22nd November 2024
Share
G.S.BASAVARAJ, KULAKARNI, MANOHAR ROTTI & KUNDARANAHALLI RAMESH

TUMAKURU:SHAKTHIPEETA FOUNDATION

ದಿನಾಂಕ:07.01.1997 ರಂದು ತುಮಕೂರಿನ ಪ್ರವಾಸಿ ಮಂದಿರದಲ್ಲಿ ಅಪ್ನಾಸ್(ಅಭಾವ ಪೀಡಿತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ) ಎಂಬ ಸಂಸ್ಥೆಗೆ ಜನ್ಮ ದೊರೆಯಿತು. ನಾಳೆ ಶುಕ್ರವಾರಕ್ಕೆ 25 ವರ್ಷ ತುಂಬಲಿದೆ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಅಪ್ನಾಸ್ ಸಮಿತಿ ಅಧ್ಯಕ್ಷರಾದರೆ, ನಾನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದೆ, ಅಂದಿನ ಸಭೆಯಲ್ಲಿ ಭಾಗವಹಿಸಿದ್ದವರು ಈಗಿನ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮಾಜಿ ಲೋಕಸಭಾ ಸದಸ್ಯರಾದ ದಿ.ಎಸ್.ಮಲ್ಲಿಕಾರ್ಜುನಯ್ಯನವರು, ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಭಾಸ್ಕರಪ್ಪನವರು ಮತ್ತು ಇತರರು.

ಅಂದು ನಾವು ಪ್ರಭಲವಾಗಿ ಪ್ರತಿಪಾದಿಸಿದ್ದು ನೇತ್ರಾವತಿ ಮತ್ತು ಭಧ್ರಾ ಮೇಲ್ದಂಡೆ ಯೋಜನೆ ಜಾರಿ, ನೇತ್ರಾವತಿ ನದಿಯ ಉಪನದಿಯಾದ ಎತ್ತಿನ ಹೊಳೆ ಯೋಜನೆ ಮತ್ತು ಭಧ್ರಾ ಮೇಲ್ದಂಡೆ ಇಂದು ಜನರ ಮುಂದೆ ಸಾಕ್ಷಿಯಾಗಿ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಇಂದು ಇಡೀ ರಾಜ್ಯದ ನೀರಾವರಿ ಯೋಜನೆಗಳ ಕಡತದ ಅನುಸರಣೆ ನನಗೆ ಜೀವನದಲ್ಲಿ ತೃಪ್ತಿ ತಂದಿದೆ.

ದೇಶದ ನದಿ ಜೋಡಣೆಯ ಪ್ರಾತ್ಯಾಕ್ಷಿಕೆಯನ್ನು ಶಕ್ತಿ ಪೀಠ ಕ್ಯಾಂಪಸ್ ನಲ್ಲಿ ಮಾಡುತ್ತಿರುವುದು, ಜಲಶಕ್ತಿ ಮ್ಯೂಸಿಯಂ ಸ್ಥಾಪನೆಗೆ ಅಧ್ಯಯನ, ರಾಜ್ಯದ ನದಿ ಜೋಡಣೆ ಕನಸು ಇವೆಲ್ಲಾ ನನಗೆ  ಸ್ವರ್ಗವೇ ಸಿಕ್ಕಿದಂತಾಗಿದೆ. ಹಣದ ಅಭಾವದಿಂದ ಯೋಜನೆ ಕುಂಟುತ್ತಿರ ಬಹುದು, 

ಇಂದು ಈ ಎರಡು ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯಾಗಿ ಜಾರಿ ಮಾಡಿಸಲು ಕಡತದ ಅನುಸರಣೆ ಮಾಡಲು ಉಳಿದಿರುವುದು ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು. ಎಸ್.ಮಲ್ಲಿಕಾರ್ಜುನಯ್ಯನವರು ಈ ಎರಡು ಯೋಜನೆ ಜಾರಿಗೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದ್ದು ಇತಿಹಾಸ.

