22nd January 2025
Share

TUMAKURU:SHAKTHIPEETA FOUNDATION

ದೆಹಲಿಯಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಷನಲ್ ಕಾರ್ಯದರ್ಶಿಯವರಾದ ಶ್ರೀ ಮತಿ ಆಲ್ಕ ಉಪಾಧ್ಯಾಯ ಅವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪಿ.ಎಂ.ಜಿ.ಎಸ್.ವೈ ರಸ್ತೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಕರ್ನಾಟಕ ರಾಜ್ಯ ಸರ್ಕಾರ ಪಿಎಂಜಿಎಸ್‍ವೈ-1 ರಲ್ಲಿ 16357 ಕಿ.ಮೀ, ಪಿಎಂಜಿಎಸ್‍ವೈ-2 ರಲ್ಲಿ 2241 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಳಿಸಿದೆ ಮತ್ತು ಪಿಎಂಜಿಎಸ್‍ವೈ-3 ರಲ್ಲಿ 5612.50 ಕಿ.ಮೀ ರಸ್ತೆಗಳ ಅಭಿವೃದ್ಧಿ ಆರಂಭಿಸಿದೆ ಎಂಬ ಮಾಹಿತಿ ಪಡೆಯಲಾಯಿತು. ಮುಂದೆ ಕೈಗೊಳ್ಳಬಹುದಾದ ರಸ್ತೆಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.