TUMAKURU:SHAKTHIPEETA FOUNDATION
ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಗಂಭೀರವಾದ ಚರ್ಚೆಯೊಂದು ನಡೆಯಿತು. ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಇಡೀ ದೇಶದ ಯಾವೊಂದು ಗ್ರಾಮ, ತಾಂಡಾ, ಕಾಲೋನಿಗಳಿಗೂ ಮತ್ತು ಇಡೀ ದೇಶದ ಯಾವುದೇ ಒಬ್ಬ ಬಡವರ ಮನೆಗೂ 2019 ರೊಳಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ಮಾತು ಕೇಳಬಾರದು ಎಂಬ ಒಂದು ಯೋಜನೆಯನ್ನು ಘೋಶಿಸಿದ್ದರು.
ತುಮಕೂರು ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಯಾವೊಂದು ಗ್ರಾಮ/ಬಡಾವಣೆ ಇಲ್ಲ.
ತುಮಕೂರು ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಒಂದೂ ಮನೆಯೂ ಇಲ್ಲ.
ಎಂಬ ಘೋಷಣೆ ಮಾಡಬಹುದೇ? ಎಂಬ ಕುಂದರನಹಳ್ಳಿ ರಮೇಶ್ ಪ್ರಶ್ನೆಗೆ ಉತ್ತರವಿಲ್ಲ.
ಎಷ್ಟು ಗ್ರಾಮಗಳಿಗೆ, ಎಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ಖಚಿತವಾದ ಮಾಹಿತಿ ನೀಡಿ ಎಂಬ ಪ್ರಶ್ನೆಗೂ ಸಮರ್ಪಕವಾದ ಉತ್ತರ ಯಾವೊಂದು ಇಲಾಖೆಯಿಂದಲೂ ದೊರೆಯಲಿಲ್ಲ. ಮುಂದಿನ ದಿಶಾ ಸಭೆಯ ವೇಳೆಗೆ ಬೆಸ್ಕಾಂ, ಗ್ರಾಮಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಸಮೀಕ್ಷೆ ಮಾಡಿ ಗ್ರಾಮವಾರು ಹಾಗೂ ಬಡವಾಣೆವಾರು
ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮ- ವಿದ್ಯುತ್ ಸಂಪರ್ಕ ಇಲ್ಲದ ಮನೆ ಲೆಕ್ಕ ಕೊಡಲು ಸಂಸದ ಶ್ರೀ ಜಿ.ಎಸ್.ಬಸವರಾಜ್ ಸೂಚಿಸಿದ್ದಾರೆ.
ಒಂದು ವೇಳೆ ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮಗಳು ಮತ್ತು ವಿದ್ಯುತ್ ಸಂಪರ್ಕ ಇಲ್ಲದ ಮನೆಗಳು ಇದ್ದಲ್ಲಿ ಜಿಐಎಸ್ ಲೇಯರ್ ಮಾಡಲು ಖಡಕ್ ಆಗಿ ಸೂಚಿಸಲಾಗಿದೆ. ಈ ಕೆಳಕಂಡ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಪ್ರಾಮಾಣಿಕವಾಗಿ ಶ್ರಮಿಸುವುದು ಅಗತ್ಯವಾಗಿದೆ.
- ತುಮಕೂರು ಜಿಲ್ಲಾ ಪಂಚಾಯತ್.
- ಜಿಲ್ಲಾ ನಗರಾಭಿವೃದ್ಧಿ ಕೋಶ ತುಮಕೂರು.
- ಬೆಸ್ಕಾಂ.
- ಗ್ರಾಮಪಂಚಾಯತ್.
- ನಗರ ಸ್ಥಳೀಯ ಸಂಸ್ಥೆಗಳು
- ಎನ್.ಆರ್.ಡಿ.ಎಂಸ್
ದಿಶಾ ಸಮಿತಿಯಲ್ಲಿ ಹರಿಕಥೆ ಕೇಳಲು ನಾವುಗಳು ಬಂದಿಲ್ಲ, ಸರಿಯಾಗಿ ಕೆಲಸ ಮಾಡಿ ಸ್ವಾಮಿ, ಖಚಿತವಾದ ಮಾಹಿತಿ ನೀಡಿ, ಕೆಲಸ ಮಾಡಿದ ಅಧಿಕಾರಿಗಳ ಬೆನ್ನು ತಟ್ಟುತ್ತೇವೆ? ಕೆಲಸ ಮಾಡದ ಅಧಿಕಾರಿಗಳಿಗೆ ತಮ್ಮ ಕರ್ತವ್ಯದ ಅರಿವು ಮೂಡಿಸುತ್ತೆವೆ. ಎಂಬ ಕಟುಶಬ್ಧಗಳು ದಿಶಾ ಸಮಿತಿಯ ನಾಮನಿರ್ದೇಶನ ಸದಸ್ಯರ ಒಕ್ಕೋರಲ ಅಭಿಪ್ರಾಯವಾಗಿತ್ತು.