ಪರಮಶಿವಯ್ಯನವರು ನೀರಾವರಿ ಯೋಜನೆಗಳ ಕೊರಗಿನಲ್ಲಿಯೇ ಸ್ವರ್ಗಸ್ಥರಾದರು. ನಾವು ಕಳೆದವಾರ ದೆಹಲಿಯಲ್ಲಿ ಜಲಶಕ್ತಿ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ನಡೆಸಿ ಬರುವಾಗ ಶ್ರೀ ಜಿ.ಎಸ್.ಬಸವರಾಜ್ ರವರು, ನೋಡ್ರಿ ರಘೋತ್ತಮ ರಾಯರೇ ಕುಂದರನಹಳ್ಳಿ ರಮೇಶ್ ಭದ್ಧತೆಗೆ ನಿಜಕ್ಕೂ ಅಭಿನಂದನೆ ಸಲ್ಲಿಸಲೇ ಬೇಕು. ಪರಮಶಿವಯ್ಯನವರು ಸತ್ತು ಸ್ವರ್ಗದಲ್ಲಿ ನೋಡುತ್ತಿರ ಬಹುದು. ನಿಮ್ಮ ಡ್ರಾಪ್ಟಿಂಗ್, ರಮೇಶ್ ಕಡತದ ಅನುಸರಣೆ ನಿಜಕ್ಕು ಅದ್ಭುತ ಎಂದು ಹೇಳಿದಾಗ ನನಗೆ ಕಣ್ಣಲ್ಲಿ ನೀರು ಬಂತು.

ನೋಡಿ ಸಾರ್ ನೀವೂ 5 ಸಲ ಎಂಪಿ ಆಗದಿದ್ದರೆ, ಅಧಿಕಾರ ಇರಲಿ ಮತ್ತು ಇಲ್ಲದಿರಲಿ ನಾವು ಕರೆದ ಆಫೀಸ್‍ಗೆ ಬರದೆ ಇದ್ದರೆ, ಈ ಯೋಜನೆಗಳ ಕಡತದ ಅನುಸರಣೆ ಅಷ್ಟು ಸುಲಭವಲ್ಲ ಸಾರ್. ನಿಮ್ಮ ಬದ್ಧತೆಗೆ ರಾಜ್ಯದ ಜನ ಅಭಿನಂದನೆ ಸಲ್ಲಿಸಬೇಕು. ನಿಮ್ಮ ಹಣೆಬರಹ ಕೈಕೊಟ್ಟಿತು ಒಂದು ಭಾರಿ ಸಚಿವರಾಗಿದ್ದರೆ, ಆ ಕತೆಯೇ ಬೇರೆ ಆಗತಿತ್ತು ಎಂದಾಗ ಹಣೆಬರಹ ಯಾರಪ್ಪನದು ಎಂದರು.

ದೆಹಲಿಯಿಂದ ಬಂದ ನಂತರ ಬೆಂಗಳೂರಿಗೆ ಹೋಗಿ ಜಲಸಂಪನ್ಮೂಲ ಅಪರ ಮುಖ್ಯ ಕಾರ್ಯದಶಿಯವರಾದ ಶ್ರೀ ರಾಕೇಶ್ ಸಿಂಗ್ ರವರ ಜೊತೆ ಸಮಾಲೋಚನೆ ನಡೆಸಲು ಹೋದೆವು. ಅವರು ಸಿಗಲಿಲ್ಲ, ಕಾರ್ಯದರ್ಶಿ ಶ್ರೀ ಕುಲಕರ್ಣಿರವರ ಜೊತೆ ಸಮಾಲೋಚನೆ ನಡೆಸಿ, ದೆಹಲಿಯಲ್ಲಿ ಕೊಳೆಯುತ್ತಿರುವ ರಾಜ್ಯದ ಪ್ರತಿಯೊಂದು ನೀರಾವರಿ ಯೋಜನೆಗಳ ಕಡತಗಳ ಟಿಪ್ಪಣೆ ಸಿದ್ಧಪಡಿಸಿ ನೀಡಲು ಸಂಸದರು ತಿಳಿಸಿದರು.

