳುಹಿಸದೇ ಇರುವ ಅಧಿಕಾರಿಗಳಿಗೆ ಮತ್ತು ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ಹಾಗೂ ಸಭೆಗೆ ಹಾಜರಾಗಿದ್ದು ಅವರ ವಿಷಯ ಬಂದಾಗ ಹಾಜರಾಗಿ ಉತ್ತರ ಹೇಳದೆ ಇದ್ದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಲು ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸೂಚಿಸಿರುವುದರಿಂದ, ಅಂತಹ ಇಲಾಖಾ ಅಧಿಕಾರಿಗಳಿಗೆ  ನೋಟೀಸ್ ನೀಡಿ, ದಿನಾಂಕ:22.01.2021 ರಂದು ದಿಶಾ ಸಮಿತಿಗೆ ಮಾಹಿತಿ ನೀಡದ ಯೋಜನೆಗಳ/ಅಧಿಕಾರಿಗಳ ಜಿಐಎಸ್ ಲೇಯರ್ ಮಾಡಲು ಸಲಹೆ ನೀಡಲಾಗಿದೆ.

ಜಿಐಎಸ್ ಲೇಯರ್ ಮಾಡಿ ಸಾರ್ವಜನಿಕವಾಗಿ ಪ್ರಕಟಣೆ ಮಾಡುವುದರಿಂದ ಅಂತಹ ಅಧಿಕಾರಿಗಳಿಗೆ ಅವರ ಜವಾಬ್ಧಾರಿಯ  ಬಗ್ಗೆ ಜನರೇ ಅರಿವು ಮೂಡಿಸುವ ಮೂಲಕ ಅಭಿವೃದ್ಧಿ ಜಾಗೃತಿ ಮೂಡಿಸಲಿದ್ದಾರೆ. ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಗಮನಿಸಿ ಸೂಕ್ತ ಕ್ರಮಕೈಗೊಳ್ಳಲು ಅನೂಕೂಲವಾಗುತ್ತದೆ’

ನಿರ್ಧಿಷ್ಠ ಯೋಜನೆ ಹಾಗೂ ಅಂತವರ ಕಚೇರಿಯ ನಿರ್ಧಿಷ್ಟ ಸ್ಥಳ ಕ್ಷಿಕ್ ಮಾಡಿದ ತಕ್ಷಣ ಯೋಜನೆಯ ಮಾಹಿತಿ ದೊರೆಯುವಂತೆ ಇರಬೇಕು. ಇವರು ಯಾವ ಸಭೆಗಳಿಗೆ ಮಾಹಿತಿ ನೀಡಿಲ್ಲ ಅಥವಾ ಗೈರಾಗಿದ್ದಾರೆ ಎಂಬ ಡಿಜಿಟಲ್ ಮಾಹಿತಿಯೂ ಲಭ್ಯವಾಗಲಿದೆ.

ಜಿಐಎಸ್ ಲೇಯರ್ ಸಲಹೆ –1

ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯ ಹಾಗೂ ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯನ ಸಲಹೆ.

ದಿನಾಂಕ:22.01.2021  ರಂದು ದಿಶಾ ಸಮಿತಿಗೆ ಮಾಹಿತಿ ನೀಡದ ಯೋಜನೆಗಳ/ಅಧಿಕಾರಿಗಳ ಜಿಐಎಸ್ ಲೇಯರ್

ತುಮಕೂರು ಎನ್.ಆರ್.ಡಿ.ಎಂ.ಎಸ್‌ನವರು ಜಿಐಎಸ್ ಲೇಯರ್ ಮಾಡಬೇಕು? ದಿಶಾ ವಿಭಾಗದ ಅಧಿಕಾರಿ ಮತ್ತು ನೌಕರ ವರ್ಗದವರು ಮಾಹಿತಿ ನೀಡಬೇಕು.

– ಕುಂದರನಹಳ್ಳಿ ರಮೇಶ್