22nd December 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ಸ್ಥಾಪನೆಯಾಗಿರುವ ಪ್ರಮುಖ ಉದ್ದೇಶವೇÀ 108 ಶಕ್ತಿದೇವತೆಗಳ ಸಮ್ಮುಖದಲ್ಲಿ

  1. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆದ ರಾಜ್ಯಾವಾಗಬೇಕು.
  2. ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ಸಾಮಾಜಿಕ ನ್ಯಾಯ.
  3. ಹೊರದೇಶಗಳ ಹೂಡಿಕೆಯಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ಸಾಮಾಜಿಕ ನ್ಯಾಯ.
  4. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿ ನದಿ ನೀರಿನಲ್ಲೂ ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ಸಾಮಾಜಿಕ ನ್ಯಾಯ ಒದಗಿಸುವುದಾಗಿದೆ.
  5. ಅಭಿವೃದ್ದಿಗಾಗಿಯೇ ವಿಷನ್ ಗ್ರೂಪ್‍ಗಳ ಸಮಾಲೋಚನೆಗಾಗಿ ಒಂದು ಕ್ಯಾಂಪಸ್ ಸ್ಥಾಪನೆ.

ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಕರ್ನಾಟಕ ಭವನದ ರೆಸಿಡೆಂಟ್ ಕಮೀಷನರ್ ಆಗಿರುವ ಹಿರಿಯ ಐಎಎಸ್ ಅಧಿಕಾರಿ ಶ್ರೀಮತಿ ಅಮಿತಾ ಪ್ರಸಾದ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಶ್ರೀ ಅಮಿತಾ ಪ್ರಸಾದ್ ರವರು 1991 ರಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿದ್ದಾಗ ನನ್ನ ಹುಟ್ಟೂರು  ಕುಂದರನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮ’ ವಾಗಿ ಮಾಡಲು ಒಂದು ಯೋಜನೆಯನ್ನು ಅವರಿಗೆ ಸಲ್ಲಿಸಿದ್ದು ನನೆಪಿಗೆ ಬಂತು. ಇಂದು ಜನವರಿಯಲ್ಲಿ ಅವರು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಈ ಮೇಲ್ಕಂಡ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದು ಒಂದು ಕಾಕತಾಳೀಯವಾಗಿತ್ತು.

ಕೇಂದ್ರ ಸರ್ಕಾರದಿಂದ ಹೆಚ್ಚಿಗೆÀ ಅನುದಾನ ಪಡೆಯಲು ಕೈಗೊಳ್ಳ ಬೇಕಾಗಿರುವ ಕ್ರಮಗಳ ಮತ್ತು ರೂಪುರೇಷೆಗಳ ಬಗ್ಗೆ ಒಂದು ‘ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಿದರೇ ಹೇಗೆ ಎಂಬ ಚರ್ಚೆ ನಡೆಯಿತು. ಅವರ ಅನುಭವದ ಮಾತುಗಳು ನಿಜಕ್ಕೂ ಅರ್ಥಗರ್ಬಿತವಾಗಿದ್ದವು.

ದೆಹಲಿಯಿಂದ ಮನೆಗೆ ಬಂದು ಅಂದು ಅವರಿಗೆ ನೀಡಿದ ಪರಿಕಲ್ಪನಾ ವರದಿಯನ್ನು ಇಡೀ ರಾತ್ರಿ ಹುಡುಕಿ ತೆಗೆಯಲಾಯಿತು. ನನ್ನ ಕಡತಗಳ ಕಣಜದಲ್ಲಿ ಅಂತೂ ಇಂತು ಆ ನಕಲು ಪ್ರತಿ ಸಿಕ್ಕಿದ್ದು ನಿಜಕ್ಕೂ ಅದ್ಭುತ ಎನಿಸಿತು.

ಈ ವರದಿ ಬಗ್ಗೆ ನನ್ನ ಅನುಭವದ ವರದಿ ಮಾಡಬೇಕು ಎನಿಸಿದೆ. ನಮ್ಮೂರಿನ ಜನರು, ನನ್ನನ್ನು ಕಲ್ಲಿನ ಕೆತ್ತನೆಯ ಹಾಗೆ ನೀಡಿರುವ ಕಾಟವೇ ಒಂದು ಗ್ರಂಥವಾಗಲಿದೆ. ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ಇಡುವ ಪಾಠ ಕಲಿಸಿದೆ. ಅವರಿಗೆಲ್ಲಾ ಧನ್ಯವಾದಗಳನ್ನು ಹೇಳಲೇ ಬೇಕಿದೆ.