 ಮಾನ್ಯ ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ರವರ ಜೊತೆಯಲ್ಲಿ ರಾಜ್ಯದ ಹಲವಾರು ನೀರಾವರಿ ಯೋಜನೆಗಳ ಕಡತಗಳ ಬಗ್ಗೆ ಸಮಾಲೋಚನೆ ನಡೆಸಿದರು. ನನಗೆ ಇನ್ನೂ ಅಧಿಕಾರ ಇರುವುದು ಕೇವಲ ಎರಡು ವರ್ಷ, ನೀರಾವರಿ ತಜ್ಞ ಶ್ರೀ ಬಸವರಾಜ್ ಬೊಮ್ಮಾಯಿ ರವರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾರೆ ಈಗ ಆಗದೇ ಇದ್ದರೆ ಕೆಲವು ಯೋಜನೆಗಳು ಭಾಷಣದಲ್ಲಿಯೇ ಉಳಿಯುತ್ತವೆ ಎಂಬ ಮನದಾಳದ ಮತ್ತು ಕಟುಸತ್ಯದ ಮಾತು ಆಡಿದರು.

ಕೇಂದ್ರದಲ್ಲಿ ನನೆಗುದಿಗೆ ಬಿದ್ದಿರುವ ಮತ್ತು ಚಾಲನೆಯಲ್ಲಿರುವ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳ ಮೌಲ್ಯಮಾಪನ ವರದಿ ಸಿದ್ಧಪಡಿಸುವುದೇ 25 ವರ್ಷದ ಸಂಭ್ರಮಾಚರಣೆ.

ನೋಡಿ ಕಾಕತಾಳೀಯ ಅಪ್ನಾಸ್ ಗೆ 25 ವರ್ಷ ತುಂಬಿದ ದಿನವೇ, ದಿನಾಂಕ:07.01.2022  ರಂದೇ ನನ್ನ ಮಗನ ಎಂ.ಟೆಕ್. 3 ನೇ ಸೆಮಿಸ್ಟರ್ ಪರೀಕ್ಷೆ ಮುಗಿಯಲಿದೆ. ಅವನು ಡಾಟಾ ಅನಾಲೀಸಿಸ್ ಆಯ್ಕೆ ಮಾಡಿಕೊಂಡಿರುವುದರಿಂದ, ಕೇಂದ್ರ ಸರ್ಕಾರದ ಯೋಜನೆಗಳ ಮೌಲ್ಯಮಾಪನವನ್ನು ಪಾಜೆಕ್ಟ್ ವರ್ಕ್ ಆಗಿ ತೆಗೆದು ಕೊಂಡಿದ್ದಾನೆ.

 ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಇಸ್ರೋ, ವಿಶ್ವದ ಹಲವಾರು ದೇಶಗಳ ಅಂಬಾಸಿಡರ್, ಹೈಕಮೀಷನರ್  ಜೊತೆಯೂ ಸಮಾಲೋಚನೆ ನಡೆಸಿ, ರಾಜ್ಯದ 31 ಜಿಲ್ಲೆಗಳ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಅಧ್ಯಯನ ಆರಂಭಿಸಲು ಸಿದ್ಧತೆ ನಡೆಸಿದ್ದಾನೆ. ಆತನ ಜೊತೆಗೆ ಶಕ್ತಿಪೀಠ ಫೌಂಡೇಷನ್ ಸಹಕರಿಸಲಿದೆ. ಶಕ್ತಿಪೀಠ ಡಾಟಾ ಪಾರ್ಕ್ ಸಹ ತಲೆ ಎತ್ತಲಿದೆ.

ತಾವೂ ಕೈಜೋಡಿಸ ಬಹುದು.

ನಿವೇನಂತಿರಾ?